ನವದೆಹಲಿ:ನಗರದ ಕಾಂಜಾವಾಲಾ ಸುಲ್ತಾನಪುರಿಯಲ್ಲಿ ಯುವತಿಗೆ ಕಾರು ಡಿಕ್ಕಿ ಹೊಡೆದು 12 ಕಿ ಮೀ ವರೆಗೂ ಎಳೆದೊಯ್ದ ಪ್ರಕರಣ ಮರೆ ಮಾಚುವ ಮುನ್ನವೇ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನವದೆಹಲಿಯಲ್ಲಿ ದಾಖಲಾಗಿ,ಸಾರ್ವಜನಿಕರನ್ನು ಕೆರಳಿಸಿದೆ. ಮಂಗಳವಾರ ತಡರಾತ್ರಿ ನೈಋತ್ಯ ದೆಹಲಿಯ ಐಐಟಿ ಬಳಿ ಸಂಭವಿಸಿದ ಹಿಟ್ ಅಂಡ್ ರನ್ ಪ್ರಕರಣ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿದ್ದು, ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಬ್ಬರನ್ನೂ ನಗರದ ಸಫ್ದರ್‌ಜಂಗ್ ಹಾಗೂ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಒಬ್ಬ ವಿದ್ಯಾರ್ಥಿಗೆ ತೀವ್ರ ಗಾಯಗಳಾಗಿದ್ದು, ಜೀವನ್ಮರಣ ಹೋರಾಟದಲ್ಲಿ ಬದುಕಿದ್ದಾನೆ.
ಅಶ್ರಫ್ ನವಾಜ್ ಖಾನ್ (30) ತೀವ್ರ ರಕ್ತಸ್ರಾವದಿಂದ ಬಳಲಿದ್ದ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದರೆ, ಇನ್ನೊಬ್ಬ ವಿದ್ಯಾರ್ಥಿ ಅಂಕುರ್ ಶುಕ್ಲಾ (29) ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ನೈಋತ್ಯ ಡಿಸಿಪಿ ಮನೋಜ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ನೈಋತ್ಯ ದೆಹಲಿಯ ಐಐಟಿ ಬಳಿ ನಡೆದ ಅಪಘಾತವನ್ನು ಖಚಿತಪಡಿಸಿದ್ದು, ಈ ಇಬ್ಬರೂ ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಇಬ್ಬರೂ ರಸ್ತೆ ದಾಟುತ್ತಿದ್ದರು. ವಿದ್ಯಾರ್ಥಿಗಳು ಐಐಟಿ ದೆಹಲಿಯಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ.
ಅಶ್ರಫ್ ನವಾಜ್ ಖಾನ್ (30) ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ವೇಳೆ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಅಂಕುರ್ ಶುಕ್ಲಾ (29) ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಕಾಲು ಮುರಿತವಾಗಿದೆ ಎಂದು ತಿಳಿಸಿದ್ದಾರೆ. ಇಬ್ಬರೂ ಎಸ್‌ಡಿಎ ಮಾರುಕಟ್ಟೆ ಬಳಿಯ ರೆಸ್ಟೋರೆಂಟ್‌ಗೆ ಹೋಗುತ್ತಿದ್ದರು. ಇಬ್ಬರು ರಸ್ತೆ ದಾಟುತ್ತಿದ್ದಾಗ ನೆಹರೂ ಪ್ಲೇಸ್ ಕಡೆಯಿಂದ ಬರುತ್ತಿದ್ದ ಅತಿ ವೇಗದ ಕಾರು ಡಿಕ್ಕಿ ಹೊಡೆದು, ಪರಾರಿಯಾಗಿದೆ. ಸ್ವಲ್ಪ ದೂರದಲ್ಲಿ ಆ ಕಾರನ್ನು ಅಪಘಾತದ ಸ್ಥಿತಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದರು. ಕಾರು ಚಾಲಕನನ್ನು ಗುರುತಿಸಲಾಗಿದೆ. ಆದರೆ, ಆತನನ್ನು ಇನ್ನೂ ಬಂಧಿಸಿಲ್ಲ ಎಂದು ನೈಋತ್ಯ ಡಿಸಿಪಿ ಮನೋಜ್ ತಿಳಿಸಿದ್ದಾರೆ.