ಸೂರತ್( ಗುಜರಾತ್): ಹಿಂದುತ್ವವು ಸೈದ್ಧಾಂತಿಕ ವ್ಯವಸ್ಥೆಯಾಗಿದ್ದು, ಅದು ಎಲ್ಲರನ್ನು ಒಟ್ಟುಗೂಡಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಹೇಳಿದರು.
ಗುಜರಾತ್ಗೆ ಮೂರು ದಿನಗಳ ಕಾಲ ಭೇಟಿ ನೀಡಿದ ಸಮಯದಲ್ಲಿ ಮಾತನಾಡಿದ ಅವರು, "ಹಿಂದುತ್ವವು ಎಲ್ಲರನ್ನು ಜೊತೆಯಲ್ಲಿ ಕರೆದೊಯ್ಯುವ ಜೊತೆಗೆ ಎಲ್ಲರನ್ನು ಒಟ್ಟುಗೂಡಿಸುತ್ತದೆ. ಈ ಮೂಲಕ ಪ್ರತಿಯೊಬ್ಬರು ಏಳಿಗೆ ಹೊಂದಲು ಸಹಕಾರಿ'' ಎಂದು ಹೇಳಿದರು.