ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ ಹೆಸರನ್ನು 'ಗೋಡ್ಸೆವಾದಿ ಕಾಂಗ್ರೆಸ್'​​ ಎಂದು ಬದಲಿಸಿ: ಸೋನಿಯಾಗೆ ಹಿಂದೂ ಮಹಾಸಭಾ ಪತ್ರ - ಬಾಬುಲಾಲ್ ಚೌರಾಸಿಯಾ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆ

ಹಿಂದೂ ಮಹಾಸಭಾ ಸದಸ್ಯರು ಕಾಂಗ್ರೆಸ್​ನ​ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದು, ಕಾಂಗ್ರೆಸ್​ ಪಕ್ಷದ ಹೆಸರನ್ನು 'ಗೋಡ್ಸೆವಾದಿ ಕಾಂಗ್ರೆಸ್'​​ ಎಂದು ಬದಲಿಸಲಿ ಅಂತಾ ಸೂಚಿಸಿದೆ.

ಬಾಬುಲ್ ಚೌರಾಸಿಯಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಬಾಬುಲ್ ಚೌರಾಸಿಯಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

By

Published : Feb 28, 2021, 8:52 PM IST

ಗ್ವಾಲಿಯರ್: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಹಿಂದೂ ಮಹಾಸಭಾ ಪತ್ರ ಬರೆದಿದೆ. ಕಾಂಗ್ರೆಸ್​ ಪಕ್ಷ ಜನರ ನಂಬಿಕೆಯನ್ನು ಕಳೆದುಕೊಂಡಿದೆ. ಹಾಗಾಗಿ ಪಕ್ಷದ ಹೆಸರನ್ನು 'ಗೋಡ್ಸೆವಾದಿ ಕಾಂಗ್ರೆಸ್'​​ ಎಂದು ಬದಲಿಸಲಿ ಮತ್ತು ಗೋಡ್ಸೆ ಅವರ ಚಿತ್ರವನ್ನು ಪಕ್ಷದ ಕಚೇರಿಗಳಲ್ಲಿ ಹಾಕಬೇಕೆಂದು ಪತ್ರದಲ್ಲಿ ಸೂಚಿಸಲಾಗಿದೆ.

ಸೋನಿಯಾಗೆ ಹಿಂದೂ ಮಹಾಸಭಾದ ಪತ್ರ

ಹಿಂದೂ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಜೈವೀರ್ ಭಾರದ್ವಾಜ್ ಮಾತನಾಡಿ, ಕಾಂಗ್ರೆಸ್ ಇನ್ಮುಂದೆ ಸಾಮಾನ್ಯ ಜನರ ಪಕ್ಷವಲ್ಲ. ಏಕೆಂದರೆ ಗೋಡ್ಸೆ ವಿಗ್ರಹವನ್ನು ತನ್ನ ಕಚೇರಿಯಲ್ಲಿ ಸ್ಥಾಪಿಸಿ ಅದನ್ನು 'ದೇವಾಲಯ'ವನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ ಅಖಿಲ ಭಾರತೀಯ ಹಿಂದೂ ಮಹಾಸಭಾ ನಾಯಕ ಬಾಬುಲಾಲ್ ಚೌರಾಸಿಯಾ ಕಾಂಗ್ರೆಸ್​ ಪಕ್ಷಕ್ಕೆ ಸೇರಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಸೇರಿದ್ದರಿಂದ ಚೌರಾಸಿಯಾ ಅವರ ಪತ್ನಿಯನ್ನು ಕೂಡ ಹಿಂದೂ ಮಹಾಸಭೆಯಿಂದ ಎರಡು ವರ್ಷಗಳ ಕಾಲ ವಜಾಗೊಳಿಸಲಾಗಿದೆ ಎಂದು ಜೈವೀರ್ ಹೇಳಿದರು.

ಬಾಬುಲಾಲ್ ಚೌರಾಸಿಯಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಧ್ಯಪ್ರದೇಶ ರಾಜಕೀಯದಲ್ಲಿ ಕೋಲಾಹಲ ಎದ್ದಿದೆ. ಈ ನಡುವೆ ಬಿಜೆಪಿ ಕೂಡ ಕಾಂಗ್ರೆಸ್​​ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ಸಮ್ಮುಖದಲ್ಲಿ ಚೌರಾಸಿಯಾ ಕಾಂಗ್ರೆಸ್ ಸೇರಿದ್ದಾರೆ.

ಓದಿ:ಬಾಹ್ಯಾಕಾಶಕ್ಕೆ ಹಾರಿದ ಡಿಆರ್‌ಡಿಒನ 'ಸಿಂಧು ನೇತ್ರ' ಉಪಗ್ರಹ: ಐಒಆರ್​ದಲ್ಲಿ ಮೇಲ್ವಿಚಾರಣೆ

"ಹಿಂದೂ ಮಹಾಸಭಾ ಈ ಘಟನೆಗೆ ಸಂಬಂಧಿಸಿದಂತೆ ನನ್ನ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದು, ನನ್ನನ್ನು ಆರೋಪಿಯಾಗಿ ಮಾಡಲು ಹೊರಟಿದೆ. ಕಾರ್ಯಕ್ರಮದಲ್ಲಿ ಭಾವಚಿತ್ರದಲ್ಲಿರುವ ಎಲ್ಲಾ ವ್ಯಕ್ತಿಗಳಿಗೆ ಪ್ರಾರ್ಥನೆ ಸಲ್ಲಿಸುವಂತೆ ನನಗೆ ಹೇಳಲಾಯಿತು. ಕೆಲವರು ನನಗೆ ಗೋಡ್ಸೆ ಕಡೆ ಕೈ ತೋರಿಸಿದ್ದು, ನನಗೆ ತಿಳಿಯದೇ ಅದಕ್ಕೆ ನೀರನ್ನು ಅರ್ಪಿಸಿದೆ. ಕಾಂಗ್ರೆಸ್​​ ಸದಸ್ಯ ಗೋಡ್ಸೆಯನ್ನು ಬೆಂಬಲಿಸುತ್ತಾರೆ ಎಂದು ಬಿಂಬಿಸಲು ಹೊರಟಿದ್ದಾರೆ." ಎಂದು ಚೌರಾಸಿಯಾ ಹೇಳಿದ್ದಾರೆ.

ABOUT THE AUTHOR

...view details