ಕರ್ನಾಟಕ

karnataka

ETV Bharat / bharat

ಕೌನ್ ಬನೇಗಾ ಕರೋಡ್​ಪತಿ: ಕೋಟಿ ರೂಪಾಯಿ ಗೆದ್ದು ಬೀಗಿದ ದಿವ್ಯಾಂಗ ಮಹಿಳೆ... ಹಬ್ಬ ಆಚರಿಸಿದ ಊರ ಮಂದಿ - latest agra news

ಕೌನ್ ಬನೇಗಾ ಕರೋಡ್​​​ಪತಿಯಲ್ಲಿ ಕೋಟಿ ಗೆಲ್ಲುವ ಕನಸು ಎಲ್ಲ ಸ್ಪರ್ಧಿಗಳಿಗೂ ನನಸಾಗಲ್ಲ. ಆದ್ರೆ ಸೀಸನ್ 13 ಆರಂಭವಾಗಿ ಕೆಲವೇ ವಾರದಲ್ಲಿ ಮಹಿಳೆಯೊಬ್ಬರು 1 ಕೋಟಿ ರೂಪಾಯಿ ಗೆದ್ದು ಸುದ್ದಿಯಾಗಿದ್ದಾರೆ.

himani-bundela-the-first-crorepati-of-kbc-13-celebrated-the-victory-like-this
ಕೌನ್ ಬನೇಗಾ ಕರೋಡ್​ಪತಿ: ಕೋಟಿ ರೂಪಾಯಿ ಗೆದ್ದು ಬೀಗಿದ ದಿವ್ಯಾಂಗ ಮಹಿಳೆ

By

Published : Sep 1, 2021, 10:51 AM IST

Updated : Sep 1, 2021, 11:22 AM IST

ಆಗ್ರಾ (ಉ.ಪ್ರ): ಕೌನ್ ಬನೇಗಾ ಕರೋಡ್​ಪತಿ ಸೀಸನ್ 13ರಲ್ಲಿ ಮಹಿಳೆಯೊಬ್ಬರು 1 ಕೋಟಿ ರೂಪಾಯಿ ತನ್ನದಾಗಿಸಿಕೊಂಡಿದ್ದಾರೆ. ಹಿಮಾನಿ ಬುಂದೇಲಾ ಎಂಬಾಕೆ 13ನೇ ಸೀಸನ್​ನ ಮೊದಲ ಕೋಟ್ಯಧಿಪತಿಯಾಗಿದ್ದಾರೆ.

ಇಲ್ಲಿನ ಗುರು ಗೋವಿಂದ ನಗರದ ರಾಜಪುರ ಪ್ರದೇಶದ ಹಿಮಾನಿ, 1 ಕೋಟಿ ರೂ. ಗೆದ್ದಿರುವ ಸಂಭ್ರಮದಲ್ಲಿ ಇಡೀ ಗ್ರಾಮ ಹಬ್ಬದಂತೆ ಆಚರಿಸಿದೆ. ಹಿಮಾನಿ ಕುಟುಂಬಸ್ಥರು ಹಾಗೂ ಸ್ನೇಹಿತರು ಮನೆ ಬಳಿ ಜಮಾಯಿಸಿ ಆಕೆಗೆ ಹಾರ ಹಾಕಿ ಸಂಭ್ರಮಿಸಿದ್ದಾರೆ.

1 ಕೋಟಿ ರೂಪಾಯಿ ಗೆದ್ದು ಬೀಗಿದ ಮಹಿಳೆ

ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೇ ಕುಟುಂಬಸ್ಥರು, ಸ್ನೇಹಿತರು ಸಖತ್ ಸ್ಟೆಪ್ಸ್​ ಹಾಕಿದ್ದಾರೆ. ನಿನ್ನೆ ರಾತ್ರಿ ಆಕೆಯ ಉಳಿದ ಎಪಿಸೋಡ್​ಗಳು ಪ್ರಸಾರವಾಗಿದ್ದು, ಆಕೆ ಮನೆಯಲ್ಲೇ ಕುಳಿತು ತನ್ನ ಎಪಿಸೋಡ್ ನೋಡಿದ್ದಾಳೆ. 15 ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ ಹಿಮಾನಿ 1 ಕೋಟಿ ರೂ. ಗೆದ್ದಕೊಂಡರು. ಆದರೆ 16ನೇ ಪ್ರಶ್ನೆಗೆ ಉತ್ತರಿಸದೇ ಆಟದಿಂದ ಹಿಂದೆ ಸರಿದರು.

1 ಕೋಟಿ ರೂಪಾಯಿ ಗೆದ್ದು ಬೀಗಿದ ಮಹಿಳೆ

16ನೇ ಪ್ರಶ್ನೆಯೂ 7 ಕೋಟಿ ರೂಪಾಯಿಗೆ ಕೇಳಲಾಗುತ್ತಿತ್ತು. ಒಂದು ವೇಳೆ ತಪ್ಪು ಉತ್ತರ ನೀಡಿದರೆ ಹಿಮಾನಿಗೆ ಕೇವಲ 3.20 ಲಕ್ಷ ರೂಪಾಯಿ ಮಾತ್ರ ಸಿಗುತ್ತಿತ್ತು. 16ನೇ ಪ್ರಶ್ನೆ ಡಾ.ಬಿಆರ್​ ಅಂಬೇಡ್ಕರ್ ಲಂಡನ್ ವಿಶ್ವವಿದ್ಯಾಲಯದಲ್ಲಿ ಮಂಡಿಸಿದ್ದ ಸಂಶೋಧನಾ ಪ್ರಬಂಧದ ಹೆಸರೇನು ಎಂಬುದಾಗಿತ್ತು.

ಆದರೆ, ಹಿಮಾನಿ ಗೊಂದಲದಲ್ಲಿದ್ದ ಕಾರಣ ಆಕೆ ಆಟ ಮುಂದುವರಿಸಲಿಲ್ಲ. ಆಕೆ 50 ಲಕ್ಷದ ಪ್ರಶ್ನೆ ವೇಳೆಗೆ ಎಲ್ಲ ಲೈಫ್​​​​ಲೈನ್​ಗಳನ್ನೂ ಕಳೆದುಕೊಂಡಿದ್ದರು.

Last Updated : Sep 1, 2021, 11:22 AM IST

ABOUT THE AUTHOR

...view details