ಡೆಹ್ರಾಡೂನ್(ಉತ್ತರಾಖಂಡ್):ಡೆಹ್ರಾಡೂನ್‌ನ ಕ್ಲೆಮೆಂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತ್ರಿವಳಿ ತಲಾಖ್ ಪ್ರಕರಣ ಬೆಳಕಿಗೆ ಬಂದಿದೆ. ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದರು. ಇದೀಗ ಪತ್ರದ ಮೂಲಕ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಆರೋಪಿಸಿ ತಹ್ರೀರ್ ಎಂಬುವವರು ದೂರು ನೀಡಿದ್ದಾರೆ.
ಪ್ರಕರಣದ ವಿವರ:ಮಾ.13, 2017 ರಂದು ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಪೌಂಟಾ ಸಾಹಿಬ್ ನಿವಾಸಿ ಮೆಹಬೂಬ್ ಅಲಿಯೊಂದಿಗೆ ತಹ್ರೀರ್ ಎಂಬುವವರು ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಈ ವೇಳೆ ಪತಿ ಮತ್ತು ಅವರ ಕುಟುಂಬ ಸದಸ್ಯರಿಗೆ ಅನೇಕ ಬೆಲೆ ಬಾಳುವ ಉಡುಗೊರೆಗಳನ್ನು ತಹ್ರೀರ್ ಕುಟುಂಬಸ್ಥರು ನೀಡಿದ್ದರಂತೆ.
ಆದರೆ, ಮದುವೆಯಾದ ನಂತರ ಕಡಿಮೆ ವರದಕ್ಷಿಣೆ ತಂದಿದ್ದೀಯಾ ಎಂದು ಅತ್ತೆ ಹೀಯಾಳಿಸುತ್ತಿದ್ದರು. ಅಲ್ಲದೇ ಪತಿ ಕೂಡ ತನಗೆ ಥಳಿಸುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ .