ಕರ್ನಾಟಕ

karnataka

ETV Bharat / bharat

ಪ್ರಜಾದೀಪ ಸಮಾವೇಶಕ್ಕೆ ಸಿಎಂ ಕೆಸಿಆರ್​​: ಟ್ರಾಫಿಕ್​ ಜಾಮ್​​ನಿಂದ ಪರದಾಡಿದ ವಾಹನ ಸವಾರರು - ಟ್ರಾಫಿಕ್​ ಜಾಮ್​​ನಲ್ಲಿ ಸಿಲುಕಿ ತೊಂದರೆ

ಮುನುಗೋಡಿನಲ್ಲಿ ಆಯೋಜನೆಗೊಂಡಿದ್ದ ಪ್ರಜಾದೀಪ ಸಭೆಯಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ತೆರಳುತ್ತಿದ್ದ ವೇಳೆ ಹೈದರಾಬಾದ್​ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುಮಾರು 400ಕ್ಕೂ ಅಧಿಕ ಕಾರುಗಳು ತೆರಳಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿದೆ. ವಾಹನ ಸವಾರರು ಗಂಟೆಗಟ್ಟಲೇ ಟ್ರಾಫಿಕ್‌ನಲ್ಲಿ ಸಿಲುಕಿ ತೊಂದರೆ ಅನುಭವಿಸಿದ್ದಾರೆ.

HEAVY TRAFFIC JAM IN HYDERABAD
HEAVY TRAFFIC JAM IN HYDERABAD

By

Published : Aug 20, 2022, 4:35 PM IST

Updated : Aug 20, 2022, 5:37 PM IST

ಹೈದರಾಬಾದ್​​(ತೆಲಂಗಾಣ):ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ವಿವಿಐಪಿ ವ್ಯಕ್ತಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ತೆರಳುವಾಗ ಝೀರೋ ಟ್ರಾಫಿಕ್​ ವ್ಯವಸ್ಥೆ ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ, ಇದು ಕೆಲವೊಮ್ಮೆ ಜನಸಾಮಾನ್ಯರ ಮೇಲೆ ಇನ್ನಿಲ್ಲದ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಸದ್ಯ ಅಂತಹ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ಅವರು ಸಮಾವೇಶಕ್ಕೆ ತೆರಳಲು ಹೋಗುತ್ತಿದ್ದ ವೇಳೆ ಜನಸಾಮಾನ್ಯರು, ವಾಹನ ಸವಾರರು ಗಂಟೆಗೂ ಹೆಚ್ಚು ಕಾಲ ತೊಂದರೆ ಅನುಭವಿಸಿದ್ದಾರೆ.

ಹೈದರಾಬಾದ್​​-ವಿಜಯವಾಡ ರಾಷ್ಟ್ರೀಯ ಹೆದ್ದಾರಿ ಮೂಲಕ ಕೆಸಿಆರ್​​ ಮುನುಗೋಡುದಲ್ಲಿ ಆಯೋಜನೆಗೊಂಡಿದ್ದ ಪ್ರಜಾದೀಪ ಸಮಾವೇಶಕ್ಕೆ ತೆರಳುತ್ತಿದ್ದರು. ಈ ವೇಳೆ ಪೊಲೀಸರು ಟ್ರಾಫಿಕ್​​ ನಿಯಂತ್ರಣ ಮಾಡಿದ್ದಾರೆ. ಸಿಎಂ ಬೆಂಗಾವಲು ವಾಹನ ಪಡೆ ತೆರಳುತ್ತಿದ್ದ ರಸ್ತೆಯಲ್ಲಿ ಹೋಗದಂತೆ ನಿರ್ಬಂಧ ಹೇರಿದ್ದಾರೆ. ಹೀಗಾಗಿ, ನಗರದ ಹಬ್ಸಿಗುಡನಿಂದ ಯಾದಾದ್ರಿ ಜಿಲ್ಲೆಯ ಚೌಟುಪ್ಪಲ್​​ವರೆಗೆ ಟ್ರಾಫಿಕ್​ ಜಾಮ್​ ಉಂಟಾಗಿದೆ.

ಟ್ರಾಫಿಕ್​ ಜಾಮ್​​ನಿಂದ ಪರದಾಡಿದ ವಾಹನ ಸವಾರರು

ಇದನ್ನೂ ಓದಿ:ಟಿಆರ್​ಎಸ್​ ರಾಷ್ಟ್ರೀಯ ಪಕ್ಷವಾದರೆ ತಪ್ಪೇನು? ಸಿಎಂ ಕೆಸಿಆರ್

ಮುಖ್ಯವಾಗಿ ಎಲ್ ಬಿ​​ ನಗರದಲ್ಲಿ ವಿದ್ಯುತ್​​ ತಂತಿ ತುಂಡಾಗಿ ಬಿದ್ದಿರುವ ಕಾರಣ ಸುಮಾರು 40 ನಿಮಿಷಗಳ ಕಾಲ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮಧ್ಯಾಹ್ನದ ಮೇಲೆ ಕಚೇರಿಗೆ ಹೋಗುವವವರು, ಕಚೇರಿಯಿಂದ ಮನೆಗೆ ಬರುವವರು ರಸ್ತೆ ದಟ್ಟಣಿಗೆ ಸಿಲುಕಿ​ ತೊಂದರೆ ಅನುಭವಿಸಿದ್ದಾರೆ.

Last Updated : Aug 20, 2022, 5:37 PM IST

ABOUT THE AUTHOR

...view details