ತಿರುವನಂತಪುರಂ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ (low-pressure formation) ಉಂಟಾಗಿರುವ ಹಿನ್ನೆಲೆ ಕೇರಳದಲ್ಲಿ ಶನಿವಾರ ಮತ್ತು ಭಾನುವಾರ ಭಾರಿ ಮಳೆಯಾಗುವ (Heavy rain) ಸಾಧ್ಯತೆಯಿದ್ದು, 6 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ (Meteorological department) ಆರೆಂಜ್ ಅಲರ್ಟ್ (Orange alert) ಘೋಷಣೆ ಮಾಡಿದೆ.
ತಮಿಳುನಾಡು ಜಲಾವೃತವಾಗಿದೆ. ಕೇರಳದಲ್ಲೂ ಸಹ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗ 40 ರಿಂದ 50 ಕಿ.ಮೀ ವರೆಗೆ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ(India Meteorological Department) ತಿಳಿಸಿದೆ.
ಇನ್ನು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಡುಕ್ಕಿ ಅಣೆಕಟ್ಟೆಯ ಶಟರ್‌ಗಳನ್ನು ಮತ್ತೊಮ್ಮೆ ತೆರೆಯುವ ಸಾಧ್ಯತೆ ಇದೆ. ಈಗಾಗಲೇ ಅಣೆಕಟ್ಟು ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಅಣೆಕಟ್ಟೆ ಸಮೀಪ ಹಳ್ಳಿಗಳಿಗೆ ಮತ್ತು ಪೆರಿಯಾರ್ ನದಿ ತೀರದಲ್ಲಿ ವಾಸಿಸುತ್ತಿರುವವರಿಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದಲ್ಲಿ ಗುಡುಗು ಸಹಿತ ಸಾಧಾರಣ ಮಳೆ:
ಇನ್ನು ಮುಂದಿನ ಕೆಲವು ಗಂಟೆಗಳಲ್ಲಿ ಒಡಿಶಾದ 9 ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಗಂಜಾಂ, ನಯಾಗಢ್, ಕಂಧಮಾಲ್, ಬೌಧ್, ಗಜಪತಿ, ಕಲಹಂಡಿ, ಪುರಿ, ಖುರ್ದಾ ಮತ್ತು ಕಿಯೋಂಜರ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುತ್ತಿದೆ. ಜೊತೆಗೆ ಕಂದಮಾಲ್, ಗಂಜಾಂ, ಗಜಪತಿ ಮತ್ತು ರಾಯ್ಗಡ ಜಿಲ್ಲೆಗಳಲ್ಲಿ ಯೆಲ್ಲೋ ಘೋಷಣೆ ಮಾಡಲಾಗಿದೆ.