ಕರ್ನಾಟಕ

karnataka

By

Published : Jul 22, 2021, 4:21 AM IST

Updated : Jul 22, 2021, 4:32 AM IST

ETV Bharat / bharat

ಮುಂಬೈನಲ್ಲಿ ಕುಂಭದ್ರೋಣ ಮಳೆ: ರೈಲ್ವೆ ಹಳಿ ಜಲಾವೃತ

ಮಹಾರಾಷ್ಟ್ರದಲ್ಲಿ ಮಳೆರಾಯನ ಆರ್ಭಟ. ಮುಂಬೈನಲ್ಲಿ ಕೆಲ ಕಡೆ ಲೋಕಲ್ ಟ್ರೇನ್ ಬಂದ್.

rain
rain

ಮುಂಬೈ:ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಮುಂಬೈನಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರಲ್ಲಿ ಕೆಲ ರೈಲ್ವೆ ಹಳಿ ಮುಳುಗಿದ ಹಿನ್ನೆಲೆ ಕೆಲವೆಡೆ ಲೋಕಲ್ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿದೆ.

ಇನ್ನು ಭಾರೀ ಮಳೆ ಹಿನ್ನೆಲೆಯಲ್ಲಿ ಉಂಬೆರಮಾಲಿ ಮತ್ತು ಕಾಸರ ರೈಲ್ವೆ ಸ್ಟೇಷನ್ ಮಧ್ಯೆ ಹಾಗೂ ಇಗತಪುರಿಯಾ-ಖರ್ದಿ ಮಧ್ಯೆ ಲೋಕಲ್ ರೈಲು ಸಂಚಾರ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಹಾಗೆಯೇ ಕಾಸರ್ ಘಾಟ್​ನಲ್ಲಿ ರೈಲು ಹಳಿ ಮೇಲೆ ನೀರು ನಿಂತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಕಾಸರ್ ಘಾಟ್​ನಲ್ಲಿ ಭೂ ಕುಸಿತವಾದ ಹಿನ್ನೆಲೆ ಮುಂಬೈ-ನಾಸಿಕ್ ಹೆದ್ದಾರಿಯನ್ನು ಬಂದ್ ಮಾಡಿ, ತೆರವು ಕಾರ್ಯಾಚರಣೆ ನಡೆದಿದೆ. ಇನ್ನು ಮುಂಬೈ-ಆಗ್ರಾ ಹೆದ್ದಾರಿ ಕೆರೆಯಂತಾಗಿದ್ದು, ಸವಾರರು ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.

ಭಾರೀ ಮಳೆಯಿಂದಾಗಿ ರೈಲ್ವೆ ಹಳಿಗಳು ಜಲಾವೃತವಾದ ಹಿನ್ನೆಲೆಯಲ್ಲಿ ಖರ್ದಿ ಮತ್ತು ಇಗತ್​ಪುರಿ ರೈಲ್ವೆ ನಿಲ್ದಾಣಗಳ ಮಧ್ಯೆ ಅಮರಾವತಿ ಎಕ್ಸ್​ಪ್ರೆಸ್ ರೈಲು ಸಿಲುಕಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದೆ.

Last Updated : Jul 22, 2021, 4:32 AM IST

ABOUT THE AUTHOR

...view details