ಕರ್ನಾಟಕ

karnataka

ETV Bharat / bharat

ಕೋವಿಡ್​​ ಲಸಿಕೆ ನೀಡುವಾಗ 2ನೇ ಡೋಸ್​ನ ಫಲಾನುಭವಿಗಳಿಗೆ ಆದ್ಯತೆ ನೀಡಿ ಎಂದ ಆರೋಗ್ಯ ಸಚಿವಾಲಯ - 2ನೇ ಡೋಸ್​ನ ಫಲಾನುಭವಿಗಳು

ಕೋವಿಡ್​​ ಲಸಿಕೆ ನೀಡುವಾಗ ಎರಡನೇ ಡೋಸ್​ನ ಫಲಾನುಭವಿಗಳಿಗೆ ಆದ್ಯತೆ ನೀಡಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆರತಿ ಅಹುಜಾ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ರು. ಈವರೆಗೆ ಎಲ್ಲಾ ವಿಭಾಗಗಳಲ್ಲಿ ಒಟ್ಟು 16.50 ಕೋಟಿ ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Arti Ahuja
Arti Ahuja

By

Published : May 7, 2021, 10:42 PM IST

ನವದೆಹಲಿ: ಕೋವಿಡ್​ ಲಸಿಕೆಯ ಎರಡನೇ ಡೋಸ್ ಅನ್ನು ನೀಡುವಾಗ ಈಗಾಗಲೇ ಮೊದಲ ಡೋಸ್​ ಪಡೆದ​​ ಫಲಾನುಭವಿಗಳಿಗೆ ಆದ್ಯತೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಿಗೆ ಶುಕ್ರವಾರ ಕೋರಿದೆ.

"ಕೇಂದ್ರ ಆರೋಗ್ಯ ಸಚಿವಾಲಯದ ಕಡೆಯಿಂದ, ನಾವು ಎಲ್ಲ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಎರಡನೇ ಡೋಸ್​​ನ ಫಲಾನುಭವಿಗಳಿಗೆ ಆದ್ಯತೆ ನೀಡುವಂತೆ ಮತ್ತು ಶಿಫಾರಸು ಮಾಡಿ, ವ್ಯಾಕ್ಸಿನೇಷನ್ ವೇಳಾಪಟ್ಟಿಯನ್ನು ಸಕಾಲಿಕವಾಗಿ ಪೂರ್ಣಗೊಳಿಸುವಂತೆ ಕೋರಿದ್ದೇವೆ" ಎಂದು ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಆರತಿ ಅಹುಜಾ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಾವು ಪಡೆದ ಲಸಿಕೆಗಳನ್ನು 'ಭಾರತ ಸರ್ಕಾರ ಚಾನೆಲ್' ಮೂಲಕ 70:30 ಅನುಪಾತದಲ್ಲಿ ಕ್ರಮವಾಗಿ ಎರಡನೇ ಡೋಸ್ ಮತ್ತು ಮೊದಲ ಡೋಸ್​ ಬಳಸಬೇಕೆಂದು ಸಚಿವಾಲಯ ಒತ್ತಾಯಿಸಿದೆ. "ಎರಡನೆಯದಾಗಿ, ಲಸಿಕೆಗಳ ಸರಬರಾಜನ್ನು ಭಾರತ ಸರ್ಕಾರದ ಚಾನೆಲ್ ಮೂಲಕ 70:30 ಅನುಪಾತದಲ್ಲಿ ಕ್ರಮವಾಗಿ ಎರಡನೇ ಡೋಸ್ ಮತ್ತು ಮೊದಲ ಡೋಸ್‌ಗೆ ಬಳಸಿಕೊಳ್ಳಿ ಮತ್ತು ವ್ಯಾಕ್ಸಿನೇಷನ್ ಡ್ರೈವ್ ವ್ಯಾಪ್ತಿಯ ಬಗ್ಗೆ ನಿಯಮಿತವಾಗಿ ವಿಮರ್ಶೆ ಮಾಡಿ" ಎಂದು ಅಹುಜಾ ಹೇಳಿದರು. ಈವರೆಗೆ ಎಲ್ಲಾ ವಿಭಾಗಗಳಲ್ಲಿ ಒಟ್ಟು 16.50 ಕೋಟಿ ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

"ಹೆಲ್ತ್‌ಕೇರ್ ವರ್ಕರ್ಸ್​ಗಳಿಗೆ, ಇದುವರೆಗೆ, ಮೊದಲ ಡೋಸ್‌ಗೆ 0.95 ಕೋಟಿ ಡೋಸ್‌ಗಳನ್ನು ಮತ್ತು ಎರಡನೇ ಡೋಸ್‌ನಂತೆ 0.64 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಅದೇ ರೀತಿ, ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್‌ಗೆ 1.38 ಕೋಟಿ ಡೋಸ್ ಮತ್ತು 0.75 ಕೋಟಿ ಡೋಸ್ ಎರಡನೇ ಡೋಸ್, "ಹೆಚ್ಚುವರಿ ಕಾರ್ಯದರ್ಶಿ ಹೇಳಿದರು.

45 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಜನರು, ಮೊದಲ ಡೋಸ್‌ಗೆ ಸುಮಾರು 10.76 ಡೋಸ್‌ಗಳನ್ನು ನೀಡಲಾಗಿದ್ದರೆ, 1.90 ಕೋಟಿ ಡೋಸ್‌ಗಳನ್ನು ಎರಡನೇ ಡೋಸ್‌ ಆಗಿ ನೀಡಲಾಗಿದೆ. 18-44 ವಯಸ್ಸಿನ 11.81 ಲಕ್ಷ ಜನರಿಗೆ ಮೊದಲ ಡೋಸ್ ನೀಡಲಾಗಿದೆ. ಇಲ್ಲಿಯವರೆಗೆ, ಎಲ್ಲಾ ವಿಭಾಗಗಳಲ್ಲಿ ಒಟ್ಟು 16.50 ಕೋಟಿ ಲಸಿಕೆಗಳನ್ನ ನೀಡಲಾಗಿದೆ ಎಂದು ಅವರು ಹೇಳಿದ್ರು.

ABOUT THE AUTHOR

...view details