ಕರ್ನಾಟಕ

karnataka

ETV Bharat / bharat

ಗರ್ಭಿಣಿಯರು ಕೋವಿಡ್‌ ಲಸಿಕೆ ಬಗ್ಗೆ ನಿಶ್ಚಿಂತೆಯಿಂದಿರಿ: ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿ ಹೀಗಿದೆ.. - ಆರೋಗ್ಯ ಸಚಿವಾಲಯ

ಮಕ್ಕಳನ್ನು ಹೊರತುಪಡಿಸಿ ಎಲ್ಲಾ ವಯೋಮಾನದವರಿಗೆ ಕೋವಿಡ್‌ ಲಸಿಕೆ ನೀಡಲಾಗುತ್ತಿದ್ದು, ಗರ್ಭಿಣಿಯರಿಗೆ ಕೋವಿಡ್ -19 ವ್ಯಾಕ್ಸಿನ್‌ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ನಿನ್ನೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Health Ministry issues guidelines for administering COVID-19 vaccines to pregnant women
ಗರ್ಭಿಣಿಯರಿಗೆ ಕೋವಿಡ್‌ ಲಸಿಕೆ ಸುರಕ್ಷಿತ; ಆರೋಗ್ಯ ಸಚಿವಾಲಯದಿಂದ ಮಾರ್ಗ ಸೂಚಿ ಬಿಡುಗಡೆ

By

Published : Jun 29, 2021, 7:01 AM IST

ನವದಹೆಲಿ: ಗರ್ಭಿಣಿಯರಿಗೆ ಕೋವಿಡ್ -19 ಲಸಿಕೆ ನೀಡುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಗರ್ಭಧಾರಣೆಯು ಸೋಂಕಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಸರ್ಕಾರ ಸಚಿವಾಲಯ ಸ್ಪಷ್ಟಪಡಿಸಿದೆ.

ಬಹುತೇಕ ಗರ್ಭಿಣಿಯರು ರೋಗದ ಲಕ್ಷಣ ರಹಿತರಾಗಿರುತ್ತಾರೆ ಅಥವಾ ಸೌಮ್ಯವಾದ ಸೋಂಕು ಲಕ್ಷಣಗಳನ್ನು ಹೊಂದಿರುತ್ತಾರೆ. ಆದರೆ ಅವರ ಆರೋಗ್ಯವು ಶೀಘ್ರವಾಗಿ ಹದಗೆಡಬಹುದು ಮತ್ತು ಭ್ರೂಣದ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಕೋವಿಡ್‌-19 ಲಸಿಕೆ ಪಡೆದುಕೊಳ್ಳುವುದು ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಗರ್ಭಿಣಿಯರಿಗೆ ಕೋವಿಡ್-19 ಲಸಿಕೆಗಳ ಸುರಕ್ಷಿತ

ಸದ್ಯ ಲಭ್ಯವಿರುವ ಕೋವಿಡ್ -19 ಲಸಿಕೆಗಳು ಸುರಕ್ಷಿತವಾಗಿದೆ. ವ್ಯಾಕ್ಸಿನೇಷನ್ ಗರ್ಭಿಣಿಯರನ್ನು ಸೋಂಕಿನ ಅನಾರೋಗ್ಯ ಅಥವಾ ರೋಗದಿಂದ ರಕ್ಷಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ. ಎಲ್ಲಾ ರೀತಿಯ ಔಷಧಿಯಂತೆ, ಲಸಿಕೆಯು ಸಾಮಾನ್ಯವಾಗಿ ಅಡ್ಡಪರಿಣಾಮಗಳನ್ನು ಬೀರುತ್ತದೆ. ಲಸಿಕೆ ಚುಚ್ಚುಮದ್ದನ್ನು ಪಡೆದ ನಂತರ, ಲಘು ಜ್ವರ, ಇಂಜೆಕ್ಷನ್ ಚುಚ್ಚಿದ ಭಾಗದಲ್ಲಿ ನೋವು ಅಥವಾ 1 ರಿಂದ 3 ದಿನಗಳವರೆಗೆ ಅನಾರೋಗ್ಯ ಕಾಡಬಹುದು.

ಆದರೆ ಲಸಿಕೆಯು ಭ್ರೂಣ ಮತ್ತು ಮಗುವಿನ ಮೇಲೆ ದೀರ್ಘಕಾಲೀನ ಪ್ರತಿಕೂಲ ಪರಿಣಾಮಗಳು ಮತ್ತು ಸುರಕ್ಷತೆ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಬಹಳ ವಿರಳವಾಗಿ (100,000-500,000 ರಲ್ಲಿ ಒಬ್ಬರಿಗೆ), ಗರ್ಭಿಣಿಯರು ಕೋವಿಡ್ -19 ವ್ಯಾಕ್ಸಿನೇಷನ್ ಪಡೆದ 20 ದಿನಗಳಲ್ಲಿ ಕೆಲವು ರೋಗಲಕ್ಷಣಗಳು ಕಂಡುಬರುತ್ತದೆ. ಈ ಬಗ್ಗೆ ತಕ್ಷಣಕ್ಕೆ ಗಮನ ಹರಿಸಬೇಕಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಒಂದಲ್ಲ, ಎರಡಲ್ಲ, ಮಹಿಳೆಗೆ ಒಂದೇ ದಿನ ಮೂರು ಸಲ ಕೋವಿಡ್​ ವ್ಯಾಕ್ಸಿನ್!

ಕೋವಿಡ್ -19 ನಿಂದ ತಾಯಂದಿರ ಚೇತರಿಕೆ ದರ ಹೀಗಿದೆ..

ಗರ್ಭಿಣಿಯರಿಗೆ ವೈರಸ್ ಸೋಂಕು ತಗುಲಿದರೆ, ಅವರಲ್ಲಿ 90 ಪ್ರತಿಶತದಷ್ಟು ಜನರು ಯಾವುದೇ ಆಸ್ಪತ್ರೆಗೆ ದಾಖಲಾಗದೆ ಚೇತರಿಸಿಕೊಳ್ಳುತ್ತಾರೆ. ಸೋಂಕಿನ ಜೊತೆಗೆ ಇತರೆ ಗಂಭೀರ ಸ್ವರೂಪದ ರೋಗದ ಲಕ್ಷಣಗಳು ಇದ್ದರೆ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ. ಇತರೆ ಗರ್ಭಿಣಿಯರಂತೆ ಸೋಂಕಿತೆಗೂ ಇತರೆ ಕಾಯಿಲೆಗಳು ಇದ್ದರೆ ಆಗ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. 35 ವರ್ಷ ಮೇಲ್ಪಟ್ಟ ಕೋವಿಡ್‌-19 ಸೋಂಕಿತೆಯರಿಗೆ ಅಧಿಕ ರಕ್ತದೊತ್ತಡ, ಬೊಜ್ಜು, ಡಯಾಬಿಟೀಸ್‌ ಸೇರಿದಂತೆ ರೋಗಗಳು ಬರುವ ಸಾಧ್ಯತೆ ಇದೆ.

ಸೋಂಕಿತ ಗರ್ಭಿಣಿಯರಿಗೆ ಜನಿಸುವ ನವಜಾತ ಶಿಶುಗಳು ಶೇಕಡಾ 90 ರಷ್ಟು ಸುಸ್ಥಿತಿಯಲ್ಲಿರುತ್ತವೆ. ಕೆಲವೇ ಕೆಲವು ಪ್ರಕರಣಗಳಲ್ಲಿ ಅವಧಿಗೂ ಮೊದಲೇ ಹೆರಿಗೆಯಾಗುತ್ತದೆ. ಆ ಮಗುವಿನ ತೂಕ 2.5 ಕೆಜಿಗಿಂತ ಕಡಿಮೆ ಇರುತ್ತದೆ. ಅತಿ ವಿರಳಾತಿ ವಿರಳ ಪ್ರಕರಣಗಳಲ್ಲಿ ಮಗು ಮೃತಪಡುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ABOUT THE AUTHOR

...view details