ಕರ್ನಾಟಕ

karnataka

ETV Bharat / bharat

ಚೋಕ್ಸಿ ದೊಡ್ಡ ಅಪರಾಧ ಮಾಡಿದ್ದಾರೆ, ನಮ್ಮ ಪ್ರಜೆಯನ್ನ ಹಸ್ತಾಂತರಿಸಿ: ಡೊಮಿನಿಕಾಗೆ ಭಾರತ ಒತ್ತಾಯ - ಭಾರತೀಯ ಮೂಲದ ವಜ್ರೋದ್ಯಮಿ ಮೆಹುಲ್ ಚೋಕ್ಸಿ

ವಂಚನೆ ಮಾಡಿ ಕಾನೂನು ಶಿಕ್ಷೆಯಿಂದ ತಪ್ಪಿಸಿಕೊಂಡು ಪರಾರಿಯಾಗಲು ಮೆಹುಲ್ ಚೋಕ್ಸಿ ಹೊಸ ಪೌರತ್ವ ಪಡೆದಿದ್ದಾರಷ್ಟೇ. ಅವರು ನಮ್ಮ ದೇಶದ ಪ್ರಜೆ, ನಮಗೆ ಹಸ್ತಾಂತರಿಸಿ ಎಂದು ಡೊಮಿನಿಕಾ ಸರ್ಕಾರಕ್ಕೆ ಭಾರತ ಕೇಳಿದೆ.

By

Published : May 30, 2021, 1:26 PM IST

ನವದೆಹಲಿ: ಡೊಮಿನಿಕಾದಲ್ಲಿ ಪೊಲೀಸ್​ ಕಸ್ಟಡಿಯಲ್ಲಿರುವ ಭಾರತೀಯ ಉದ್ಯಮಿ ಮೆಹುಲ್ ಚೋಕ್ಸಿಯನ್ನು ಹಸ್ತಾಂತರಿಸುವಂತೆ ಡೊಮಿನಿಕಾ ಸರ್ಕಾರಕ್ಕೆ ಭಾರತ ಸರ್ಕಾರ ಒತ್ತಾಯಿಸಿದೆ.

ಚೋಕ್ಸಿ ಮಾಡಿರುವುದು ದೊಡ್ಡ ಅಪರಾಧ, ಅಲ್ಲದೇ ಅವರು ನಮ್ಮ ದೇಶದ ಪ್ರಜೆ. ವಂಚನೆ ಮಾಡಿ ಕಾನೂನು ಶಿಕ್ಷೆಯಿಂದ ತಪ್ಪಿಸಿಕೊಂಡು ಪರಾರಿಯಾಗಲು ಆಂಟಿಗುವಾ ದೇಶದ ಹೊಸ ಪೌರತ್ವ ಪಡೆದಿದ್ದಾರಷ್ಟೇ. ಹೀಗಾಗಿ ಅವರನ್ನು ಭಾರತೀಯ ಪ್ರಜೆಯೆಂದು ಪರಿಗಣಿಸಿ ನಮ್ಮ ಅಧಿಕಾರಿಗಳಿಗೆ ಹಸ್ತಾಂತರಿಸಬೇಕೆಂದು ಎಂದು ಭಾರತ ತಿಳಿಸಿದೆ.

ಇತ್ತ ಆಂಟಿಗುವಾ ಕೂಡ ಡೊಮಿನಿಕಾಗೆ ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದೆ. ಆದರೆ ಈ ವಿಚಾರದಲ್ಲಿ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದ ಡೊಮಿನಿಕಾ, ಎರಡು ದಿನಗಳ ಹಿಂದೆ ಚೋಕ್ಸಿಯನ್ನು ಆಂಟಿಗುವಾಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಿಕೆ ನೀಡಿತ್ತು.

ಚೋಕ್ಸಿಯನ್ನು ಕರೆದೊಯ್ಯಲು ಬಂತಾ ವಿಮಾನ?

ಇನ್ನೊಂದೆಡೆ ಡೊಮಿನಿಕಾ ವಿಮಾನ ನಿಲ್ದಾಣದಲ್ಲಿ ಭಾರತದಿಂದ ಖಾಸಗಿ ಜೆಟ್ ಬಂದಿದೆ ಎಂದು ಆಂಟಿಗುವಾ-ಬಾರ್ಬುಡಾ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಖಚಿತಪಡಿಸಿದ್ದಾರೆ. ಇವರ ಹೇಳಿಕೆ ಬಳಿಕ ಡೊಮಿನಿಕನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜೆಟ್‌ನ ಫೋಟೋವನ್ನ ಆಂಟಿಗುವಾ ನ್ಯೂಸ್ ರೂಂ ತನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, "ಈ ವಿಮಾನವು ಡೊಮಿನಿಕಾಗೆ ಯಾರನ್ನು ಕರೆತಂದಿತು ಮತ್ತು ಡೊಮಿನಿಕಾದಿಂದ ಇದರಲ್ಲಿ ಯಾರು ಹೊರಡಲಿದ್ದಾರೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ" ಎಂದು ಹೇಳೀದೆ.

ಇದನ್ನೂ ಓದಿ:ಕಂಬಿ ಹಿಂದೆ ವಜ್ರೋದ್ಯಮಿ.. ಗಾಯಗೊಂಡ ಮೆಹುಲ್ ಚೋಕ್ಸಿ ಫೋಟೋಗಳನ್ನು ನೋಡಿ

ಪ್ರಕರಣ ಹಿನ್ನೆಲೆ

ಭಾರತೀಯ ಮೂಲದ ವಜ್ರೋದ್ಯಮಿಯಾಗಿರುವ ಮೆಹುಲ್ ಚೋಕ್ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಗೆ 3,500 ಕೋಟಿ ರೂ. ವಂಚಿಸಿ ಪರಾರಿಯಾಗಿ ಆಂಟಿಗುವಾ-ಬಾರ್ಬುಡಾದಲ್ಲಿ ತಲೆಮರೆಸಿಕೊಂಡಿದ್ದರು. ಆದರೆ ಆಂಟಿಗುವಾದಿಂದಲೂ ನಾಪತ್ತೆಯಾಗಿದ್ದ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಪೊಲೀಸರು ಬಂಧಿಸಿದ್ದರು. ಡೊಮಿನಿಕಾ ನ್ಯಾಯಾಲಯದಲ್ಲಿ ಚೋಕ್ಸಿ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಇವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಕೋರ್ಟ್​ ತಡೆಯೊಡ್ಡಿದೆ. ಜೂನ್ 2ರಂದು ಈ ಬಗ್ಗೆ ವಿಚಾರಣೆ ನಡೆಯಲಿದೆ. ಪ್ರಸ್ತುತ ಚೋಕ್ಸಿ ಡೊಮಿನಿಕಾ ಪೊಲೀಸ್​ ಕಸ್ಟಡಿಯಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.

ಇನ್ನು ಇಂದು ಉದ್ಯಮಿ ಮೆಹುಲ್ ಚೋಕ್ಸಿ ಗಾಯಗೊಂಡು ಪೊಲೀಸ್​ ಕಸ್ಟಡಿಯಲ್ಲಿ ಕಂಬಿ ಹಿಂದೆ ನಿಂತಿರುವ ಫೋಟೋಗಳನ್ನು ಆಂಟಿಗುವಾ ನ್ಯೂಸ್ ರೂಮ್ ಒದಗಿಸಿದೆ. ಈ ಫೋಟೋಗಳಲ್ಲಿ ಮೆಹುಲ್ ಚೋಕ್ಸಿಯ ಎಡಗಣ್ಣಿಗೆ, ಕೈಗಳಿಗೆ ಗಾಯಗಳಾಗಿರುವುದನ್ನು ಕಂಡು ಬಂದಿದೆ.

ABOUT THE AUTHOR

...view details