ನವದೆಹಲಿ:ಕೋವಿಶೀಲ್ಡ್ ಕಚ್ಚಾ ವಸ್ತು ತಕ್ಷಣವೇ ಭಾರತಕ್ಕೆ ಕಳುಹಿಸಲು ಈಗಾಗಲೇ ಅಮೆರಿಕ ಒಪ್ಪಿಕೊಂಡಿದ್ದು, ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜೊತೆ ಫೋನ್ ಮೂಲಕ ಚರ್ಚೆ ನಡೆಸಿದರು.
ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಮಾಹಿತಿ ಹಂಚಿಕೊಂಡಿದ್ದಾರೆ. ಬೈಡನ್ ಅವರೊಂದಿಗೆ ಫಲಪ್ರದವಾದ ಸಂಭಾಷಣೆ ನಡೆಸಿದ್ದು, ಎರಡು ದೇಶಗಳು ಅನುಭವಿಸುತ್ತಿರುವ ಕೋವಿಡ್ ಪರಿಸ್ಥಿತಿ ವಿಚಾರವಾಗಿ ವಿವರವಾಗಿ ಚರ್ಚಿಸಿದ್ದೇವೆ. ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ನೀಡುತ್ತಿರುವ ಬೆಂಬಲಕ್ಕಾಗಿ ನಾನು ಅಧ್ಯಕ್ಷ ಬೈಡನ್ ಅವರಿಗೆ ಧನ್ಯವಾದ ಅರ್ಪಿಸಿದ್ದೇನೆ ಎಂದಿದ್ದಾರೆ.