ಸೂರತ್(ಗುಜರಾತ್):ಇಲ್ಲಿನ ರೆಸ್ಟೋರೆಂಟ್ವೊಂದರಲ್ಲಿ ಟಾಯ್ ಟ್ರೈನ್‌ಗಳು ಡೈನಿಂಗ್ ಟೇಬಲ್‌ಗಳ ಮೂಲಕ ಗ್ರಾಹಕರಿಗೆ ಆಹಾರ ನೀಡುತ್ತವೆ. "ಟ್ರೇನಿಯನ್ ಎಕ್ಸ್‌ಪ್ರೆಸ್" ಎಂಬ ಈ ಟ್ರೈನ್ ಗ್ರಾಹಕ ಮೆಚ್ಚುಗೆ ಗಳಿಸಿದೆ. ಜನರ ಸಹಾಯವಿಲ್ಲದೇ ಈ ರೈಲು ಅಡುಗೆ ಮನೆಯಿಂದ ನೇರವಾಗಿ ಡೈನಿಂಗ್ ಟೇಬಲ್‌ಗೆ ಬರುತ್ತದೆ.
ರೈಲಿನ ವಿವಿಧ ಕಂಪಾರ್ಟ್ಮೆಂಟ್ಗಳಲ್ಲಿ ಬ್ರೆಡ್, ಅನ್ನ, ಕರಿ, ಪಾಪಡ್ ಸೇರಿದಂತೆ ವಿವಿಧ ಆಹಾರಗಳನ್ನು ಇಡಲಾಗುತ್ತದೆ. ಇವುಗಳನ್ನೆಲ್ಲಾ ಹೊತ್ತು ಸಾಗುವ ರೈಲು ಗ್ರಾಹಕರಿರುವ ಡೈನಿಂಗ್ ಟೇಬಲ್‌ಗೆ ಬರುತ್ತದೆ. ರೆಸ್ಟೋರೆಂಟ್ನ ವಿವಿಧ ಡೈನಿಂಗ್ ಟೇಬಲ್‌ಗಳಿಗೆ ಸೂರತ್ ನಗರದ ವಿವಿಧ ರೈಲು ನಿಲ್ದಾಣಗಳ ಹೆಸರನ್ನಿಡಲಾಗಿದೆ. ಹೀಗಾಗಿ ರೆಸ್ಟೋರೆಂಟ್ ಗ್ರಾಹಕರಿಗೆ ಸಂಪೂರ್ಣ ರೈಲು ನಿಲ್ದಾಣದ ವೈಬ್ ಒದಗಿಸುತ್ತಿದೆ.