ಕರ್ನಾಟಕ

karnataka

ETV Bharat / bharat

LIVE: ಚುನಾವಣೆ ಫಲಿತಾಂಶ: ಗುಜರಾತ್​ನಲ್ಲಿ ಮತ್ತೆ ಅರಳಿದ ಕಮಲ - ಹಿಮಾಚಲದಲ್ಲಿ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ - HP Assembly Election Result 2022 Live Counting

gujarat and himachal pradesh assembly election result
ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ

By

Published : Dec 8, 2022, 6:58 AM IST

Updated : Dec 8, 2022, 2:31 PM IST

14:30 December 08

ಗುಜರಾತ್‌ನಲ್ಲಿ ಕಳೆದ 2 ದಶಕಗಳಲ್ಲಿ ಮೋದಿ ಜಿ ನಾಯಕತ್ವದಲ್ಲಿ ಬಿಜೆಪಿಯು ಅಭಿವೃದ್ಧಿಯ ಕೆಲಸ ಮಾಡಿದೆ. ಹೀಗಾಗಿ, ಇಂದು ಗುಜರಾತ್‌ನ ಜನರು ಬಿಜೆಪಿಯನ್ನು ಆಶೀರ್ವದಿಸಿದ್ದಾರೆ ಅಂತಾ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

14:18 December 08

ಹಿಮಾಚಲ ಚುನಾವಣಾ ಫಲಿತಾಂಶ 2022:

ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ

'ಭೂಪಿಂದರ್ ಸಿಂಗ್ ಹೂಡಾ ಈಗಾಗಲೇ ಚಂಡೀಗಢದಲ್ಲಿದ್ದಾರೆ. ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್ ಮತ್ತು ನಾನು ಚಂಡೀಗಢಕ್ಕೆ ಹೋಗಲಿದ್ದೇವೆ. ಶಾಸಕರನ್ನು ಶಿಮ್ಲಾ ಅಥವಾ ಚಂಡೀಗಢಕ್ಕೆ ಕರೆಸಬೇಕೆ ಎಂದು ಸಂಜೆಯೊಳಗೆ ನಿರ್ಧರಿಸುವುದಾಗಿ' ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

14:11 December 08

  • ಹಿಮಾಚಲದಲ್ಲಿ 40 ಸ್ಥಾನ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್
  • ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಕಮಾಲ್​

14:05 December 08

14:02 December 08

'ಗುಜರಾತ್ ಚುನಾವಣೆಯ ಫಲಿತಾಂಶಗಳು ಸ್ಪಷ್ಟವಾಗಿದೆ. ಗುಜರಾತ್‌ನಲ್ಲಿ ಅಭಿವೃದ್ಧಿಯ ಪಯಣವನ್ನು ಮತ್ತಷ್ಟು ಮುಂದುವರಿಸಲು ಜನರು ಮನಸ್ಸು ಮಾಡಿದ್ದಾರೆ. ನಾವು ಜನರ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಸಾರ್ವಜನಿಕ ಸೇವೆಗೆ ಬದ್ಧ'- ಗುಜರಾತ್ ಸಿಎಂ ಭೂಪೇಂದ್ರ ಪಟೇಲ್

13:54 December 08

ಗುಜರಾತ್​, ಹಿಮಾಚಲ ಪ್ರದೇಶದಲ್ಲಿ ಪಕ್ಷಗಳ ಚುನಾವಣಾ ಫಲಿತಾಂಶ ಹೀಗಿದೆ:

ಚುನಾವಣಾ ಫಲಿತಾಂಶ

13:50 December 08

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ

ದೆಹಲಿ ಕಚೇರಿಯಲ್ಲಿ ಪಟಾಕಿ ಸಿಡಿಸಿ ಕೈ ಕಾರ್ಯಕರ್ತರ ಸಂಭ್ರಮಾಚರಣೆ

ರಾಜ್ಯದಲ್ಲಿ ಮುಂದುವರೆದ ಮತ ಎಣಿಕೆ ಕಾರ್ಯ

13:45 December 08

  • ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್​ಗೆ ಭರ್ಜರಿ ಗೆಲುವು
  • ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್ 1.16 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
  • ಸಿಎಂ ಭೂಪೇಂದ್ರ ಪಟೇಲ್ ಅವರ ನೇತೃತ್ವದ ಹೊಸ ಸಂಪುಟದ ಪ್ರಮಾಣವಚನ ಸ್ವೀಕರಿಸುವ ಸಮಾರಂಭ ಡಿಸೆಂಬರ್ 11 ಅಥವಾ 12 ರಂದು ಹಮ್ಮಿಕೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

13:43 December 08

  • ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ
  • ಜಯಭೇರಿ ಬಾರಿಸಿದ ಬಿಜೆಪಿಯ ಸುಖರಾಮ್ ಚೌಧರಿ
  • ಪೌಂಟಾ ಸಾಹಿಬ್‌ ಕ್ಷೇತ್ರದಲ್ಲಿ ಸುಖರಾಮ್ ಚೌಧರಿಗೆ ಗೆಲುವು
  • 8596 ಮತಗಳ ಅಂತರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ
  • ಅರ್ಕಿ ವಿಧಾನಸಭಾ ಕ್ಷೇತ್ರದಲ್ಲಿ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯ
  • ಕಾಂಗ್ರೆಸ್​ ಪಕ್ಷದ ಸಂಜಯ್ ಅವಸ್ತಿ 3,961 ಮತಗಳಿಂದ ಮುನ್ನಡೆ

13:37 December 08

  • ಮೈನ್‌ಪುರಿ ಲೋಕಸಭಾ ಉಪಚುನಾವಣೆ ಫಲಿತಾಂಶ
  • ಮುನ್ನಡೆ ಕಾಯ್ದುಕೊಂಡ ಡಿಂಪಲ್ ಯಾದವ್
  • ಸೈಫೈನಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ
  • ಪ್ರಸ್ತುತ ಬಿಜೆಪಿಯ ರಘುರಾಜ್ ಸಿಂಗ್ ಶಾಕ್ಯಾ ಅವರಿಗಿಂತ 1,69,248 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.

12:59 December 08

12:57 December 08

ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ

ದುರ್ಗ್​ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು

ಬಿಜೆಪಿ ಅಭ್ಯರ್ಥಿ ಪೂರ್ಣಚಂದ್ರ ಠಾಕೂರ್ 200ಕ್ಕೂ ಹೆಚ್ಚು ಮತಗಳಿಂದ ಜಯ ಸಾಧಿಸಿದ್ದಾರೆ.

ಅಧಿಕೃತ ಪ್ರಕಟಣೆಯೊಂದೆ ಬಾಕಿ

12:46 December 08

  • ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ
  • ಸಿಹಿ ಹಂಚಿ ಸಂಭ್ರಮಿಸಿ ಸಿಎಂ ಭೂಪೇಂದ್ರ ಪಟೇಲ್ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್
  • 1,07,960 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್

12:39 December 08

ಶಿಮ್ಲಾದಲ್ಲಿ ಸಿಹಿ ಹಂಚಿದ ಕೈ ಕಾರ್ಯಕರ್ತರು

ಶಿಮ್ಲಾದಲ್ಲಿ ಸಿಹಿ ಹಂಚಿದ ಕೈ ಕಾರ್ಯಕರ್ತರು

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಶಿಮ್ಲಾದಲ್ಲಿ ಕೈ ಕಾರ್ಯಕರ್ತರು ಸಿಹಿ ಹಂಚುತ್ತಿದ್ದಾರೆ.

ಈಗಾಗಲೇ ಇತರೆ - 1 , ಬಿಜೆಪಿಯ 9 ಹಾಗೂ ಕಾಂಗ್ರೆಸ್​ನ 9 ಅಭ್ಯರ್ಥಿಗಳು ಜಯ ಗಳಿಸಿದ್ದು, ಕಾಂಗ್ರೆಸ್​ ಮುನ್ನಡೆ ಕಾಯ್ದುಕೊಂಡಿದೆ.

12:30 December 08

ವಿಧಾನಸಭಾ ಚುನಾವಣೆ ಫಲಿತಾಂಶದ ಅಪ್ಡೇಟ್​

ಸದ್ಯದ ಗುಜರಾತ್, ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಇಂತಿದೆ.

12:25 December 08

ಉಪಚುನಾವಣೆ ಫಲಿತಾಂಶದ ಕುರಿತು ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೆಲ್ ಪ್ರತಿಕ್ರಿಯಿಸಿದ್ದಾರೆ. 'ಇದು ಸರ್ಕಾರದ ಮೇಲೆ ಜನರ ನಂಬಿಕೆ ಅಚಲವಾಗಿದೆ ಎಂಬುದನ್ನು ತೋರಿಸುತ್ತದೆ. ಮನೋಜ್ ಮಾಂಡವಿ ಮಾಡಿದ ಕೆಲಸಕ್ಕೆ ಮತದಾರರು ಮುದ್ರೆ ಹಾಕಿದ್ದಾರೆ. ಭಾನುಪ್ರತಾಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾವಿತ್ರಿ ಮನೋಜ್ ಮಾಂಡವಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ 2 ಮತ್ತು 3 ನೇ ಸ್ಥಾನಕ್ಕಾಗಿ ಶ್ರಮಿಸುತ್ತಿದೆ' ಎಂದಿದ್ದಾರೆ.

12:12 December 08

  • ಗುಜರಾತ್​ನಲ್ಲಿ ಜಯಗಳಿಸಿದ ಕಾಂಗ್ರೆಸ್​ ನ ಓರ್ವ ಹಾಗೂ ಬಿಜೆಪಿಯ 17 ಅಭ್ಯರ್ಥಿಗಳು.
  • ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ 8, ಕಾಂಗ್ರೆಸ್​ನ 3 ಹಾಗೂ ಇತರೆ ಓರ್ವ ಅಭ್ಯರ್ಥಿಗೆ ಜಯಮಾಲೆ

12:03 December 08

  • ಹಿಮಾಚಲ ಪ್ರದೇಶದಲ್ಲಿ ಜೈರಾಮ್ ಠಾಕೂರ್ 29,422 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ
  • ಸಿರಾಜ್​ ವಿಧಾನಸಭಾ ಕ್ಷೇತ್ರದ ಹನ್ನೊಂದನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯ
  • ಬಿಎಸ್​ಪಿ ಅಭ್ಯರ್ಥಿ ಇಂದ್ರಾದೇವಿ -7
  • ಕಾಂಗ್ರೆಸ್ ಅಭ್ಯರ್ಥಿ ಚೈತ್ರಂ ಠಾಕೂರ್ - 983
  • ಬಿಜೆಪಿ ಅಭ್ಯರ್ಥಿ, ಮುಖ್ಯಮಂತ್ರಿ ಜೈರಾಮ್ ಠಾಕೂರ್ - 2,933
  • ಮಹೇಂದ್ರ ತೈರಾನಾ - CPIM ನಿಂದ 252
  • ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಗೀತಾನಂದ -25
  • ಸ್ವತಂತ್ರ ಅಭ್ಯರ್ಥಿ ನರೇಂದ್ರ ಕುಮಾರ್ - 3 ಮತಗಳನ್ನು 11ನೇ ಸುತ್ತಿನಲ್ಲಿ ಪಡೆದಿದ್ದಾರೆ.

11:52 December 08

ಗುಜರಾತ್​, ಹಿಮಾಚಲ ಪ್ರದೇಶದಲ್ಲಿ ಪಕ್ಷಗಳ ಬಲಾಬಲ ಹೀಗಿದೆ

ಗುಜರಾತ್​, ಹಿಮಾಚಲ ಪ್ರದೇಶದಲ್ಲಿ ಪಕ್ಷಗಳ ಬಲಾಬಲ ಹೀಗಿದೆ

ಸದ್ಯದ ಗುಜರಾತ್, ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ.

11:45 December 08

ಅಭಿವೃದ್ಧಿಯ ರಾಜಕಾರಣ ಗುಜರಾತ್‌ನಲ್ಲಿ ಗೆದ್ದಿದೆ:

ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿಯ ರಾಜಕಾರಣ ಗುಜರಾತ್‌ನಲ್ಲಿ ಮತ್ತೊಮ್ಮೆ ಗೆದ್ದಿದೆ. ನಾನು ರಾಜ್ಯದ ಜನತೆಗೆ ಧನ್ಯವಾದ ಹೇಳುತ್ತೇನೆ ಎಂದು ಗುಜರಾತ್​ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಸಿಂಗ್ ವಘೇಲಾ ಸಂತಸ ವ್ಯಕ್ತಪಡಿಸಿದ್ದಾರೆ.

11:35 December 08

  • ಗುಜರಾತ್ ವಿಧಾನಸಭಾ ಚುನಾವಣೆ ಫಲಿತಾಂಶ
  • ಗೆದ್ದ ಬಿಜೆಪಿಯ - 13 , ಕಾಂಗ್ರೆಸ್​ನ - ಓರ್ವ ಅಭ್ಯರ್ಥಿ
  • ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ ನಾಲ್ವರಿಗೆ ಜಯ

11:27 December 08

ಸದ್ಯಕ್ಕೆ ಗುಜರಾತ್​, ಹಿಮಾಚಲ ಪ್ರದೇಶದಲ್ಲಿ ಪಕ್ಷಗಳ ಬಲಾಬಲ ಹೀಗಿದೆ:

ಗುಜರಾತ್​, ಹಿಮಾಚಲ ಪ್ರದೇಶದಲ್ಲಿ ಪಕ್ಷಗಳ ಬಲಾಬಲ ಹೀಗಿದೆ

11:20 December 08

  • ಹಿಮಾಚಲ ಪ್ರದೇಶ ಸಿಎಂ ಜೈರಾಮ್ 24,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
  • 2017 ರಲ್ಲಿ ನಡೆದ ಚುನಾವಣೆಯಲ್ಲಿ 11,254 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
  • ಹಿಮಾಚಲದ 68 ಕ್ಷೇತ್ರಗಳಲ್ಲಿ 412 ಅಭ್ಯರ್ಥಿಗಳ ಭವಿಷ್ಯ ಸದ್ಯದಲ್ಲೇ ನಿರ್ಧಾರ.

11:14 December 08

ಗುಜರಾತ್‌ನಲ್ಲಿ ಬಿಜೆಪಿ ಭರ್ಜರಿ ಗೆಲುವಿನತ್ತ ಸಾಗುತ್ತಿರುವ ಹಿನ್ನೆಲೆ ಗಾಂಧಿನಗರದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.

11:00 December 08

  • ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ
  • ಸುಂದರನಗರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ
  • ರಾಕೇಶ್ ಕುಮಾರ್ ಜಯ ಗಳಿಸಿದ ಬಿಜೆಪಿ ಅಭ್ಯರ್ಥಿ

10:47 December 08

ಗುಜರಾತ್ ಚುನಾವಣೆ :2000-2001 ರಿಂದ ಗುಜರಾತ್​ ಜನರು ಬಿಜೆಪಿಗೆ ಬೆಂಬಲ ನೀಡುವ ಜೊತೆಗೆ ಪಕ್ಷದ ಕೆಲಸಗಳನ್ನು ಗುರುತಿಸಿ ಸ್ವೀಕರಿಸಿದ್ದಾರೆ. ನಾನು ಗುಜರಾತ್ ಜನತೆ ಮತ್ತು ಬಿಜೆಪಿಯನ್ನು ಅಭಿನಂದಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಭಾರಿ ಮುನ್ನಡೆಯಲ್ಲಿದ್ದು, ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಲಿದೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.

10:41 December 08

10:36 December 08

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ:ಗುಜರಾತ್‌ನಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸುತ್ತಿರುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿ, ನಾವು ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುತ್ತೇವೆ. ರಾಜ್ಯದ ಜನರು ಪ್ರಧಾನಿ ಮೋದಿಯವರ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ, ಈ ಬಾರಿ ಬಿಜೆಪಿ ಹೊಸ ದಾಖಲೆ ಬರೆಯಲಿದ್ದಾರೆ ಎಂದಿದ್ದಾರೆ.

10:24 December 08

ವಿಧಾನಸಭಾ ಉಪಚುನಾವಣೆ ಫಲಿತಾಂಶ -2022

  • ಉತ್ತರ ಪ್ರದೇಶ - 2 ಕ್ಷೇತ್ರದಲ್ಲಿ ರಾಷ್ಟ್ರೀಯ ಲೋಕದಳ ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿ ಮುನ್ನಡೆ
  • ರಾಜಸ್ಥಾನ- ಕಾಂಗ್ರೆಸ್​ ಅಭ್ಯರ್ಥಿ ಮುನ್ನಡೆ
  • ಒಡಿಶಾ- ಬಿಜು ಜನತಾ ದಳ
  • ಛತ್ತೀಸ್‌ಗಢ - ಕಾಂಗ್ರೆಸ್​ ಅಭ್ಯರ್ಥಿ ಮುನ್ನಡೆ
  • ಬಿಹಾರ- ಜನತಾ ದಳ (ಯುನೈಟೆಡ್)
  • ಬಿಜೆಪಿಗೆ ಉಪಚುನಾವಣೆಯಲ್ಲಿ ಭಾರಿ ಹಿನ್ನಡೆ

10:24 December 08

  • ಗಾಂಧಿನಗರದ ಬಿಜೆಪಿ ಕಚೇರಿ 'ಶ್ರೀ ಕಮಲಂ'ನಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ
  • ಮೋರ್ಬಿಯ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ ಮುನ್ನಡೆ
  • ಒಟ್ಟು 10,156 ಮತಗಳಿಂದ ಮುನ್ನಡೆ ಕಾಯ್ದುಕೊಂಡ ಕಾಂತಿಲಾಲ್ ಅಮೃತಿಯಾ

10:15 December 08

10:15 December 08

10:03 December 08

ಗುಜರಾತ್​ನಲ್ಲಿ ಬಿಜೆಪಿ ಭಾರಿ ಮುನ್ನಡೆ:

ಗುಜರಾತ್ ಚುನಾವಣೆ 2022 : ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ತಮ್ಮ ಕ್ಷೇತ್ರ ಘಟ್ಲೋಡಿಯಾದಲ್ಲಿ ಒಟ್ಟು 23,713 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಹಿಮಾಚಲ ಪ್ರದೇಶಚುನಾವಣೆ 2022: ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ತಮ್ಮ ಕ್ಷೇತ್ರ ಜೈರಾಮ್​ನಲ್ಲಿ ಒಟ್ಟು 14,921 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

09:58 December 08

ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ

  • ಬಿಜೆಪಿ- 149
  • ಕಾಂಗ್ರೆಸ್-21
  • ಎಎಪಿ -7
  • ಇತರೆ - 5 ಸ್ಥಾನಗಳಲ್ಲಿ ಮುನ್ನಡೆ

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ

  • ಕಾಂಗ್ರೆಸ್ -32
  • ಬಿಜೆಪಿ- 32
  • ಎಎಪಿ -0
  • ಇತರೆ - 4 ಸ್ಥಾನಗಳಲ್ಲಿ ಮುನ್ನಡೆ

09:53 December 08

ವಿಧಾನಸಭಾ ಉಪಚುನಾವಣೆ ಫಲಿತಾಂಶ:

  • ಛತ್ತೀಸ್‌ಗಢದ ಭಾನುಪ್ರತಾಪುರ್ ಮತ್ತು ರಾಜಸ್ಥಾನದ ಸರ್ದರ್​ಶಹರ್‌ನಲ್ಲಿ ಕಾಂಗ್ರೆಸ್ ಮುನ್ನಡೆ
  • ಒಡಿಶಾದ ಪದಂಪುರದಲ್ಲಿ ಮತ್ತು ಬಿಹಾರದ ಕುರ್ಹಾನಿಯಲ್ಲಿ ಬಿಜೆಪಿ ಮುನ್ನಡೆ
  • ರಾಮ್‌ಪುರದಲ್ಲಿ ಸಮಾಜವಾದಿ ಪಕ್ಷ ಮುನ್ನಡೆ ಸಾಧಿಸಿದೆ.

09:48 December 08

ಡ್ಯಾನ್ಸ್​ ಮಾಡಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು
  • ಗುಜರಾತ್​ನಲ್ಲಿ ಭಾರತೀಯ ಜನತಾ ಪಕ್ಷ ಭಾರಿ ಮುನ್ನಡೆ
  • ಗಾಂಧಿನಗರದಲ್ಲಿ ಡ್ಯಾನ್ಸ್​ ಮಾಡಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

09:42 December 08

ಎಸ್‌ಪಿ ಅಭ್ಯರ್ಥಿ ಡಿಂಪಲ್ ಯಾದವ್ ಮುನ್ನಡೆ

  • ಮೈನ್‌ಪುರಿ ಲೋಕಸಭಾ ಉಪಚುನಾವಣೆ ಮತ ಎಣಿಕೆ
  • ಸಮಾಜವಾದಿ ಪಕ್ಷ (ಎಸ್‌ಪಿ) ಅಭ್ಯರ್ಥಿ ಡಿಂಪಲ್ ಯಾದವ್ ಮುನ್ನಡೆ
  • ಇಲ್ಲಿಯವರೆಗೆ ಒಟ್ಟು 16,933 ಮತಗಳಿಂದ ಮುನ್ನಡೆ ಸಾಧಿಸಿದ ಡಿಂಪಲ್ ಯಾದವ್
  • ಮುಂದುವರೆದ ಮತ ಎಣಿಕೆ ಕಾರ್ಯ

09:37 December 08

  • ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ: 139 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ, ಕಾಂಗ್ರೆಸ್-27, ಆಮ್ ಆದ್ಮಿ ಪಕ್ಷ- 11, ಇತರೆ-5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ
  • ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ: 32 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ, ಕಾಂಗ್ರೆಸ್-34, ಇತರೆ-2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

09:30 December 08

ಯುಪಿಯಲ್ಲಿ ಸಮಾಜವಾದಿ ಪಕ್ಷದ ನಾಯಕ ಮುನ್ನಡೆ:

  • ಉತ್ತರ ಪ್ರದೇಶದ ರಾಂಪುರ ವಿಧಾನಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಹಮ್ಮದ್​ ಅಸೀಂ ರಾಜಾ ಮುನ್ನಡೆ ಕಾಯ್ದುಕೊಂಡಿದ್ದಾರೆ.
  • ಬಿಜೆಪಿಯ ಆಕಾಶ್ ಸಕ್ಸೇನಾ ಹಿಂದಿಕ್ಕಿದ ಮೊಹಮ್ಮದ್​ ಅಸೀಂ ರಾಜಾ.

09:25 December 08

ವಿಧಾನಸಭಾ ಉಪಚುನಾವಣೆ ಮತ ಎಣಿಕೆ ಚುರುಕು

  • ಬಿಹಾರದ ಕುರ್ಹಾನಿಯಲ್ಲಿ ಬಿಜೆಪಿಯ ಕೇದಾರ್ ಪ್ರಸಾದ್ ಗುಪ್ತಾ ಮುನ್ನಡೆ
  • ರಾಜಸ್ಥಾನದ ಸರ್ದರ್​ಶಹರ್​ನಲ್ಲಿ ಕಾಂಗ್ರೆಸ್ ನಾಯಕ ಅನಿಲ್ ಕುಮಾರ್ ಶರ್ಮಾ ಮುನ್ನಡೆ ಸಾಧಿಸಿದ್ದಾರೆ.

09:17 December 08

Gujarat Election Result 2022: ಗುಜರಾತ್​ನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಭಾರತೀಯ ಜನತಾ ಪಕ್ಷವು 132 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 32 ಸ್ಥಾನಗಳಲ್ಲಿ, ಎಎಪಿ 12 ಸ್ಥಾನಗಳಲ್ಲಿ, ಇತರೆ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

Himachal Pradesh Result 2022: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 34 ಸ್ಥಾನಗಳಲ್ಲಿ, ಬಿಜೆಪಿ 31 ಹಾಗೂ ಇತರೆ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

09:13 December 08

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ

  • ಕಾಂಗ್ರೆಸ್ -35
  • ಬಿಜೆಪಿ- 30
  • ಎಎಪಿ -0
  • ಇತರೆ - 3 ಸ್ಥಾನಗಳಲ್ಲಿ ಮುನ್ನಡೆ

09:03 December 08

ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ

  • ಬಿಜೆಪಿ - 118
  • ಕಾಂಗ್ರೆಸ್ - 45
  • ಎಎಪಿ -13
  • ಇತರೆ - 6 ಸ್ಥಾನಗಳಲ್ಲಿ ಮುನ್ನಡೆ

08:57 December 08

  • ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಬಿಜೆಪಿಗಿಂತ ಮುಂದಿದೆ. ಬಿಜೆಪಿ 28 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 35 ಸ್ಥಾನಗಳಲ್ಲಿ, ಇತರೆ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
  • ಗುಜರಾತ್​ನಲ್ಲಿ ಬಿಜೆಪಿ ಕಾಂಗ್ರೆಸ್​ಗಿಂತ ಮುಂದಿದೆ. ಬಿಜೆಪಿ 96 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 44 ಸ್ಥಾನಗಳಲ್ಲಿ, ಎಎಪಿ 11 ಸ್ಥಾನಗಳಲ್ಲಿ, ಇತರೆ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

08:52 December 08

ಬಿಜೆಪಿ ದಾಖಲೆ ಮುರಿಯಲಿದೆ: 'ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು ಎಲ್ಲಾ ದಾಖಲೆ ಮುರಿಯಲಿದೆ. ನಾವು ಗರಿಷ್ಠ ಸಂಖ್ಯೆಯ ಸೀಟ್​ ಪಡೆಯುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲಿದ್ದೇವೆ. ನಮ್ಮ ಎಲ್ಲಾ ಅಭ್ಯರ್ಥಿಗಳು ತಮ್ಮ ಪ್ರತಿಸ್ಪರ್ಧಿ ಅಭ್ಯರ್ಥಿಗಳಿಗಿಂತ ಹೆಚ್ಚಿನ ಅಂತರದಿಂದ ಮುಂದಿರುತ್ತಾರೆ. ಈ ಬಾರಿ ಬಿಜೆಪಿ ಭಾರಿ ಅಂತರದಿಂದ ಗೆಲುವು ಸಾಧಿಸಲಿದೆ' ಎಂದು ಸೂರತ್ ಪಶ್ಚಿಮದ ಬಿಜೆಪಿ ಅಭ್ಯರ್ಥಿ ಪೂರ್ಣೇಶ್ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

08:45 December 08

ಗುಜರಾತ್ ವಿಧಾನಸಭಾ ಚುನಾವಣೆ ಮತ ಎಣಿಕೆ

  • ಬಿಜೆಪಿ- 77
  • ಕಾಂಗ್ರೆಸ್-31
  • ಆಮ್ ಆದ್ಮಿ ಪಕ್ಷ- 5
  • ಇತರೆ -2 ಸ್ಥಾನಗಳಲ್ಲಿ ಮುನ್ನಡೆ

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ ಎಣಿಕೆ

  • ಕಾಂಗ್ರೆಸ್ - 34
  • ಬಿಜೆಪಿ - 27
  • ಆಮ್ ಆದ್ಮಿ ಪಕ್ಷ - 0
  • ಇತರೆ - 5 ಸ್ಥಾನಗಳಲ್ಲಿ ಮುನ್ನಡೆ

08:41 December 08

ಗೆಲುವಿನ ಭರವಸೆ ವ್ಯಕ್ತಪಡಿಸಿದ ಮಾನಸ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾನಸ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬೂಜಿ ಠಾಕೂರ್ ಗೆಲುವಿನ ಭರವಸೆ ವ್ಯಕ್ತಪಡಿಸಿದರು. ಇಂದು ಮತ ಎಣಿಕೆ ನಡೆಯುತ್ತಿದೆ, ಜನರ ಆಶೀರ್ವಾದದಿಂದ ಬಹುಮತದಿಂದ ಗೆಲುವು ಸಾಧಿಸುತ್ತೇನೆ ಎಂದರು.

08:33 December 08

  • ಮೋದಿ ತವರಿನಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ
  • ಭಾರತೀಯ ಜನತಾ ಪಕ್ಷದ 56 ಸ್ಪರ್ಧಿಗಳು ಮುನ್ನಡೆ
  • ಕಾಂಗ್ರೆಸ್ -​ ಬಿಜೆಪಿ ನಡುವೆ ಫೈಟ್​
  • ಸದ್ಯಕ್ಕೆ ಇಬ್ಬರು ಪಕ್ಷೇತರರು ಹಾಗೂ ಆಮ್ ಆದ್ಮಿ ಪಕ್ಷದ ಇಬ್ಬರು ಅಭ್ಯರ್ಥಿಗಳು ಮುನ್ನಡೆ
  • ಹಿಮಾಚಲ ಪ್ರದೇಶದಲ್ಲಿ ಸಹ ಕಾಂಗ್ರೆಸ್​ - ಬಿಜೆಪಿ ನಡುವೆ ಜಟಾಪಟಿ
  • ಕಾಂಗ್ರೆಸ್​ನ 35 ಮಂದಿ, ಬಿಜೆಪಿಯ 22 ಮಂದಿ ಮುನ್ನಡೆಯತ್ತ

08:22 December 08

  • ಹಿಮಾಚಲ ಪ್ರದೇಶದಲ್ಲಿ ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್​
  • 23 ಅಭ್ಯರ್ಥಿಗಳು ಮುನ್ನಡೆಯತ್ತ
  • ಬಿಜೆಪಿಯ 17 ಮಂದಿ ಅಭ್ಯರ್ಥಿಗಳ ಮತ ಎಣಿಕೆ ಹೆಚ್ಚಳ
  • ಗುಜರಾತ್​ನಲ್ಲಿ ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ಭಾರತೀಯ ಜನತಾ ಪಕ್ಷ
  • ಗುಜರಾತ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ
  • ಆಮ್ ಆದ್ಮಿ ಪಕ್ಷದ ಇಬ್ಬರು ಅಭ್ಯರ್ಥಿಗಳು ಮುನ್ನಡೆಯತ್ತ
  • ಕಾಂಗ್ರೆಸ್​ನ 6 ಮಂದಿ ಅಭ್ಯರ್ಥಿಗಳು ಮುನ್ನಡೆ

08:14 December 08

ಪ್ರಾರಂಭಿಕ ಹಂತದಲ್ಲಿ ಗುಜರಾತ್​ನಲ್ಲಿ ಬಿಜೆಪಿ ಮುನ್ನಡೆ

ಗುಜರಾತ್​ನಲ್ಲಿ ಮತ ಎಣಿಕೆ ಚುರುಕು

ಬಿಜೆಪಿಯ 25 ಅಭ್ಯರ್ಥಿಗಳು ಮುನ್ನಡೆ

ಕಾಂಗ್ರೆಸ್​ನ 6 ಅಭ್ಯರ್ಥಿಗಳು ಮುನ್ನಡೆ

ಹಿಮಾಚಲ ಪ್ರದೇಶದಲ್ಲಿ ಸಹ ಬಿಜೆಪಿಯ 13 ಅಭ್ಯರ್ಥಿಗಳು, ಕಾಂಗ್ರೆಸ್​ನ 13 ಅಭ್ಯರ್ಥಿಗಳು ಮುನ್ನಡೆ

08:07 December 08

ಮತ ಎಣಿಕೆ ಆರಂಭ

  • ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಗಳ ಮತ ಎಣಿಕೆ ಆರಂಭ
  • ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರ ಮತ್ತು ಬಿಹಾರ, ಛತ್ತೀಸ್‌ಗಢ, ಒಡಿಶಾ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಆರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕೂಡ ಪ್ರಾರಂಭವಾಗಿದೆ.

07:51 December 08

ಗೆಲುವಿನ ಭರವಸೆ ವ್ಯಕ್ತಪಡಿಸಿದ ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್

ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್

ಗುಜರಾತ್​: ವಿರಂಗಾಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾರ್ದಿಕ್ ಪಟೇಲ್ ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ. ನಾವು 135 ರಿಂದ 145 ಸ್ಥಾನ ಗೆದ್ದು ಖಂಡಿತವಾಗಿಯೂ ಸರ್ಕಾರ ರಚಿಸಲಿದ್ದೇವೆ. ಕಳೆದ 20 ವರ್ಷಗಳಲ್ಲಿ ಇಲ್ಲಿ ಯಾವುದೇ ಗಲಭೆಗಳು/ಭಯೋತ್ಪಾದಕ ದಾಳಿಗಳು ನಡೆದಿಲ್ಲ. ಬಿಜೆಪಿ ಜನರ ನಿರೀಕ್ಷೆಗಳನ್ನು ಈಡೇರಿಸಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

07:39 December 08

ಹಿಮಾಚಲ ಪ್ರದೇಶದಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ

ಸ್ಟ್ರಾಂಗ್ ರೂಮ್ ಓಪನ್​
  • ಮಂಡಿಯ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಮ್ ಓಪನ್​
  • ಬೆಳಗ್ಗೆ 7.30 ಕ್ಕೆ ಸ್ಟ್ರಾಂಗ್ ರೂಮ್ ತೆರೆದ ಅಧಿಕಾರಿಗಳು
  • ಮತ ಎಣಿಕೆಗೆ ಕ್ಷಣಗಣನೆ
  • ಮಂಡಿಯ ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಭದ್ರತೆ

07:02 December 08

ಸರ್ಕಾರಿ ಬಾಲಕಿಯರ ಹಿರಿಯ ಮಾಧ್ಯಮಿಕ ಶಾಲೆಯ ಹೊರಗಿನ ದೃಶ್ಯಗಳು
  • ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ಆರಂಭ
  • ಈಗಾಗಲೇ ಮತ ಎಣಿಕೆ ಕೇಂದ್ರದತ್ತ ಧಾವಿಸುತ್ತಿರುವ ಸಾರ್ವಜನಿಕರು
  • ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಮಧ್ಯಾಹ್ನದೊಳಗೆ ತೆರೆ

06:28 December 08

182 ಸದಸ್ಯ ಬಲದ ಗುಜರಾತ್​ ವಿಧಾನಸಭೆ ಮತ್ತು 68 ಸದಸ್ಯ ಬಲದ ಹಿಮಾಚಲಪ್ರದೇಶ ವಿಧಾನಸಭೆಯ ಚುನಾವಣಾ ಫಲಿತಾಂಶ

ದೇಶದ ಗಮನ ಸೆಳೆದಿರುವ ಗುಜರಾತ್​ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆಗಳ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ಜೊತೆಗೆ 6 ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಕೂಡ ಪ್ರಕಟವಾಗಲಿದೆ.

ಎರಡು ವಿಧಾನಸಭೆಗಳು ಹಾಗೂ ಏಳು ಉಪಚುನಾವಣೆಗಳ ಮತ ಎಣಿಕೆಗೆ ಸಂಬಂಧಿಸಿದಂತೆ ಒಟ್ಟಾರೆ 116 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಬ್ಬ ಮತ ಎಣಿಕೆ ವೀಕ್ಷಕರನ್ನು ನಿಯೋಜಿಸಲಾಗಿದೆ. ಅದರಲ್ಲೂ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ತಲಾ ಇಬ್ಬರು ವಿಶೇಷ ವೀಕ್ಷಕರನ್ನು ನೇಮಿಸಲಾಗಿದೆ.

ಗುಜರಾತ್​ ವಿಧಾನಸಭಾ ಚುನಾವಣೆ: 182 ಸದಸ್ಯರ ಬಲದ ಗುಜರಾತ್​ ವಿಧಾನಸಭೆಗೆ ಡಿ.1 ಮತ್ತು 5ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಈ ಬಾರಿ ಆಮ್​ ಆದ್ಮಿ ಪಕ್ಷ ಸಹ ಚುನಾವಣಾ ಕಣಕ್ಕೆ ಲಗ್ಗೆ ಇಟ್ಟಿದೆ. ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್​ ಜೊತೆಗೆ ಆಪ್​ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಟ್ಟಾರೆ 1,621 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶೇ.66.13ರಷ್ಟು ಮತ ಚಲಾವಣೆಯಾಗಿದೆ.

ಹಿಮಾಚಲ ಪ್ರದೇಶ ವಿಧಾನಸಭಾ ಕ್ಷೇತ್ರಗಳ ಮಾಹಿತಿ: 68 ಸ್ಥಾನಗಳಿಗೆ ನವೆಂಬರ್​ 12ರಂದು ಮತದಾನ ನಡೆದಿದ್ದು, ಶೇ.75ರಷ್ಟು ಮತ ಚಲಾವಣೆಯಾಗಿದೆ. ಇಲ್ಲಿ ಒಟ್ಟಾರೆ 412 ಅಭ್ಯರ್ಥಿಗಳು ಕಣದಲ್ಲಿದ್ದು, ಇಂದು ಭವಿಷ್ಯ ಹೊರ ಬೀಳಲಿದೆ.

Last Updated : Dec 8, 2022, 2:31 PM IST

ABOUT THE AUTHOR

...view details