ಕನೌಜ್ (ಉತ್ತರ ಪ್ರದೇಶ):ನಿನ್ನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಸುಗಂಧ ದ್ರವ್ಯ ತಯಾರಿಕೆ ಉದ್ಯಮಿದಾರ ಪಿಯೂಷ್ ಜೈನ್ ಅವರ ಮನೆ ಮೇಲೆ ದಾಳಿ ನಡೆಸಿದ ತೆರಿಗೆ ಅಧಿಕಾರಿಗಳು 150 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದರು ಎಂದು ಸುದ್ದಿಯಾಗಿತ್ತು. ಆದರೆ ಈಗ 150 ಅಲ್ಲ, ಬರೋಬ್ಬರಿ 177.45 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಕನೌಜ್ನಲ್ಲಿರುವ ಪಿಯೂಷ್ ಮನೆ ಮೇಲೆ ತೆರಿಗೆ ಅಧಿಕಾರಿಗಳ ದಾಳಿ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ ಡೈರೆಕ್ಟರೇಟ್ ಜನರಲ್ ತನಿಖಾ ಸಂಸ್ಥೆಯಡಿ ಬರುವ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್‌ಗಳ ಕೇಂದ್ರೀಯ ಮಂಡಳಿಯ ಅಧಿಕಾರಿಗಳು ಈ ದಾಳಿ ನಡೆಸುತ್ತಿದೆ. ದೇಶದ ಇತಿಹಾಸದಲ್ಲೇ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಜಪ್ತಿ ಮಾಡಿರುವ ಭಾರೀ ಮೊತ್ತದ ನಗದು ಇದಾಗಿದೆ.
ಇದನ್ನೂ ಓದಿ: ಪಿಯೂಷ್ ಜೈನ್ ನಿವಾಸದ ಮೇಲೆ ಐಟಿ ದಾಳಿ, ಪುತ್ರ ಪ್ರತ್ಯೂಷ್ ಜೈನ್ ವಶಕ್ಕೆ: ನಿಗೂಢ ಸ್ಥಳದಲ್ಲಿ ವಿಚಾರಣೆ
ನಿನ್ನೆ ಕಾನ್ಪುರದಲ್ಲಿನ ಪಿಯೂಷ್ ಜೈನ್ ಅವರ ಮನೆ, ಕಚೇರಿ, ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿತ್ತು. ತೆರಿಗೆ ಕಟ್ಟದೇ ಸರ್ಕಾರಕ್ಕೆ ವಂಚನೆ ಮಾಡಿರುವುದನ್ನು ಅಧಿಕಾರಿಗಳು ಬಯಲಿಗೆಳೆದಿದ್ದರು. ಪಿಯೂಷ್ ಜೈನ್ ಪುತ್ರನಾದ ಪ್ರತ್ಯೂಷ್ ಜೈನ್ ಅವರನ್ನು ವಶಕ್ಕೆ ಪಡೆದಿದ್ದರು, ಇಂದು ಕನೌಜ್ನಲ್ಲಿರುವ ಪಿಯೂಷ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಸಮಾಜವಾದಿ ಪಕ್ಷದ ಸುಗಂಧ ದ್ರವ್ಯ
ಸಮಾಜವಾದಿ ಪಕ್ಷವು (ಎಸ್ಪಿ) ಇತ್ತೀಚೆಗೆ ಸುಗಂಧ ದ್ರವ್ಯವೊಂದನ್ನು ಬಿಡುಗಡೆ ಮಾಡಿತ್ತು. ಈ ಸುಗಂಧ ದ್ರವ್ಯವನ್ನು ಪಿಯೂಷ್ ಜೈನ್ ಕಂಪನಿ ತಯಾರಿಸಿತ್ತು. ಇದೀಗ ಪಿಯೂಷ್ ಜೈನ್ರ ಆಸ್ತಿಗಳ ಮೇಲೆ ದಾಳಿಯಾಗಿರುವುದಕ್ಕೆ ಎಸ್ಪಿ ಪಕ್ಷದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವ್ಯಂಗ್ಯವಾದ ಪೋಸ್ಟ್ಗಳನ್ನು ಶೇರ್ ಮಾಡುತ್ತಿದ್ದಾರೆ.