ನವದೆಹಲಿ: ಕಳೆದ ಒಂದೂವರೆ ವರ್ಷದಿಂದ ಕೊರೊನಾ ಸಾಂಕ್ರಾಮಿಕದಿಂದಾಗಿ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿತ್ತು. ಆದರೆ, ಲಾಕ್ಡೌನ್ ಸಡಿಲಿಕೆ ಬಳಿಕ ಕಳೆದ ಕೆಲ ತಿಂಗಳಿನಿಂದ ದಾಖಲೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಿಂದಾಗಿ ವೇಗವಾಗಿ ಆರ್ಥಿಕತೆ ಸುಧಾರಿಸುತ್ತಿದೆ.
ರಾಜ್ಯವಾರು ಜಿಎಸ್‌ಟಿ ಸಂಗ್ರಹ ಸೆಪ್ಟೆಂಬರ್ ತಿಂಗಳಲ್ಲಿ ಬರೋಬ್ಬರಿ 1,17,010 ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಸಂಗ್ರಹಿಸಿದ ಜಿಎಸ್‌ಟಿಗಿಂತಾ ಶೇಕಡಾ 23 ರಷ್ಟು ಏರಿಕೆಯಾಗಿದೆ ಎಂದು ಇಂದು ಬಿಡುಗಡೆಯಾದ ಅಧಿಕೃತ ಅಂಕಿ- ಅಂಶಗಳು ತಿಳಿಸಿವೆ.
ಇದನ್ನೂ ಓದಿ:GST ವಿನಾಯಿತಿ ಪಟ್ಟಿ ಪರಿಶೀಲನೆಗೆ ಕೇಂದ್ರದಿಂದ 2 ಸಮಿತಿ ರಚನೆ.. ಒಂದಕ್ಕೆ ಸಿಎಂ ಬೊಮ್ಮಾಯಿ ನೇತೃತ್ವ..
2020ರ ಸೆಪ್ಟೆಂಬರ್‌ನಲ್ಲಿ ಕೋವಿಡ್ ನಡುವೆಯೂ 91,916 ಕೋಟಿ ರೂಪಾಯಿಯೊಂದಿಗೆ 2019 ರ ಸೆಪ್ಟೆಂಬರ್ಗಿಂತ ಶೇ.4ರಷ್ಟು ಜಾಸ್ತಿ ಜಿಎಸ್‌ಟಿ ಸಂಗ್ರಹವಾಗಿತ್ತು. ಆದರೆ, ಈ ಮೊತ್ತ ಇದೀಗ 1.17 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 1.17 ಲಕ್ಷ ಕೋಟಿ ರೂ. ಪೈಕಿ ಅಂತರ್ ರಾಜ್ಯಗಳ ನಡುವೆ ಸರಕು/ಸೇವೆಗಳ ಪೂರೈಕೆಯ ಮೇಲೆ 60,911 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.
ರಾಜ್ಯವಾರು ಜಿಎಸ್‌ಟಿ ಸಂಗ್ರಹ ಹೀಗಿದೆ..
ರಾಜ್ಯವಾರು ಜಿಎಸ್‌ಟಿ ಸಂಗ್ರಹ