ಡೆಹ್ರಾಡೂನ್(ದೆಹಲಿ):ಇಂಗ್ಲಿಷ್ನಲ್ಲಿ ಮಾತನಾಡಿದ್ದಕ್ಕೆ ನೇಪಾಳಿಗ ಎಂದುಕೊಂಡು ಆತನ ಮೇಲೆ ನಾಯಿಯನ್ನು ಚೂ ಬಿಟ್ಟು ವ್ಯಕ್ತಿಯೊಬ್ಬನನ್ನು ಗಾಯಗೊಳಿಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಅದೂ ಕೂಡ 4 ಬಾರಿ ನಾಯಿಯಿಂದ ಕಚ್ಚಿಸಿದ್ದು, ಈ ಬಗ್ಗೆ ಗಾಯಾಳು ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ದೆಹಲಿಯಲ್ಲಿರುವ ಡೆಹ್ರಾಡೂನ್ ನಿವಾಸಿ, ಮಾಜಿ ಲೆಫ್ಟಿನೆಂಟ್ ಸಿ.ವಿ. ಬಹದ್ದೂರ್ ಅವರ ಮೊಮ್ಮಗ ಅಂಶುಮಾನ್ ಥಾಪಾ ದಾಳಿಗೆ ಒಳಗಾದವರು. ಅಂಶುಮಾನ್ ಥಾಪಾ ಅವರು ಅಂಗಡಿಗೆ ಹೋದಾಗ ಇಂಗ್ಲಿಷ್ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಕೈಫ್ ಎಂಬಾತ 'ನೀನು ನೇಪಾಳಿಯ' ಎಂದು ಪ್ರಶ್ನಿಸಿದ್ದಾರೆ. ಅಲ್ಲ ಎಂದು ಅಂಶುಮಾನ್ ಥಾಪಾ ಹೇಳಿದರೂ ಬಿಡದ ಆ ವ್ಯಕ್ತಿ ಜಗಳ ತೆಗೆದು ಹಲ್ಲೆಗೆ ಮುಂದಾಗಿದ್ದಾನೆ.