ನವದೆಹಲಿ:ಮುಂಬರುವ ಮುಂಗಾರು ಸಂಸತ್ ಅಧಿವೇಶನದಲ್ಲಿ 15 ಮಸೂದೆಗಳಿಗೆ ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಡಿಎಲ್‌ಎ ತಂತ್ರಜ್ಞಾನ ಕಾಯ್ದೆ, ಪೋಷಕರ ನಿರ್ವಹಣೆ, ಕಲ್ಯಾಣ, ಹಿರಿಯ ನಾಗರಿಕರು, ನೆರವಿನ ಸಂತಾನೋತ್ಪತಿ ತಂತ್ರಜ್ಞಾನ ಕಾಯ್ದೆ, ನ್ಯಾಯಮಂಡಳಿ ಸುಧಾರಣೆ ಕಾಯ್ದೆ ಮತ್ತು ಫ್ಯಾಕ್ಟರಿಂಗ್ ರೆಗ್ಯುಲೆೇಷನ್ ಅಮೆಂಡ್ಮೆಂಟ್ ಬಿಲ್ ಪ್ರಮುಖವಾಗಿವೆ ಎಂದು ಮೂಲಗಳು ತಿಳಿಸಿವೆ.
ಜುಲೈ 19 ರಿಂದ ಆರಂಭವಾಗಲಿರುವ ಲೋಕಸಭೆ ಅಧಿವೇಶನದಲ್ಲಿ 23 ಮಸೂದೆಗಳನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ಪೈಕಿ 17 ಮಸೂದೆಗಳನ್ನು ಈಗಾಗಲೇ ಮಂಡಿಸಲಾಗಿದೆ. ಇದರಲ್ಲಿ ಎರಡು ಮಸೂದೆಗಳನ್ನು ಸುಗ್ರೀವಾಜ್ಞೆಗೆ ಬದಲಾಗಿ ಮಂಡನೆ ಮಾಡುತ್ತಿದೆ.