ನವದೆಹಲಿ:ಭಾರತ ಮತ್ತು ಇಂಗ್ಲೆಂಡ್ ನಡುವೆ ವಿಮಾನಗಳ ಹಾರಾಟ ಸಂಬಂಧ ಹಲವಾರು ದೂರುಗಳು ಬಂದ ನಂತರ ಕೇಂದ್ರ ಸರ್ಕಾರವು ಉಭಯ ದೇಶಗಳ ನಡುವಿನ ವಿಮಾನಗಳ ಸಂಖ್ಯೆ ದ್ವಿಗುಣಗೊಳಿಸಲು ಆದೇಶಿಸಿದೆ.
2020 ರ ಡಿಸೆಂಬರ್ನಲ್ಲಿ ಇಂಗ್ಲೆಂಡವ್ನಲ್ಲಿ ಏಕಾಏಕಿ ಕೋವಿಡ್ ಹೆಚ್ಚಾದ ಹಿನ್ನೆಲೆ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತು. ಪ್ರಸ್ತುತ ಭಾರತ ಹಾಗೂ ಬ್ರಿಟನ್ ಮಧ್ಯೆ ವಾರಕ್ಕೆ 15 ವಿಮಾನಗಳು ಸಂಚರಿಸುತ್ತಿವೆ. ಆಗಸ್ಟ್ 16 ರಿಂದ ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಗಳ ಸಂಖ್ಯೆಯನ್ನು ವಾರಕ್ಕೆ 60 ಕ್ಕೆ ನಿಗದಿಪಡಿಸಲು ನಿರ್ಧರಿಸಿದೆ. 30 ವಿಮಾನಗಳು ಭಾರತೀಯ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ವಿಸ್ತಾರದಿಂದ ಕಾರ್ಯ ನಿರ್ವಹಿಸಲ್ಪಡುತ್ತವೆ. ಏರ್ ಇಂಡಿಯಾ 24 ವಿಮಾನಗಳನ್ನು ಹಾರಿಸಿದರೆ, ವಿಸ್ತಾರ ನಾಲ್ಕು ಫ್ಲೈಟ್ಗಳ ಹಾರಾಟ ನಡೆಸಲಿದೆ.
ಇಂಗ್ಲೆಂಡ್ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2021 ರಲ್ಲಿ ಶೇ.19 (3,200 ವಿದ್ಯಾರ್ಥಿಗಳು) ರಷ್ಟು ಹೆಚ್ಚಾಗಿದೆ.