ನವದೆಹಲಿ:2022ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ. ಕನ್ನಡದ ಹಿರಿಯ ಸಾಹಿತಿ, ದಲಿತ ಕವಿ ದಿ. ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಗೌರವ ಒಲಿದಿದೆ. ಉಳಿದಂತೆ ರಾಜ್ಯದ ನಾಲ್ವರು ಗಣ್ಯರು ಸಹ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕದ ಐವರಿಗೆ ಒಲಿದ ಪದ್ಮಶ್ರೀ ಗೌರವ
- ಕಲಾ ವಿಭಾಗದಲ್ಲಿ ಹೆಚ್.ಆರ್ ಕೇಶವಮೂರ್ತಿ
- ವಿಜ್ಞಾನ ವಿಭಾಗದಲ್ಲಿ ಸುಬ್ಬಣ್ಣ ಅಯ್ಯಪ್ಪಗೆ ಗೌರವ
- ದಲಿತ ಕವಿ, ಸಾಹಿತಿ ದಿ. ಡಾ. ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪ್ರಶಸ್ತಿ
- ಕೃಷಿ ಇಲಾಖೆಯಲ್ಲಿ ಅಮಾಯಿ ಮಹಾಲಿಂಗ ನಾಯ್ಕ್ಗೆ ಗೌರವ
- ಅಬ್ದುಲ್ ಖಾದರ್ ನಡಕಟ್ಟಿ- ಕೃಷಿ ಸಂಶೋಧನೆಗೆ ಪ್ರಶಸ್ತಿ
2022ರಲ್ಲಿ 107 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ ಒಟ್ಟು 128 ಸಾಧಕರಿಗೆ ಮೂರು ವಿಭಾಗದ ಪದ್ಮ ಪ್ರಶಸ್ತಿ ನೀಡಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪದ್ಮ ವಿಭೂಷಣ ಪ್ರಶಸ್ತಿ ಪಡೆದ ನಾಲ್ವರು ಸಾಧಕರು
- ಕಲಾ ವಿಭಾಗದಲ್ಲಿ ಮಹಾರಾಷ್ಟ್ರದ ಪ್ರಭಾ ಅತ್ರೆ ಅವರಿಗೆ ಗೌರವ
- ಕಲಾ ಮತ್ತು ಶಿಕ್ಷಣ ವಿಭಾಗದಲ್ಲಿ ಉತ್ತರ ಪ್ರದೇಶದ ಶ್ರೀ ರಾಧೆಶ್ಯಾಮ್ (ಮರಣೋತ್ತರ)
- ಸಶಸ್ತ್ರ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಸಿಡಿಎಸ್ ಜನರಲ್ ಬಿಪಿನ್ ರಾವತ್ಗೆ ಮರಣೋತ್ತರ ಪುರಸ್ಕಾರ
- ಮರಣೋತ್ತರವಾಗಿ ರಾಜಕಾರಣಿ ಕಲ್ಯಾಣ್ ಸಿಂಗ್ ಅವರಿಗೆ ಪದ್ಮ ವಿಭೂಷಣ
ಉಳಿದಂತೆ 17 ಸಾಧಕರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಪ್ರಮುಖವಾಗಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್, ಶ್ರೀ ವಿಕ್ಟರಿ ಬ್ಯಾನರ್ಜಿ, ನಟರಾಜನ್ ಚಂದ್ರಶೇಖರನ್, ಕೃಷ್ಣ ಎಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಸೇರಿಕೊಂಡಿದ್ದಾರೆ.
ಪದ್ಮ ಪ್ರಶಸ್ತಿಗಳನ್ನು 1954 ರಲ್ಲಿ ಸ್ಥಾಪಿಸಲಾಗಿದ್ದು, ಶಿಕ್ಷಣ, ಕಲೆ, ಸಾಹಿತ್ಯ, ವಿಜ್ಞಾನ, ನಟನೆ, ಸಮಾಜ ಸೇವೆ ಮತ್ತು ಸಾರ್ವಜನಿಕ ವ್ಯವಹಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರ ವಿಶಿಷ್ಟ ಕೊಡುಗೆ ಗುರುತಿಸಿ ಈ ಗೌರವ ನೀಡಲಾಗುತ್ತಿದೆ. 2022ನೇ ಸಾಲಿನ ಪ್ರಶಸ್ತಿ ಪುರಸ್ಕೃತರಲ್ಲಿ 34 ಮಹಿಳೆಯರು ಮತ್ತು 10 ವಿದೇಶಿಯರು ಮತ್ತು 13 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಇದ್ದಾರೆ.