ಕರ್ನಾಟಕ

karnataka

ETV Bharat / bharat

ಚಿನ್ನದ ದರದಲ್ಲಿ 23 ರೂಪಾಯಿ ಇಳಿಕೆ, ಬೆಳ್ಳಿ ಬೆಲೆ ಸ್ಥಿರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ 1817 ಡಾಲರ್​ಗೆ ಮಾರಾಟವಾದರೆ, ಬೆಳ್ಳಿ ಪ್ರತಿ ಕೆಜಿಗೆ 22.94 ಡಾಲರ್​ಗೆ ಬಿಕರಿಯಾಗುತ್ತಿದೆ.

gold
ಚಿನ್ನದ ದರ

By

Published : Jan 18, 2022, 9:20 PM IST

ನವದೆಹಲಿ:ಕೆಲದಿನಗಳಿಂದ ದರದಲ್ಲಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನ ಇಂದು ಅತ್ಯಲ್ಪ ಇಳಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರ ಇಳಿಕೆ ಕಂಡ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಇಳಿಕೆ ದಾಖಲಿಸಿದೆ. ಆದರೆ, ಬೆಳ್ಳಿ ದರದಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ.

10 ಗ್ರಾಂ ಚಿನ್ನದ ದರದಲ್ಲಿ 23 ರೂಪಾಯಿ ಇಳಿಕೆ ಕಂಡು 47,814 ರೂ.ಗೆ ಬಿಕರಿಯಾಗಿದೆ. ಈ ಹಿಂದೆ ಪ್ರತಿ 10 ಗ್ರಾಂಗೆ 47,837 ರೂ. ಮಾರಾಟ ಕಂಡಿತ್ತು. ಬೆಳ್ಳಿ ಪ್ರತಿ ಕೆಜಿಗೆ 61,836 ರೂಪಾಯಿ ಮಾರಾಟವಾಗಿ ದರ ಸ್ಥಿರವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ 1817 ಡಾಲರ್​ಗೆ ಮಾರಾಟವಾದರೆ, ಬೆಳ್ಳಿ ಪ್ರತಿ ಕೆಜಿಗೆ 22.94 ಡಾಲರ್​ಗೆ ಬಿಕರಿಯಾಗುತ್ತಿದೆ.

ಇದನ್ನೂ ಓದಿ:ಪಂಚರಾಜ್ಯಗಳ ಚುನಾವಣೆ ಎಫೆಕ್ಟ್​: 74 ದಿನಗಳಿಂದ ತೈಲ ದರ ಏರಿಸದ ಕೇಂದ್ರ ಸರ್ಕಾರ

ABOUT THE AUTHOR

...view details