ಕರ್ನಾಟಕ

karnataka

ETV Bharat / bharat

2021-22 ನೇ ಸಾಲಿನಲ್ಲಿ ಒಟ್ಟು 833 ಕೆ.ಜಿ ಚಿನ್ನ ಕಳ್ಳಸಾಗಣೆ ಪತ್ತೆ ಹಚ್ಚಿದ ಡಿಆರ್​ಐ

2021-22ರ ಅವಧಿಯಲ್ಲಿ ಡಿಆರ್‌ಐ ಅಧಿಕಾರಿಗಳು ಒಟ್ಟು 833 ಕೆಜಿ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟಾರೆ ಮೌಲ್ಯ ರೂ. 405 ಕೋಟಿ ಎಂಬುದು ವಿಶೇಷ.

2021-22 ನೇ ಸಾಲಿನಲ್ಲಿ ಒಟ್ಟು 833 ಕೆ.ಜಿ ಚಿನ್ನ ಕಳ್ಳಸಾಗಣೆ ಪತ್ತೆ ಹಚ್ಚಿದ ಡಿಆರ್​ಐ
gold-concealed-in-machines-seized-in-lucknow-and-mumbai

By

Published : May 10, 2022, 8:23 PM IST

ನವದೆಹಲಿ:ಆದಾಯ ಮತ್ತು ಗುಪ್ತಚರ ನಿರ್ದೇಶನಾಲಯ (DRI) ಕಳೆದ ವಾರ ಲಖನೌ ಮತ್ತು ಮುಂಬೈನಲ್ಲಿ ಚಿನ್ನವನ್ನು ವಶಪಡಿಸಿಕೊಳ್ಳುವ ಮೂಲಕ ವಾಯು ಮಾರ್ಗದ ಮೂಲಕ ನಡೆಯುತ್ತಿದ್ದ ಕಳ್ಳಸಾಗಣೆ ಯತ್ನಗಳನ್ನ ವಿಫಲಗೊಳಿಸುವಲ್ಲಿ ಸಫಲವಾಗಿದೆ. ನಿಖರ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಗುಪ್ತಚರ ಇಲಾಖೆ ಅಧಿಕಾರಿಗಳು ಮೇ 6 ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೋ ಕಾಂಪ್ಲೆಕ್ಸ್​​ನಲ್ಲಿ ದುಬೈನಿಂದ ಬಂದ ಸರಕುಗಳನ್ನ ತಪಾಸಣೆಗೆ ಒಳಪಡಿಸಿದ್ದರು.

ಈ ವೇಳೆ, ವಿಭಾಗೀಯ ಮತ್ತು ಡ್ರಮ್ ಮಾದರಿಯ ಡ್ರೈನ್ ಕ್ಲೀನಿಂಗ್ ಯಂತ್ರಗಳಲ್ಲಿನ ಎರಡು ಮೋಟಾರ್ ರೂಟರ್‌ಗಳಲ್ಲಿ ಡಿಸ್ಕ್ ರೂಪದಲ್ಲಿ 3.10 ಕೋಟಿ ಮೌಲ್ಯದ 5.8 ಕೆಜಿ ಚಿನ್ನ ಅಡಗಿಸಿಟ್ಟಿರುವುದು ಬಯಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಡಿಆರ್​ಐ ಅಧಿಕಾರಿಗಳು, ದಕ್ಷಿಣ ಮುಂಬೈನಲ್ಲಿ ನೆಲೆಸಿದ್ದ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದು ಮುಂಬೈ ಕಥೆಯಾದರೆ, ಇನ್ನು ಮೇ 5 ರಂದು ಲಖನೌ ವಿಮಾನ ನಿಲ್ದಾಣದಲ್ಲಿ ಇಂತಹುದ್ದೇ ಪ್ರಕರಣ ಪತ್ತೆ ಹಚ್ಚಿ, ಎಲೆಕ್ಟ್ರಿಕಲ್ ಥ್ರೆಡಿಂಗ್ ಮಷಿನ್​ನಲ್ಲಿ ಅಡಗಿಸಿಡಲಾಗಿದ್ದ, ಒಟ್ಟು 2.78 ಕೋಟಿ ರೂ. ಮೌಲ್ಯದ 5.2 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.

ಕಳೆದ ವರ್ಷ DRI ಸರಕು ಮತ್ತು ಕೊರಿಯರ್ ರವಾನೆಗಳಿಂದ ಕಳ್ಳ ಸಾಗಣೆ ಮಾಡಿದ ಒಟ್ಟು16.79 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ಇದರ ಮೌಲ್ಯ 8 ಕೋಟಿ ರೂಪಾಯಿ ಆಗಿದೆ. ಒಟ್ಟಾರೆ 2021 ರ ನವೆಂಬರ್​​​​​​​​​​​ ವರೆಗೆ ಕೊರಿಯರ್​ನಲ್ಲಿ ರವಾನೆಯಾದ 80.13 ಕೆಜಿ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟಾರೆ ಮೌಲ್ಯ 39.31 ಕೋಟಿ ರೂಪಾಯಿ ಆಗಿದೆ. 2021-22ರ ಅವಧಿಯಲ್ಲಿ ಡಿಆರ್‌ಐ ಅಧಿಕಾರಿಗಳು ಒಟ್ಟು 833 ಕೆಜಿ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟಾರೆ ಮೌಲ್ಯ ರೂ. 405 ಕೋಟಿ ಎಂಬುದು ವಿಶೇಷ.

For All Latest Updates

ABOUT THE AUTHOR

...view details