ಹೈದರಾಬಾದ್: ಕೊರೊನಾ ವೈರಸ್ ತನ್ನ ಆರ್ಭಟ ಮುಂದುವರೆಸಿದೆ. ಪ್ರಪಂಚದಾದ್ಯಂತ 7,38,33,280 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 16,42,222 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಈವರೆಗೆ 5,18,41,150 ಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ.
ಪ್ರಪಂಚದಾದ್ಯಂತ 7 ಕೋಟಿಗೂ ಅಧಿಕ ಮಂದಿಗೆ ತಗುಲಿದ ಕೊರೊನಾ ಸೋಂಕು - ಕೊರೊನಾ ಪ್ರಕರಣಗಳು
ಅಮೆರಿಕ ಕೊರೊನಾ ಮಹಾಮಾರಿಗೆ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದೆ. ಈವರೆಗೆ ಪ್ರಪಂಚದಾದ್ಯಂತ 7,38,33,280 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 16,42,222ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕು
ಯುಎಸ್ ಕೊರೊನಾ ಮಹಾಮಾರಿಗೆ ಹೆಚ್ಚು ಹಾನಿಗೊಳಗಾದ ರಾಷ್ಟ್ರವಾಗಿದೆ. 1,69,42,980 ಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿದ್ದು, 3,08,091 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಕೋವಿಡ್ 19 ಲಸಿಕೆಯನ್ನು ಯೋಜಿತ ಪ್ರಮಾಣದಲ್ಲಿ ಅರ್ಧದಷ್ಟು ಹಣ ನೀಡಿ ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾದಂತಹ ಮುಂದುವರೆದ ದೇಶಗಳು ಖರೀದಿಸಿವೆ. 2022 ರವರೆಗೆ ವಿಶ್ವದ ಜನಸಂಖ್ಯೆಯ ಕಾಲು ಭಾಗವನ್ನು ಕೂಡ ಕೊರೊನಾ ವ್ಯಾಕ್ಸಿನ್ ತಲುಪುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.