ಫರಿದಾಬಾದ್ (ಹರಿಯಾಣ):ಪ್ರಿಯಕರನ ಜೊತೆ ಜಗಳವಾಡಿದ ಯುವತಿವೋರ್ವಳು ಕೋಪಗೊಂಡುಸೆಕ್ಟರ್ 28ರ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಈ ವೇಳೆ ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಆಕೆಯ ಜೀವ ಉಳಿದಿದೆ.
Video: ಪ್ರಿಯಕರನ ಮೇಲೆ ಕೋಪ.. ಮೆಟ್ರೋ ಸ್ಟೇಷನ್ನಲ್ಲಿ ಯುವತಿ ಆತ್ಮಹತ್ಯೆ ಯತ್ನ!
ಫರಿದಾಬಾದ್ನಲ್ಲಿ ಮೆಟ್ರೋ ನಿಲ್ದಾಣದಲ್ಲಿ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಈ ವೇಳೆ ಪೊಲೀಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಆಕೆಯ ಜೀವ ಉಳಿದಿದೆ.
ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ
ಘಟನೆಯ ವಿಡಿಯೋವನ್ನು ಜನರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಈ ವೇಳೆ ಮೆಟ್ರೋ ನಿಲ್ದಾಣದ ಬಳಿ ಸಂಚಾರ ದಟ್ಟಣೆ ಉಂಟಾಗಿತ್ತು.
ಯುವತಿಯು ಮೆಟ್ರೋ ನಿಲ್ದಾಣದ ಗೋಡೆಯಿಂದ ಜಿಗಿಯಲು ಯತ್ನಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿ ಆಕೆಯನ್ನು ರಕ್ಷಿಸಿದ್ದಾರೆ. ಬಳಿಕ ವಿಚಾರಣೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಪ್ರಿಯಕರನ ಮೇಲೆ ಕೋಪಗೊಂಡು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿಸಿದ್ದಾಳೆ.