ಕರ್ನಾಟಕ

karnataka

ETV Bharat / bharat

ಉದ್ಯಮಿ ಗೌತಮ್ ಅದಾನಿಗೆ Z ಶ್ರೇಣಿ ಭದ್ರತೆ ಕೊಟ್ಟ ಕೇಂದ್ರ: ತಿಂಗಳ ವೆಚ್ಚವೆಷ್ಟು ಗೊತ್ತಾ? - ಮುಖೇಶ್ ಅಂಬಾನಿ

ಉದ್ಯಮಿ ಗೌತಮ್ ಅದಾನಿ ಅವರಿಗೆ ವಿಶ್ವದ ಶ್ರೀಮಂತ ಕೈಗಾರಿಕೋದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ದೊರೆತಿದ್ದು, ಬೆದರಿಕೆಗಳಿರುವ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿತ್ತು.

gautam-adani-gets-z-category-security
ಉದ್ಯಮಿ ಗೌತಮ್ ಅದಾನಿಗೆ ಝೆಡ್ ಶ್ರೇಣಿ ಭದ್ರತೆ ಕೊಟ್ಟ ಕೇಂದ್ರ: ತಿಂಗಳ ವೆಚ್ಚೆಷ್ಟು ಗೊತ್ತಾ?

By

Published : Aug 17, 2022, 9:45 PM IST

ನವದೆಹಲಿ: ದೇಶದ ಪ್ರಮುಖ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರಿಗೆ ಝೆಡ್ ಶ್ರೇಣಿ ಭದ್ರತೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಭದ್ರತಾ ವೆಚ್ಚವನ್ನು ಅವರೇ ಭರಿಸಲಿದ್ದಾರೆ.

ಗುಪ್ತಚರ ಇಲಾಖೆ (ಐಬಿ)ಯ ವರದಿಯ ಆಧಾರದ ಮೇಲೆ ಗೃಹ ಸಚಿವಾಲಯವು ಗೌತಮ್ ಅದಾನಿ ಅವರಿಗೆ ಝೆಡ್ ಶ್ರೇಣಿ ಭದ್ರತೆ ಕಲ್ಪಿಸಲು ತೀರ್ಮಾನಿಸಿದೆ. ಮೂಲಗಳ ಪ್ರಕಾರ, ಈ ಭದ್ರತಾ ತಂಡದಲ್ಲಿ 30ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಇರಲಿದ್ದಾರೆ. ಈ ಭದ್ರತಾ ವೆಚ್ಚವು ಪ್ರತಿ ತಿಂಗಳಿಗೆ 15ರಿಂದ 20 ಲಕ್ಷ ರೂ.ಗಳಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಕೆಲವು ದಿನಗಳಲ್ಲಿ ಅದಾನಿ ಗ್ರೂಪ್‌ನ ಷೇರುಗಳು ವೇಗವಾಗಿ ಏರಿಕೆ ಕಂಡಿವೆ. ಅದಾನಿ ವಿಶ್ವದ ಶ್ರೀಮಂತ ಕೈಗಾರಿಕೋದ್ಯಮಿಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಇದರ ನಡುವೆ ಅವರಿಗೆ ಬೆದರಿಕೆಗಳಿರುವ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿತ್ತು ಎಂದು ವರದಿಯಾಗಿದೆ.

ಈ ಹಿಂದೆ ದೇಶದ ಮತ್ತೊಬ್ಬ ಪ್ರಮುಖ ಉದ್ಯಮಿಯಾದ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರಿಗೂ ಗೃಹ ಸಚಿವಾಲಯವು ಝೆಡ್ ಕೆಟಗರಿ ಭದ್ರತೆ ನೀಡಿದ್ದು, ಅದರ ವೆಚ್ಚವನ್ನೂ ಕೂಡ ಅವರೇ ಭರಿಸುತ್ತಿದ್ದಾರೆ.

ಇದನ್ನೂ ಓದಿ:ಅಲ್ಪಾವಧಿ ಕೃಷಿ ಸಾಲದ ಮೇಲೆ ಶೇ.1.5ರಷ್ಟು ಬಡ್ಡಿ ಸಬ್ಸಿಡಿ ಮರುಸ್ಥಾಪನೆ: ಕೇಂದ್ರ ಸಂಪುಟ ಅನುಮೋದನೆ

ABOUT THE AUTHOR

...view details