ಕರ್ನಾಟಕ

karnataka

ETV Bharat / bharat

ಅಧಿಕಾರವನ್ನ ಅಭಿವೃದ್ಧಿಗೆ ಹೇಗೆ ಬಳಸಿಕೊಳ್ಳಬೇಕೆಂಬುದನ್ನ ಗಡ್ಕರಿ ತೋರಿಸಿದ್ದಾರೆ.. ಶರದ್​ ಪವಾರ್​ ಗುಣಗಾನ

ವಿವಿಧ ಯೋಜನೆಗಳಿಗೆ ಅಡಿಗಲ್ಲು ಹಾಕುವ ಸಮಾರಂಭ ನಡೆದಾಗ ಸುಮಾರು ವರ್ಷಗಳ ಕಾಲ ಕೆಲಸ ಆರಂಭ ಆಗುವುದಿಲ್ಲ. ಆದರೆ, ಗಡ್ಕರಿ ಅವರ ಯೋಜನೆಗಳ ವಿಷಯಕ್ಕೆ ಬಂದರೆ, ಅಡಿಪಾಯ ಹಾಕಿದ ಕೆಲವೇ ದಿನಗಳಲ್ಲೇ ಕೆಲಸ ಪ್ರಾರಂಭವಾಗುತ್ತವೆ..

Gadkari
Gadkari

By

Published : Oct 2, 2021, 7:18 PM IST

ಪುಣೆ(ಮಹಾರಾಷ್ಟ್ರ):ಅಭಿವೃದ್ಧಿಗಾಗಿಅಧಿಕಾರವನ್ನ ಯಾವ ರೀತಿಯಾಗಿ ಬಳಸಿಕೊಳ್ಳಬೇಕೆಂಬುದನ್ನ ನಿತಿನ್​ ಗಡ್ಕರಿ ಅವರು ತೋರಿಸಿ ಕೊಟ್ಟಿದ್ದಾರೆಂದು ಹೇಳುವ ಮೂಲಕ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್ ಅವರು ಕೇಂದ್ರ ಸಚಿವರ​​ ಗುಣಗಾನ ಮಾಡಿದ್ದಾರೆ.

ಮಹಾರಾಷ್ಟ್ರದ ಅಹಮದ್​ನಗರದಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಭಾಗಿಯಾಗಿದ್ದ ವೇಳೆ ಶರದ್​ ಪವಾರ್ ಈ ಮೆಚ್ಚುಗೆಯ ಮಾತು ಹೇಳಿದ್ದಾರೆ. ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಾರಣವಿದೆ.

ನಿತಿನ್ ಗಡ್ಕರಿ ಅವರು ಅಹಮದ್​ನಗರದಲ್ಲಿ ಅನೇಕ ಯೋಜನೆಗಳನ್ನ ಉದ್ಘಾಟನೆ ಮಾಡಲಿದ್ದಾರೆ. ಈ ಮೂಲಕ ನಗರದಲ್ಲಿ ಬಹುಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಹೀಗಾಗಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ ಎಂದರು.

ವಿವಿಧ ಯೋಜನೆಗಳಿಗೆ ಅಡಿಗಲ್ಲು ಹಾಕುವ ಸಮಾರಂಭ ನಡೆದಾಗ ಸುಮಾರು ವರ್ಷಗಳ ಕಾಲ ಕೆಲಸ ಆರಂಭ ಆಗುವುದಿಲ್ಲ. ಆದರೆ, ಗಡ್ಕರಿ ಅವರ ಯೋಜನೆಗಳ ವಿಷಯಕ್ಕೆ ಬಂದರೆ, ಅಡಿಪಾಯ ಹಾಕಿದ ಕೆಲವೇ ದಿನಗಳಲ್ಲೇ ಕೆಲಸ ಪ್ರಾರಂಭವಾಗುತ್ತವೆ ಎಂದರು.

ಇದನ್ನೂ ಓದಿರಿ:ರೈತರ ಪ್ರತಿಭಟನೆಗೆ ಮಣಿದ ಕೇಂದ್ರ.. ನಾಳೆಯಿಂದಲೇ ಭತ್ತ ಖರೀದಿಗೆ ಗ್ರೀನ್ ಸಿಗ್ನಲ್..

ಓರ್ವ ಜನಪ್ರತಿನಿಧಿಯಾಗಿ ದೇಶದ ಅಭಿವೃದ್ಧಿಗೆ ನಿತಿನ್​ ಗಡ್ಕರಿ ಹೇಗೆ ಕೆಲಸ ಮಾಡ್ತಾರೆಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದಿರುವ ಶರದ್ ಪವಾರ್, ಗಡ್ಕರಿ ಅವರು ರಸ್ತೆ ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲೇ ಸುಮಾರು 5 ಸಾವಿರ ಕಿ.ಮೀ. ಕೆಲಸ ಮಾಡಿದ್ದರು. ಆದರೆ, ಅಧಿಕಾರ ವಹಿಸಿಕೊಂಡ ನಂತರ ಅದರ ಸಂಖ್ಯೆ 12,000 ಕಿ.ಮೀ. ದಾಟಿದೆ ಎಂದರು.

ABOUT THE AUTHOR

...view details