ಸೊಲ್ಲಾಪುರ/ಮಹಾರಾಷ್ಟ್ರ:ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಜನ್ಮದಿನ ಹಿನ್ನೆಲೆ ಸೊಲ್ಲಾಪುರದಲ್ಲಿ ಕಾಂಗ್ರೆಸ್ ಶನಿವಾರ ಜನರಿಗೆ ಉಚಿತ ಪೆಟ್ರೋಲ್ ನೀಡಿದೆ.
ಸುಶೀಲ್ ಕುಮಾರ್ ಹೆಸರಿನ ಜನರಿಗೆ ಕಾಂಗ್ರೆಸ್ 501 ರೂಪಾಯಿಯ ಉಚಿತ ಪೆಟ್ರೋಲ್ ನೀಡಿದೆ. ಕಾಂಗ್ರೆಸ್ ಕಾರ್ಪೊರೇಟರ್ ಫಿರ್ದೋಸ್ ಪಟೇಲ್ ಪರವಾಗಿ ಪೆಟ್ರೋಲ್ ವಿತರಿಸಲಾಯಿತು. ಸುಶೀಲ್ ಕುಮಾರ್ ಹೆಸರಿದ್ದು, ಆಧಾರ್ ಕಾರ್ಡ್ ತೋರಿಸಿದವರಿಗೆ 501 ರೂಪಾಯಿಗಳ ಪೆಟ್ರೋಲ್ ಅನ್ನು ಉಚಿತವಾಗಿ ನೀಡಲಾಗಿದೆ.