ದುರ್ಗ್ (ಛತ್ತೀಸ್‌ಗಢ):ಮುತ್ತಿನ ಹಾರ ಮಾಡಿ ಕೊಡುವ ಹೆಸರಿನಲ್ಲಿ 6 ಸಾವಿರ ಮಹಿಳೆಯರಿಗೆ ಸುಮಾರು 2 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಇಬ್ಬರು ವಂಚಕರನ್ನು ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸಾನು ಕುಮಾರ್ ಮತ್ತು ಸಂಜಯ್ ಕುಮಾರ್ ಎಂದು ಗುರುತಿಸಲಾದ ಈ ಇಬ್ಬರು ಆರೋಪಿಗಳನ್ನು ವಾರಣಾಸಿ ಮತ್ತು ಪಾಟ್ನಾದಿಂದ ಸೋಮವಾರ ಬಂಧಿಸಲಾಗಿದೆ. ಈ ಹಿಂದೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮುತ್ತಿನ ಹಾರಗಳನ್ನು ತಯಾರಿಸುವ ಯೋಜನೆ:ಪೊಲೀಸರ ಪ್ರಕಾರ, "ಇಬ್ಬರು ಅಂತಾರಾಜ್ಯ ವಂಚಕರಾಗಿದ್ದು, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಮಹಿಳೆಯರಿಗೆ ವಂಚನೆ ಮಾಡಿದ್ದಾರೆ. ಆರೋಪಿಗಳು ನಕಲಿ ದಾಖಲೆಗಳನ್ನು ಬಳಸಿ, ದುರ್ಗ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ವ್ಯಾಪಾರ ಪರವಾನಗಿಯನ್ನು ಪಡೆದುಕೊಂಡಿದ್ದರು. ಬಳಿಕ ಅವರು ಮಹಿಳೆಯರನ್ನು ಟಾರ್ಗೆಟ್ ಮಾಡಿ, ಅವರಿಗೆ ಮುತ್ತಿನ ಹಾರಗಳನ್ನು ತಯಾರಿಸುವ ಯೋಜನೆಯನ್ನು ಆರಂಭಿಸಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಶಿಂಧೆ ಗುಂಪಿನ ಕಾರ್ಯಕರ್ತರಿಂದ ಉದ್ಧವ್ ಠಾಕ್ರೆ ಗುಂಪಿನ ಮಹಿಳೆ ಮೇಲೆ ಹಲ್ಲೆ
ಪೊಲೀಸರು ಹೇಳಿದ್ದೇನು?: ಇವರಿಬ್ಬರು ಆರೋಪಿಗಳು ದೆಹಲಿಯ ಸದರ್ ಬಜಾರ್‌ನಿಂದ 40 ಲಕ್ಷ ರೂಪಾಯಿ ಮೌಲ್ಯದ ಮುತ್ತುಗಳನ್ನು ಖರೀದಿ ಮಾಡಿದ್ದಾರೆ. ಮುತ್ತಿನ ಹಾರ ಮಾಡುವ ಆರ್ಡರ್‌ಗಾಗಿ ಮಹಿಳೆಯರಿಂದ 2,500 ರೂಪಾಯಿ ಮುಂಗಡ ಪಡೆದು 5 ಕೆಜಿ ಮುತ್ತುಗಳನ್ನು ನೀಡಿದ್ದರು. ಆರಂಭದಲ್ಲಿ ಈ ಕಾರ್ಯ ಪೂರ್ಣಗೊಳಿಸಿದ ಮಹಿಳೆಯರಿಗೆ 3.500 ರೂ. ನೀಡಲಾಯಿತು. ಅನೇಕ ಮಹಿಳೆಯರು ಈ ವಂಚನೆಯ ಜಾಲದಲ್ಲಿ ಸಿಕಿದ್ದಾರೆ. ಈ ಯೋಜನೆಯಿಂದ ಇಬ್ಬರು ಆರೋಪಿಗಳು ಸುಮಾರು 2 ಕೋಟಿ ರೂ.ವರೆಗೆ ಸಂಗ್ರಹಿಸಿ ಪರಾರಿಯಾಗಿದ್ದರು. ವಂಚನೆಗೊಳಗಾದ ಮಹಿಳೆಯರು ಆರೋಪಿಗಳ ವಿರುದ್ಧ ವಂಚನೆಯ ದೂರು ನೀಡಿದ ನಂತರ, ವಿಷಯ ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಒಬ್ಬ ಆರೋಪಿ ಆರಂಭದಲ್ಲಿ ಬಿಹಾರದಿಂದ ನೇಪಾಳಕ್ಕೆ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ:ಇಬ್ಬರು ಅಪ್ರಾಪ್ತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ
ಪಾಪಗಳಿಂದ ಶುದ್ಧಿಗೆ ಪಾರಿವಾಳ ತಂದಿದ್ದ ಆರೋಪಿಗಳು:ಸುದ್ದಿಗಾರರೊಂದಿಗೆ ಮಾತನಾಡಿದ ದುರ್ಗ್ ಎಸ್ಪಿ ಅಭಿಷೇಕ್ ಪಲ್ಲವ್, ''ಆರೋಪಿಗಳು ಮಹಿಳೆಯರಿಗೆ 25,000 ಕೆಜಿಗೂ ಹೆಚ್ಚು ಮುತ್ತುಗಳನ್ನು ನೀಡಿ, ಸುಮಾರು 2 ಕೋಟಿ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ವಂಚಕರು 30 ಉದ್ಯೋಗಿಗಳನ್ನು ಸಹ ನೇಮಿಸಿಕೊಂಡಿದ್ದಾರೆ" ಎಂದು ಹೇಳಿದರು. ''ಆರೋಪಿಗಳು ಮಹಿಳೆಯರನ್ನು ವಂಚಿಸಿ ಪರಾರಿಯಾಗಿದ್ದಾರೆ. ದುಬಾರಿ ಎಸ್‌ಯುವಿ ವಾಹನ ಖರೀದಿಸಲು ಮತ್ತು ಎರಡು ಅಂತಸ್ತಿನ ಮನೆಯನ್ನು ನಿರ್ಮಿಸಲು ಹಣವನ್ನು ಎಗರಿಸಿದ್ದಾರೆ. 'ಪಾಪಗಳಿಂದ ಶುದ್ಧವಾಗಲು' ಇಬ್ಬರು ಆರೋಪಿಗಳು 1.5 ಲಕ್ಷ ರೂಪಾಯಿ ಮೌಲ್ಯದ ಪಾರಿವಾಳಗಳನ್ನು ತಂದ್ದರು'' ಎಂದು ಎಸ್‌ಪಿ ತಿಳಿಸಿದರು.
ಇದನ್ನೂ ಓದಿ:ಪತ್ನಿ, ಪುತ್ರನನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟ ಎಎಸ್ಐ