ಕರ್ನಾಟಕ

karnataka

ETV Bharat / bharat

Watch: ಮಕ್ಕಳೊಂದಿಗೆ ಜೀವಂತ ಸಮಾಧಿಯಾಗುವ ಮುನ್ನ ಪ್ರವಾಹದ ವಿಡಿಯೋ ಮಾಡಿದ್ದ ಫೌಜಿಯಾ - woman shot flood video before death

ಇಡುಕ್ಕಿಯಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ನಾಲ್ವರು ಪುಟ್ಟ ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದರು. ಇವರಲ್ಲಿ ಮಹಿಳೆ ದುರಂತ ನಡೆಯುವುದಕ್ಕೂ ಮುನ್ನ ಪ್ರವಾಹದ ವಿಡಿಯೋ ಮಾಡಿ ಸಂಬಂಧಿಕರಿಗೆ ವಾಟ್ಸ್ ಆ್ಯಪ್​ ಮೂಲಕ ಕಳುಹಿಸಿದ್ದರು.

ತನ್ನ ಮಕ್ಕಳೊಂದಿಗೆ ಜೀವಂತ ಸಮಾಧಿಯಾಗುವ ಮುನ್ನ ಪ್ರವಾಹದ ವಿಡಿಯೋ ಮಾಡಿದ್ದ ಫೌಜಿಯಾ
ತನ್ನ ಮಕ್ಕಳೊಂದಿಗೆ ಜೀವಂತ ಸಮಾಧಿಯಾಗುವ ಮುನ್ನ ಪ್ರವಾಹದ ವಿಡಿಯೋ ಮಾಡಿದ್ದ ಫೌಜಿಯಾ

By

Published : Oct 18, 2021, 4:57 PM IST

Updated : Oct 18, 2021, 7:44 PM IST

ಇಡುಕ್ಕಿ (ಕೇರಳ):ವರುಣನ ಆರ್ಭಟದಿಂದಾಗಿ ಕೇರಳ ರಾಜ್ಯ ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ಸಾಕ್ಷಿಯಾಗಿದ್ದು, ಈವರೆಗೆ 27 ಜನರನ್ನು ಬಲಿ ಪಡೆದಿದೆ. ಭೂಕುಸಿತದಲ್ಲಿ ಸಿಲುಕಿ ತನ್ನ ಮಕ್ಕಳೊಂದಿಗೆ ಸಾಯುವ ಕೆಲವೇ ಕ್ಷಣಗಳ ಮುನ್ನ ಮಹಿಳೆಯೊಬ್ಬರು ಚಿತ್ರೀಕರಿಸಿದ್ದ ಪ್ರವಾಹದ ವಿಡಿಯೋ ಈಗ ವೈರಲ್​ ಆಗುತ್ತಿದೆ.

ಇಡುಕ್ಕಿಯಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದರು. ಮೃತರನ್ನು ಫೌಜಿಯಾ (28), ಆಕೆಯ ಇಬ್ಬರು ಮಕ್ಕಳಾದ ಅಮೀನ್ ಸಿಯಾದ್ (7)​, ಆಮ್ನಾ ಸಿಯಾದ್ (7) ಹಾಗೂ ಆಕೆಯ ಸಂಬಂಧಿ ಶಾಜಿ ಚಿರಯಿಲ್ (55), ಆಕೆಯ ಸೋದರಳಿಯರಾದ ಅಫ್ಜಾನ್ ಫೈಸಲ್ (9), ಅಹಿಯಾನ್ ಫೈಸಲ್​ (4) ಎಂದು ಗುರುತಿಸಲಾಗಿದೆ.

ತನ್ನ ಮಕ್ಕಳೊಂದಿಗೆ ಜೀವಂತ ಸಮಾಧಿಯಾಗುವ ಮುನ್ನ ಪ್ರವಾಹದ ವಿಡಿಯೋ ಮಾಡಿದ್ದ ಫೌಜಿಯಾ

ಇದನ್ನೂ ಓದಿ: Watch: ಕೇರಳದಲ್ಲಿ ಪ್ರವಾಹದ ನಡುವೆ ವಿವಾಹ; ಅಡುಗೆ ಪಾತ್ರೆಯೇ ವೆಡ್ಡಿಂಗ್​ ಕಾರು!

ಈ ದುರಂತ ಸಂಭವಿಸುವ ಮುನ್ನ ಫೌಜಿಯಾ, ತನ್ನ ಮನೆಗೆ ಹಾಗೂ ಸುತ್ತಮುತ್ತಲೂ ಹರಿದು ಬರುತ್ತಿರುವ ಪ್ರವಾಹದ ನೀರಿನ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದು ಸಂಬಂಧಿಕರಿಗೆ ವಾಟ್ಸ್ ಆ್ಯಪ್​ ಮೂಲಕ ಕಳುಹಿಸಿದ್ದರು. ಈ ವಿಡಿಯೋದಲ್ಲಿ ಆಕೆಯ ಇಬ್ಬರು ಮಕ್ಕಳು ಸಹ ಕಾಣಿಸುತ್ತಾರೆ. ಕೆಲವೇ ಕ್ಷಣಗಳಲ್ಲಿ ಆಕೆಯ ಮನೆಯ ಬಳಿ ದೊಡ್ಡ ಭೂಕುಸಿತ ಸಂಭವಿಸಿದ್ದು, ಐವರು ಜೀವಂತ ಸಮಾಧಿಯಾದರು.

ಇದನ್ನೂ ಓದಿ: ಕೇರಳದಲ್ಲಿ ನಿಲ್ಲದ ವರುಣಾರ್ಭಟ: ಸಾವಿನ ಸಂಖ್ಯೆ 27 ಕ್ಕೆ ಏರಿಕೆ, ಅಣೆಕಟ್ಟಿನ ಬಾಗಿಲು ಓಪನ್​ ಬಗ್ಗೆ ನಿರ್ಧರಿಸಲು ತಜ್ಞರ ತಂಡ ರಚನೆ

ಇಂದು ಬೆಳಗ್ಗೆ ಅವರ ಮೃತದೇಹಗಳು ಪತ್ತೆಯಾಗಿದ್ದು, ಆಮ್ನಾ, ಅಫ್ಜಾನ್ ಮತ್ತು ಅಹಿಯಾನ್ ಮೃತದೇಹಗಳು ಒಬ್ಬರಿಗೊಬ್ಬರು ಅಪ್ಪಿಕೊಂಡಿರುವ ಸ್ಥಿತಿಯಲ್ಲಿ, ಶಾಜಿ ಚಿರಯಿಲ್ ಅವರ ಮೃತದೇಹ ಮಣಿಮಾಲಾ ನದಿಯಲ್ಲಿ ಪತ್ತೆಯಾಗಿದೆ.

Last Updated : Oct 18, 2021, 7:44 PM IST

ABOUT THE AUTHOR

...view details