ದುರ್ಗ್:ಜಿಲ್ಲೆಯಲ್ಲಿ ಕೊರೊನಾ ಸೋಂಕು ವೇಗವಾಗಿ ಹೆಚ್ಚುತ್ತಿದೆ. ಇದರೊಂದಿಗೆ ಕೊರೊನಾ ಮಾರಕ ಪರಿಣಾಮಗಳು ಸಹ ಮುಂಚೂಣಿಗೆ ಬರುತ್ತಿವೆ.
ಭಿಲೈಯಲ್ಲಿ 10 ದಿನಗಳ ಅಂತರದಲ್ಲಿ ಕೊರೊನಾ ಒಂದು ಕುಟುಂಬದ ಸಂತೋಷವನ್ನೇ ಕಸಿದುಕೊಂಡಿದೆ. ಒಂದೇ ಕುಟುಂಬದ ನಾಲ್ವರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ದಂಪತಿ ಮತ್ತು ಅವರ ಇಬ್ಬರು ಗಂಡು ಮಕ್ಕಳು ಕೋವಿಡ್ಗೆ ಮೃತಪಟ್ಟಿದ್ದಾರೆ.
ಭಿಲೈ ಪಟ್ಟಣದ ಸೆಕ್ಟರ್-4 ರಲ್ಲಿ ವಾಸಿಸುವ ಹರೇಂದ್ರ ಸಿಂಗ್ ರಾವತ್ ಅವರಿಗೆ ಮೊದಲು ಸೋಂಕು ತಗುಲಿತು. ಅವರು ಮಾರ್ಚ್ 16 ರಂದು ಕೊರೊನಾದಿಂದ ನಿಧನರಾದರು. ಇದರ ನಂತರ ಅವರ ಹಿರಿಯ ಮಗ ಮನೋಜ್ ಸಿಂಗ್ ರಾವತ್ ಕೊರೊನಾದಿಂದ ಬಳಲುತ್ತಿದ್ದರು. ಅವರನ್ನು ರಾಯಪುರ ಏಮ್ಸ್ಗೆ ದಾಖಲಿಸಲಾಯಿತು. ಆದರೆ ಮಾರ್ಚ್ 21 ರಂದು ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟರು. ಇದರ ನಂತರ ಹರೇಂದ್ರ ಸಿಂಗ್ ರಾವತ್ರ ಪತ್ನಿ ಕೌಶಲ್ಯ ರಾವತ್ ಮತ್ತು ಕಿರಿಯ ಮಗ ಮನೀಶ್ ರಾವತ್ಗೆ ಮಾರ್ಚ್ 25 ರಂದು ಕೊರೊನಾದಿಂದ ನಿಧನರಾದರು.
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದಕ್ಕೂ ಮೊದಲು, ಸೆಪ್ಟೆಂಬರ್ 28, 2020 ರಂದು, ದುರ್ಗ್ ಜಿಲ್ಲೆಯಲ್ಲಿ ಅತಿ ಹೆಚ್ಚು 519 ರೋಗಿಗಳು ಕಂಡುಬಂದಿದ್ದವು. ಅದರ ನಂತರ, 23 ಮಾರ್ಚ್ 2021 ರಂದು 690 ಸೋಂಕುಗಳು ಪತ್ತೆಯಾಗಿವೆ.