ಚೈಬಾಸ್(ಜಾರ್ಖಂಡ್) :ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಮಾಡಿರುವ ಘಟನೆ ಜಾರ್ಖಂಡ್ನ ಚೈಬಾಸ್ನಲ್ಲಿ ನಡೆದಿದೆ. ಇದರಲ್ಲಿ ಆರು ವರ್ಷದ ಮಗು ಸಹ ಸೇರಿದೆ. ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬುದರ ಬಗ್ಗೆ ಈವರೆಗೆ ಮಾಹಿತಿ ಲಭ್ಯವಾಗಿಲ್ಲ.
ಹಟ್ಗಮ್‌ಹರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಡಪೋಸಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎಲ್ಲರ ಮೃತದೇಹಗಳು ಊರ ಹೊರಗಿನ ಗದ್ದೆಯಲ್ಲಿ ಪತ್ತೆಯಾಗಿವೆ. ಘಟನೆಯಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿರಿ:ವೇಶ್ಯಾವಾಟಿಕೆಗೆ ಬಾಲಕಿಯ ಮಾರಾಟ ಯತ್ನ.. ಚಾಣಾಕ್ಷತೆಯಿಂದ ಮೂವರು ಮಹಿಳೆಯರನ್ನು ಬಂಧಿಸಿದ ಪೊಲೀಸರು
ಮೃತರನ್ನ ಓನಮುನಿ(26) ಆತನ ಪತ್ನಿ ಮಣಿ (22), ಮಗನಾದ ಮುಗ್ರು (6) ಹಾಗೂ ಓನಮುನಿಯ ಸಹೋದರನಾದ ಗೊಬರೋ(22) ಎಂದು ಗುರುತಿಸಲಾಗಿದೆ. ಹರಿತವಾದ ಆಯುಧ ಬಳಕೆ ಮಾಡಿ ಇವರ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮೃತದೇಹಗಳನ್ನ ಈಗಾಗಲೇ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.