ಕರ್ನಾಟಕ

karnataka

ETV Bharat / bharat

ಮೇಘಾಲಯ: ಬಿಜೆಪಿ ಸೇರಿದ ನಾಲ್ವರು ಹಾಲಿ ಶಾಸಕರು - ಈಟಿವಿ ಭಾರತ ಕರ್ನಾಟಕ

ಮೇಘಾಲಯದಲ್ಲಿ ನಾಲ್ವರು ಹಾಲಿ ಶಾಸಕರು ಬುಧವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

Four Meghalaya MLAs join BJP
ಬಿಜೆಪಿ ಸೇರಿದ ನಾಲ್ವರು ಹಾಲಿ ಶಾಸಕರು

By

Published : Dec 14, 2022, 9:46 PM IST

Updated : Dec 14, 2022, 10:34 PM IST

ನವ ದೆಹಲಿ: ಮೇಘಾಲಯದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇರುವಾಗಲೇ ಅಚ್ಚರಿಯ ಬೆಳವಣಿಗೆ ನಡೆದಿದ್ದು, ನಾಲ್ವರು ಹಾಲಿ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ಎನ್‌ಪಿಪಿಯ ಶಾಸಕರಾದ ಬೆನೆಡಿಕ್‌ ಮರಾಕ್ ಮತ್ತು ಫೆರ್ಲಿನ್ ಸಂಗ್ಮಾ, ತೃಣಮೂಲ ಕಾಂಗ್ರೆಸ್‌ ಶಾಸಕ ಹಿಮಾಲಯ ಮುಕ್ತನ್‌ ಶಾಂಗ್‌ಲ್ಪಿಯಾಂಗ್‌ ಹಾಗೂ ಪಕ್ಷೇತರ ಶಾಸಕ ಸ್ಯಾಮ್ಲುಯೆಲ್‌ ಎಂ. ಸಂಗ್ಮಾ ಬಿಜೆಪಿ ಸೇರಿದರು.

ಮೇಘಾಲಯ ಉಸ್ತುವಾರಿ ಹಾಗು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾತನಾಡಿ, ಮೇಘಾಲಯದಂತಹ ರಾಜ್ಯದಲ್ಲಿ ನಾಲ್ವರು ಶಾಸಕರು ಬಿಜೆಪಿ ಸೇರಿರುವುದು ದೊಡ್ಡ ವಿಷಯ. ಕಳೆದ ಚುನಾವಣೆಯಲ್ಲಿ ನಾವು ಕೇವಲ ಎರಡು ಸ್ಥಾನಗಳಿಸಿದ್ದೆವು. ಈ ಮೂಲಕ ರಾಜ್ಯದಲ್ಲಿ ನೆಲೆ ಕಂಡುಕೊಂಡಿದ್ದೆವು. ಆದರೆ ಈ ಬಾರಿ ಮೇಘಾಲಯದಲ್ಲಿ ನಾವು ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬೆಳಗಾವಿ ಗಡಿ ವಿವಾದ: ಸಾಂವಿಧಾನಿಕ ಮಾರ್ಗದ ಮೂಲಕವೇ ಪರಿಹಾರ- ಅಮಿತ್ ಶಾ

Last Updated : Dec 14, 2022, 10:34 PM IST

ABOUT THE AUTHOR

...view details