ಹೈದರಾಬಾದ್(ತೆಲಂಗಾಣ): ಈಜಲು ಹೋಗಿ ನಾಲ್ವರು ಮಕ್ಕಳು ನೀರುಪಾಲಾದ ಘಟನೆ ರಂಗಾರೆಡ್ಡಿ ಜಿಲ್ಲೆಯ ಯಾಚರಂ ಮಂಡಲದ ತಾಡಿಪರ್ತಿ ಗ್ರಾಮದಲ್ಲಿ ನಡೆದಿದೆ. ಸಮ್ರೀನ್, ಖಾಲಿದ್, ರೆಹಾನ್ ಮತ್ತು ಇಮ್ರಾನ್ ಮೃತ ಬಾಲಕರು.
ದರ್ಗಾಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ ಈಜಲು ಎರ್ರಕುಂಟಾ ಹೊಂಡಕ್ಕೆ ಇಳಿದಿದ್ದಾರೆ. ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದು, ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.