ಅಹಮದಾಬಾದ್:ನಗರದಲ್ಲಿ ಒಂದರ ಹಿಂದೆ ಒಂದರಂತೆ ಮಾನವನ ಅವಶೇಷಗಳು ಪತ್ತೆಯಾಗುತ್ತಿವೆ. ಇದರಿಂದ ಇಡೀ ನಗರವೇ ಬೆಚ್ಚಿಬಿದ್ದಿದೆ. ಕ್ರೂರವಾಗಿ ಹತ್ಯೆ ಮಾಡಿದ ನಂತರ ದೇಹದ ಭಾಗಗಳನ್ನು ಕತ್ತರಿಸಿ ಕಸದ ರಾಶಿಯೊಳಗೆ ಎಸೆದು ಹೋಗಲಾಗುತ್ತಿದೆ. ಇದೀಗ ಹಂತಕರನ್ನು ಎಲಿಸ್ಬ್ರಿಡ್ಜ್ ಪೊಲೀಸರು ಹುಡುಕಲು ಮುಂದಾಗಿದ್ದಾರೆ. ಅಲ್ಲದೇ, ಯಾರನ್ನು ಹತ್ಯೆ ಮಾಡಲಾಗಿದೆ. ಏಕೆ ಮತ್ತು ಯಾರಿಂದ ಹತ್ಯೆಯಾಗಿದೆ ಎಂಬ ಬಗ್ಗೆಯೂ ತನಿಖೆ ಚುರುಕುಗೊಂಡಿದೆ.
ಮೃತದೇಹ ಪತ್ತೆ ಬಗ್ಗೆ ಪೊಲೀಸ್ ಅಧಿಕಾರಿ ಮಾತನಾಡಿರುವುದು ಎರಡು ದಿನಗಳ ಹಿಂದೆ ನಗರದ ವಸಾನ ಪ್ರದೇಶದ ಸೊರೈನಗರದಲ್ಲಿ ಕೊಲೆಯಾದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಆ ವೇಳೆ ಮುಂಡ ಮಾತ್ರ ಸಿಕ್ಕಿದ್ದು, ಎರಡು ಕೈ -ಕಾಲು, ತಲೆ ಪತ್ತೆಯಾಗಿಲ್ಲ. ಕೃತ್ಯದ ಕುರಿತು ಈಗಾಗಲೇ ವಸಾನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಎಲಿಸ್ಬ್ರಿಡ್ಜ್ ಪ್ರದೇಶದ ಕಲ್ಗಿ ಕ್ರಾಸ್ ರಸ್ತೆ ಬಳಿ ಇಂದು ಬೆಳಗ್ಗೆ ಮಾನವ ದೇಹದ ಎರಡು ಕಾಲುಗಳು ಪತ್ತೆಯಾಗಿವೆ. ಎಲ್ಲಿಸ್ಬ್ರಿಡ್ಜ್ ಜೊತೆಗೆ ವಸಾನ ಪೊಲೀಸರು ತನಿಖೆ ನಡೆಸಿದ್ದಾರೆ. ಒಂದರ ಹಿಂದೆ ಒಂದರಂತೆ ಮಾನವನ ಅಂಗಾಂಗಗಳು ಪತ್ತೆಯಾಗಿರುವುದರಿಂದ ಹಂತಕ ಪೊಲೀಸರಿಗೆ ಸವಾಲೆಸೆದಂತಿದೆ.
ತನಿಖೆ ಚುರುಕು:ಈಗಾಗಲೇ ವೈಜ್ಞಾನಿಕ ತನಿಖೆಯನ್ನು ಪ್ರಾರಂಭಿಸಲಾಗಿದೆ. ಮಾನವ ದೇಹದ ಎರಡೂ ಭಾಗಗಳ ಡಿಎನ್ಎ ಪರೀಕ್ಷೆ ನಡೆಯಲಿದೆ. ಹಾಗಾದರೆ, ಈ ಎರಡು ತುಣುಕುಗಳು ಒಂದೇ ವ್ಯಕ್ತಿಗೆ ಸೇರಿದ್ದೋ ಅಥವಾ ಬೇರೆ ಬೇರೆಯೋ ಎಂಬ ಸತ್ಯ ಹೊರಬೀಳಲಿದೆ. ಇದರೊಂದಿಗೆ ಮೃತ ವ್ಯಕ್ತಿ ಯಾರು? ಎಂದು ಕಂಡುಹಿಡಿಯಲು ಪೊಲೀಸರು ಮುಂದಾಗಿದ್ದಾರೆ.
ಓದಿ:ರಿಷಿಕೇಶದಲ್ಲಿ 300 ಅಡಿ ಕಂದಕಕ್ಕೆ ಉರುಳಿದ ಟ್ರಕ್, ಚಾಲಕ ಕಾಣೆ: VIDEO