ಕರ್ನಾಟಕ

karnataka

ETV Bharat / bharat

ಕೋವಿಡ್ ನಿಯಂತ್ರಣಕ್ಕೆ ರ‍್ಯಾಲಿ,ಮುಷ್ಕರ, ಹಬ್ಬಗಳನ್ನ ನಿಷೇಧಿಸಿ: ಮುಖ್ಯ ನ್ಯಾಯಮೂರ್ತಿಗೆ ಕೈ ಮುಖಂಡನ ಪತ್ರ! - ಮಾಜಿ ಸಚಿವ ಅಶ್ವಿನ್​ ಕುಮಾರ್

ಮಹಾಮಾರಿ ಕೊರೊನಾ ವೈರಸ್ ಹಾವಳಿ ತಡೆಗಟ್ಟಲು ತಕ್ಷಣವೇ ರಾಜಕೀಯ ರ‍್ಯಾಲಿ, ಧಾರ್ಮಿಕ ಹಬ್ಬ ನಿಷೇಧಿಸುವಂತೆ ಕಾಂಗ್ರೆಸ್​ ಹಿರಿಯ ಮುಖಂಡ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.

Ashwani Kumar
Ashwani Kumar

By

Published : Apr 17, 2021, 3:35 PM IST

ನವದೆಹಲಿ:ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಹೆಚ್ಚಾಗಿದ್ದು, ಇದರ ಮಧ್ಯೆ ಸಹ ರಾಜಕೀಯ ರ‍್ಯಾಲಿ, ಪ್ರತಿಭಟನೆ, ಧಾರ್ಮಿಕ ಕಾರ್ಯಕ್ರಮ ಹಾಗೂ ಹಬ್ಬಗಳು ನಡೆಯುತ್ತಿದ್ದು, ತಕ್ಷಣವೇ ಇವುಗಳನ್ನ ನಿಷೇಧಿಸುವಂತೆ ಕಾಂಗ್ರೆಸ್​ ಮುಖಂಡ ಭಾರತದ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್​ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಅಶ್ವಿನ್​ ಕುಮಾರ್ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದು, ಕೋವಿಡ್ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಿ ಎಂದಿದ್ದಾರೆ. ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನವೊಂದಕ್ಕೆ ಎರಡು ಲಕ್ಷ ದಾಟಿದೆ. ಸದ್ಯ ಮಹಾಮಾರಿ ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ. ಮಾನವ ಜೀವನಕ್ಕೆ ಅಪಾಯವಾಗಿರುವ ಕಾರಣ, ಸಾಂವಿಧಾನಿಕ ಜವಾಬ್ದಾರಿ ಪರಿಗಣಿಸಿ ನ್ಯಾಯಾಲಯ ಈ ಮಹತ್ವದ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.

ದೇಶದಲ್ಲಿನ ರಾಜಕೀಯ ರ‍್ಯಾಲಿ, ಪ್ರತಿಭಟನಾ ಸಭೆ, ಧಾರ್ಮಿಕ ಸಮಾರಂಭ ನಿಷೇಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಮೋಟು ಹೊರಡಿಸಬೇಕು ಎಂದಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದಿದ್ದಾರೆ.

ಕೊರೊನಾ ಲಸಿಕೆ ಎಲ್ಲ ವಯೋಮಾನದವರಿಗೆ ಲಭ್ಯವಾಗುವಂತೆ ಮಾಡಲು ಸಾಧ್ಯವಾದಷ್ಟು ಸ್ಥಳದಲ್ಲೇ ಲಸಿಕೆ ನೀಡಲು ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಅವರು ತಿಳಿಸಿದ್ದಾರೆ. ರಾಜಕೀಯ ರ‍್ಯಾಲಿ, ಧಾರ್ಮಿಕ ಸಭೆ ಮತ್ತು ಹಬ್ಬದ ಕಾರ್ಯಕ್ರಮಗಳಿಂದ ಹೆಚ್ಚಿನ ರೀತಿಯಲ್ಲಿ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ. ಹರಿದ್ವಾರದಲ್ಲಿ ನಡೆದ ಕುಂಭಮೇಳ ಕೂಡ ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details