ಕರ್ನಾಟಕ

karnataka

ETV Bharat / bharat

ದೇಶದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಮನೋಹರ್ ಸಿಂಗ್ ಗಿಲ್ ನಿಧನ - ದೇಶದ ಮಾಜಿ ಮುಖ್ಯ ಚುನಾವಣಾ ಆಯುಕ್ತ

ದೇಶದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಮನೋಹರ್ ಸಿಂಗ್ ಗಿಲ್ ನಿಧನರಾಗಿದ್ದಾರೆ. ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಕೊನೆಯುಸಿರೆಳೆದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕ್ರೀಡಾ ಸಚಿವರೂ ಆಗಿದ್ದರು.

Former chief election commissioner Manohar Singh  Manohar Singh Gill passes away  Former chief election commissioner  ಸಂತಾಪ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ  ಮಾಜಿ ಮುಖ್ಯ ಆಯುಕ್ತ ಡಾ ಮನೋಹರ್ ಸಿಂಗ್ ಗಿಲ್  ಮನೋಹರ್ ಸಿಂಗ್ ಗಿಲ್ ಅವರ ನಿಧನ  ಚುನಾವಣಾ ಆಯೋಗ ಸಂತಾಪ  ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕ್ರೀಡಾ ಸಚಿವ  ದೇಶದ ಮಾಜಿ ಮುಖ್ಯ ಚುನಾವಣಾ ಆಯುಕ್ತ  ಮನೋಹರ್ ಸಿಂಗ್ ಗಿಲ್ ನಿಧನ
ದೇಶದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಮನೋಹರ್ ಸಿಂಗ್ ಗಿಲ್ ನಿಧನ

By ETV Bharat Karnataka Team

Published : Oct 16, 2023, 6:49 AM IST

ನವದೆಹಲಿ:ದೇಶದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಹಾಗೂ ಕಾಂಗ್ರೆಸ್ ನಾಯಕ ಮನೋಹರ್ ಸಿಂಗ್ ಗಿಲ್ ಭಾನುವಾರ ನಿಧನರಾಗಿದ್ದಾರೆ. ಅವರು ತಮ್ಮ 86 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಡಾ. ಗಿಲ್ ಅವರ ಅಂತ್ಯಕ್ರಿಯೆ ಇಂದು ದೆಹಲಿಯಲ್ಲಿ ನಡೆಯಲಿದೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ಗಿಲ್ ಅವರನ್ನು ಕೆಲ ದಿನಗಳ ಹಿಂದೆ ದಕ್ಷಿಣ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಾಜಿ ಮುಖ್ಯ ಆಯುಕ್ತ ಡಾ ಮನೋಹರ್ ಸಿಂಗ್ ಗಿಲ್ ಅವರ ನಿಧನಕ್ಕೆ ಚುನಾವಣಾ ಆಯೋಗ ಸಂತಾಪ ಸೂಚಿಸಿದೆ. ಸಿಇಸಿ ರಾಜೀವ್ ಕುಮಾರ್, ಆಯುಕ್ತ ಅನುಪ್ ಚಂದ್ರ ಪಾಂಡೆ ಮತ್ತು ಅರುಣ್ ಗೋಯಲ್ ಅವರು ಗಿಲ್ ನಿಧನವು ಆಯೋಗಕ್ಕೆ ತುಂಬಲಾರದ ನಷ್ಟ ಎಂದಿದ್ದಾರೆ.

ಗಿಲ್​ ನೇತೃತ್ವದಲ್ಲಿ ನಡೆದಿದ್ದ 12 ಮತ್ತು 13ನೇ ಸಾರ್ವತ್ರಿಕ ಚುನಾವಣೆ : ಎಂಎಸ್ ಗಿಲ್ ಅವರು ಡಿಸೆಂಬರ್ 1996 ರಿಂದ 13 ಜೂನ್ 2001ರ ವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು. ಪ್ರಸಿದ್ಧ ಸಿಇಸಿ ಟಿಎನ್ ಶೇಷನ್ ನಂತರ ಡಾ. ಗಿಲ್ ಮುಖ್ಯ ಚುನಾವಣಾ ಆಯುಕ್ತರಾದರು. 1998 ಮತ್ತು 1999 ರಲ್ಲಿ, ಡಾ. ಗಿಲ್ CEC ಆಗಿದ್ದ ವೇಳೆ 12 ಮತ್ತು 13ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಗಳು ನಡೆದವು.

ದೇಶದ 11ನೇ ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರಲ್ಲದೆ ಡಾ. ಗಿಲ್ ಅವರು ತಮ್ಮ ಅಧಿಕಾರಾವಧಿಯಲ್ಲಿ 20ಕ್ಕೂ ಹೆಚ್ಚು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ನಡೆಸಿದರು. ಎಂಎಸ್ ಗಿಲ್ ಅವರು 2000 ರಲ್ಲಿ ನಾಗರಿಕ ಸೇವಕರಾಗಿ ಅಸಾಧಾರಣ ಮತ್ತು ವಿಶಿಷ್ಟ ಸೇವೆಗಳಿಗಾಗಿ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದರು. ಡಾ. ಗಿಲ್ ಅವರನ್ನು ಕಾಂಗ್ರೆಸ್ ಪಕ್ಷ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿತ್ತು. ಆಗ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೇಂದ್ರ ಕ್ರೀಡಾ ಸಚಿವರಾಗಿ ಗಿಲ್​ ಸೇವೆ ಸಲ್ಲಿಸಿದ್ದರು​.

ಸಂತಾಪ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ: ಡಾ. ಗಿಲ್ ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು X ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ಕೇಂದ್ರ ಸಚಿವ, ಪದ್ಮವಿಭೂಷಣ ಮನೋಹರ್ ಸಿಂಗ್ ಗಿಲ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಯುಪಿಎ ಸರ್ಕಾರದಲ್ಲಿ ಮೌಲ್ಯಯುತ ಸಹೋದ್ಯೋಗಿಯಾಗಿದ್ದರು ಮತ್ತು ಕ್ರೀಡೆ, ಚುನಾವಣಾ ಪ್ರಕ್ರಿಯೆ ಮತ್ತು ಕೃಷಿಯಂತಹ ವಿವಿಧ ಕ್ಷೇತ್ರಗಳಲ್ಲಿ ನಾಗರಿಕ ಸೇವಕರಾಗಿದ್ದರು. ಅವರ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ಮಾಜಿ ಕೇಂದ್ರ ಸಚಿವರ ಕುಟುಂಬ ಹಾಗೂ ಸ್ನೇಹಿತಗೆ ಸಂತಾಪ ಸೂಚಿಸಿರುವ ಖರ್ಗೆ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಓದಿ:ಶಶಿ ತರೂರ್​ ಜೊತೆ ಸಂಸದೆ ಮಹುವಾ ಮೊಯಿತ್ರಾ: ಏನೋ ನಡೀತಿದೆ ಎಂದು ಕಾಲೆಳೆದ ನೆಟ್ಟಿಗರು!

ABOUT THE AUTHOR

...view details