ನವದೆಹಲಿ: ಭಾರತ ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಎಡಗೈ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ರಿಷಭ್ ಪಂತ್ ಆಡುತ್ತಿಲ್ಲ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಟೆಸ್ಟ್ ಪಂದ್ಯಗಳಲ್ಲಿನ ತಮ್ಮ ಉತ್ತಮ ಪ್ರದರ್ಶನದಿಂದಾಗಿ ಅವರು ತಂಡದ ಪ್ರಮುಖ ಕೊಂಡಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.
ಆದರೆ, ಕಾರು ಅಪಘಾತದಲ್ಲಿ ಗಾಯಗೊಂಡ ನಂತರ ಅವರು ಮತ್ತೆ ಆಟಕ್ಕೆ ಮರಳುವ ಬಗ್ಗೆ ವಿವಿಧ ಊಹಾಪೋಹ ಉಂಟಾಗಿವೆ. ಸದ್ಯ ಪಂತ್ ಶಸ್ತ್ರ ಚಿಕಿತ್ಸೆ ನಂತರ ವಿಶ್ರಾಂತಿ ಪಡೆಯುತ್ತಿದ್ದು, ವೈದ್ಯಕೀಯ ಸಲಹೆಯ ನಂತರ ಫೀಲ್ಡ್ಗೆ ಮರಳಲಿದ್ದಾರೆ. ಆದರೆ, ಈಗ ರಿಷಭ್ ಪಂತ್ ಅವರ ಬ್ಯಾಟಿಂಗ್ ಶೈಲಿಯನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಹೊಗಳಿದ್ದಾರೆ.
ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಮುಂಬರುವ ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ ರಿಷಭ್ ಪಂತ್ ಆಡದಿರುವುದರ ಲಾಭ ಮಾಡಿಕೊಳ್ಳಲು ನೋಡುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ. ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ರಿಷಭ್ ಅವರ ಸ್ಥಾನವನ್ನು ಬೇರೊಬ್ಬರು ತುಂಬಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಡಿಸೆಂಬರ್ 30 ರಂದು ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಪಂತ್ ಪ್ರಸ್ತುತ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಜನವರಿ 4, 2023 ರಂದು ಪಂತ್ ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಕೆಎಸ್ ಭರತ್ ಮತ್ತು ಇಶಾನ್ ಕಿಶನ್ ಅವರನ್ನು ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳು (ಫೆಬ್ರವರಿ 9-13) ಮತ್ತು ನವದೆಹಲಿಯಲ್ಲಿ (ಫೆಬ್ರವರಿ 17-21) ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತದ ವಿಕೆಟ್ ಕೀಪಿಂಗ್ ಆಯ್ಕೆಗಳಾಗಿ ಪರಿಶೀಲನೆ ಮಾಡಲಾಗುತ್ತಿದೆ.
ಭಾರತದ ಬಳಿ ಸಾಧನೆ ಮಾಡಲು ಹಲವಾರು ಅಂಶಗಳಿವೆ. ಆದರೆ ಪಂತ್ ಜಾಗದಲ್ಲಿ ಯಾರನ್ನು ತರುವುದು ಎಂಬುದನ್ನು ಅದು ನೋಡಬೇಕಿದೆ. ಪಂತ್ ಅನುಪಸ್ಥಿತಿಯಿಂದ ಭಾರತವು ಮುಖ್ಯ ಆಟಗಾರನನ್ನೊಬ್ಬನನ್ನು ಮಿಸ್ ಮಾಡಿಕೊಳ್ಳಲಿದೆ. ಪಂತ್ ತಂಡದಲ್ಲಿ ಇರುವುದರಿಂದ ಭಾರತದ ರನ್ ರೇಟ್ ಅತ್ಯಧಿಕವಾಗಿರುತ್ತಿತ್ತು. ಪಂತ್ ಅವರ ಆಕ್ರಮಣಕಾರಿ ಆಟದಿಂದಲೇ ಇದು ಸಾಧ್ಯವಾಗಿತ್ತು. ಸದ್ಯ ಪಂತ್ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಹೀಗಾಗಿ ಭಾರತವು ತನ್ನ ಉಳಿದ ಬ್ಯಾಟ್ಸಮನ್ಗಳ ಮೂಲಕ ಉತ್ತಮ ರನ್ ರೇಟ್ ಕಾಯ್ದುಕೊಳ್ಳಬೇಕಿದೆ ಹಾಗೂ ಉತ್ತಮ ಪ್ರದರ್ಶನವನ್ನೂ ನೀಡಬೇಕಿದೆ ಎಂದು ಚಾಪೆಲ್ ಹೇಳಿದ್ದಾರೆ.
2022 ರಲ್ಲಿ ಭಾರತ ತಂಡದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಮೊದಲ 4 ಬ್ಯಾಟ್ಸ್‌ಮನ್‌ಗಳ ಪೈಕಿ ರಿಷಬ್ ಪಂತ್ ಒಬ್ಬರಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಭಾರತೀಯ ತಂಡಕ್ಕಾಗಿ ಎಲ್ಲ ಮಾದರಿಯ ಆಟಗಳಲ್ಲಿ 1,424 ರನ್ ಗಳಿಸಿದ್ದಾರೆ ಮತ್ತು 2022 ರಲ್ಲಿ ಟಿ 20 ಕ್ರಿಕೆಟ್‌ನಲ್ಲಿ ವೈಟ್ - ಬಾಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರಾಗಿದ್ದಾರೆ. ಮತ್ತೊಂದೆಡೆ, ರಿಷಬ್ ಪಂತ್ ಎಲ್ಲಾ ಮಾದರಿಗಳಲ್ಲಿ 1380 ರನ್ ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. ರಿಷಭ್ ಪಂತ್ 2022 ರಲ್ಲಿ ಭಾರತದ ಟಾಪ್ ಸ್ಕೋರರ್ ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದರು. ಅವರು 7 ಟೆಸ್ಟ್‌ಗಳಲ್ಲಿ 61.81 ಸರಾಸರಿಯಲ್ಲಿ 680 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಎರಡು ಟೆಸ್ಟ್ ಶತಕಗಳು ಮತ್ತು ನಾಲ್ಕು ಅರ್ಧ ಶತಕಗಳು ಸೇರಿವೆ. ವಿರಾಟ್ ಕೊಹ್ಲಿ 1,348 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 995 ರನ್ ಗಳಿಸಿದರು.
ಇದನ್ನೂ ಓದಿ: ರಿಷಭ್ ಪಂತ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ಸೆ ಫೋಟೋ ಹಂಚಿಕೊಂಡ ಊರ್ವಶಿ ರೌಟೇಲಾ