ಕರ್ನಾಟಕ

karnataka

ETV Bharat / bharat

ತಮಿಳುನಾಡು ಮಾಜಿ ಸಚಿವ ಎಂ.ಮಣಿಕಂದನ್ ಬೆಂಗಳೂರಿನಲ್ಲಿ ಅರೆಸ್ಟ್ - ಮಾಜಿ ಸಚಿವ ಎಂ.ಮಣಿಕಂದನ್​ ಸುದ್ದಿ

ತಮಿಳುನಾಡು ಮಾಜಿ ಸಚಿವ ಎಂ.ಮಣಿಕಂದನ್ ಬೆಂಗಳೂರಿನಲ್ಲಿ ಬಂಧನಕ್ಕೀಡಾಗಿದ್ದು, ಅವರ ವಿರುದ್ಧ ಮಲೇಷಿಯಾ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಗಂಭೀರ ಆರೋಪವಿದೆ.

Former AIADMK minister M Manikandan arrested
ತಮಿಳುನಾಡು ಮಾಜಿ ಸಚಿವ ಎಂ.ಮಣಿಕಂದನ್ ಬೆಂಗಳೂರಿನಲ್ಲಿ ಅರೆಸ್ಟ್

By

Published : Jun 20, 2021, 9:09 AM IST

Updated : Jun 20, 2021, 11:50 AM IST

ಚೆನ್ನೈ(ತಮಿಳುನಾಡು): ಮಲೇಷಿಯಾ ಮೂಲದ ನಟಿಯ ಮೇಲೆ ಅತ್ಯಾಚಾರ ಆರೋಪದಲ್ಲಿ ತಮಿಳುನಾಡಿನ ಮಾಜಿ ಸಚಿವ ಎಂ.ಮಣಿಕಂದನ್​ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿಂದೊಮ್ಮೆ ಸಚಿವರ ವಿರುದ್ಧ ಆರೋಪ ಮಾಡಿದ್ದ ನಟಿ

ಚೆನ್ನೈ ನಗರ ಪೊಲೀಸರು ಬೆಂಗಳೂರಿನಲ್ಲಿ ಮಣಿಕಂದನ್​​ನನ್ನು ಬಂಧಿಸಿದ್ದು, ಗರ್ಭಪಾತ ಮತ್ತು ಮಹಿಳೆಯ ಮೇಲೆ ಬೆದರಿಕೆ ಆರೋಪಗಳೂ ಕೇಳಿಬಂದಿವೆ. ಕೆಲವು ದಿನಗಳ ಹಿಂದೆ ಮದ್ರಾಸ್ ಹೈಕೋರ್ಟ್ ಮಣಿಕಂದನ್​ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.

ಇದನ್ನೂ ಓದಿ:ತಮಿಳುನಾಡು ಮಾಜಿ ಸಚಿವ ಮಣಿಕಂದನ್ ಮೋಸ ಮಾಡಿದ್ದಾರೆಂದು ನಟಿ ದೂರು

ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದ ಕಾರಣದಿಂದ ಬಂಧನ ಭೀತಿಯಿಂದ ಮಣಿಕಂದನ್ ಬೆಂಗಳೂರಿಗೆ ಬಂದಿದ್ದರು. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತಮ್ಮನಾಯಕನಹಳ್ಳಿ ಹಸಿರುವ್ಯಾಲಿ ರೆಸಾರ್ಟ್ನಲ್ಲಿ ಆಶ್ರಯ ಪಡೆದಿದ್ದ ಅವರನ್ನು ಚೆನ್ನೈನ ಪೆರುಂಬಾಕಂ ಠಾಣೆಯ ಇನ್ಸ್​ಪೆಕ್ಟರ್​ ಟಿ.ವೀರಕುಮಾರ್ ನೇತೃತ್ವದ ತಂಡ ಬಂಧಿಸಿದೆ.ಭಾರತೀಯ ದಂಡಸಂಹಿತೆಯ ಸೆಕ್ಷನ್ 376, 213, 323, 417, 506 ಹಾಗೂ ಐಟಿ ಅಕ್ಟ್ ಅಡಿ ಪ್ರಕರಣಗಳಲ್ಲಿ ಮಣಿಕಂದನ್ ಪೊಲೀಸರಿಗೆ ಬೇಕಾಗಿದ್ದನು.

ಮಣಿಕಂದನ್ ಮತ್ತು ನಟಿ

ಹೂಡಿಕೆ ವಿಚಾರದಲ್ಲಿ ಆದ ಸ್ನೇಹ..

2017ರಲ್ಲಿ ಮಣಿಕಂದನ್ ಐಟಿ ಸಚಿವನಾಗಿದ್ದಾಗ ನಟಿ ಪರಿಚಯವಾಗಿತ್ತು. ಮಲೇಷಿಯಾದಲ್ಲಿ ಹೂಡಿಕೆ ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಸ್ನೇಹವಾಗಿ, ಸ್ನೇಹ ಲಿವ್​ ಇನ್ ರಿಲೇಷನ್​ಶಿಪ್​ವರೆಗೆ ಬೆಳೆದಿತ್ತು. ನಟಿಯನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರವೆಸಗಿದ ಆರೋಪವೂ ಇವರ ಮೇಲಿದೆ. ಮೂರು ಬಾರಿ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿರುವ ಕುರಿತು ದೂರು ದಾಖಲಾಗಿದೆ.

ನಟಿ ಮತ್ತು ಮಣಿಕಂದನ್​

ಇದರ ಜೊತೆಗೆ ನಟಿಯ ಕುಟುಂಬಸ್ಥರಿಗೆ ಬೆದರಿಕೆ, ನಟಿಯ ಚಿತ್ರಗಳ ಸಮೇತ ನಿಂದನಾರ್ಹ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪವೂ ಮಣಿಕಂದನ್ ಮೇಲಿದೆ.

Last Updated : Jun 20, 2021, 11:50 AM IST

ABOUT THE AUTHOR

...view details