ಪಾಲಕ್ಕಾಡ್ (ಕೇರಳ):ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳವು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ಎಡ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ಅನ್ನು ಜನ ತಿರಸ್ಕರಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಯುಡಿಎಫ್ - ಎಲ್ಡಿಎಫ್ ಅನ್ನು ಜನ ತಿರಸ್ಕರಿಸಲಿದ್ದಾರೆ: ಪ್ರಧಾನಿ ಮೋದಿ ವಿಶ್ವಾಸ
ಪಾಲಕ್ಕಾಡ್‌ನಲ್ಲಿ ನಡೆದ ಚುನಾವಣಾ ಮೆರವಣಿಗೆಯಯಲ್ಲಿ ಮಾತನಾಡಿದ ಪಿಎಂ ಮೋದಿ, ಹಲವು ವರ್ಷಗಳಿಂದ ಕೇರಳ ರಾಜಕಾರಣದ ಅತ್ಯಂತ ಕೆಟ್ಟ ರಹಸ್ಯ ಎಂದರೆ ಯುಡಿಎಫ್ ಮತ್ತು ಎಲ್‌ಡಿಎಫ್‌ನ ಸ್ನೇಹಪರ ಒಪ್ಪಂದ. ಯುಡಿಎಫ್ ಮತ್ತು ಎಲ್ಡಿಎಫ್ ಜನರನ್ನು ಹೇಗೆ ದಾರಿ ತಪ್ಪಿಸಿದೆ ಎಂದು ಜನರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ
ಪಾಲಕ್ಕಾಡ್‌ನಲ್ಲಿ ನಡೆದ ಚುನಾವಣಾ ಮೆರವಣಿಗೆಯಲ್ಲಿ ಮಾತನಾಡಿದ ಪಿಎಂ ಮೋದಿ, "ಹಲವು ವರ್ಷಗಳಿಂದ ಕೇರಳ ರಾಜಕಾರಣದ ಅತ್ಯಂತ ಕೆಟ್ಟ ರಹಸ್ಯ ಎಂದರೆ ಯುಡಿಎಫ್ ಮತ್ತು ಎಲ್‌ಡಿಎಫ್‌ನ ಸ್ನೇಹಪರ ಒಪ್ಪಂದ. ಯುಡಿಎಫ್ ಮತ್ತು ಎಲ್ಡಿಎಫ್ ಜನರನ್ನು ಹೇಗೆ ದಾರಿ ತಪ್ಪಿಸಿದೆ ಎಂದು ಜನರು ನೋಡುತ್ತಿದ್ದಾರೆ"
ಮುಂಬರುವ ರಾಜ್ಯ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ನಿಮ್ಮ ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಕೇರಳದ ರಾಜಕೀಯವು ಒಂದು ದೊಡ್ಡ ಬದಲಾವಣೆ ಕಾಣುತ್ತಿದೆ ಎಂದು ಪಿಎಂ ಮೋದಿ ಹೇಳಿದರು.