ಜಾಮ್‌ನಗರ (ಗುಜರಾತ್) : ನಗರದ ಹೊರವಲಯದಲ್ಲಿರುವ ಸಪ್ದಾ ಅಣೆಕಟ್ಟೆಯಲ್ಲಿ ಪ್ರವಾಸಕ್ಕೆಂದು ಬಂದಿದ್ದ ಐವರು ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ದಿಗ್ವಿಜಯ್ ಪ್ಲಾಟ್ನ ನಿವಾಸಿಗಳಾದ ಮಹೇಶಭಾಯ್ ಕರಾಭಾಯಿ ಮಾಂಗೆ (44), ಲಿನಾಬೆನ್ ಮಹೇಶಭಾಯ್ ಮಾಂಗೆ (41), ಸಿದ್ಧ ಮಹೇಶಭಾಯ್ ಮಾಂಗೆ (20), ಅನಿತಾಬೆನ್ ವಿನೋದಭಾಯ್ ದಾಮಾ (40), ರಾಹುಲ್ ವಿನೋದಭಾಯಿ ದಾಮಾ ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ಕುಟುಂಬವನ್ನು ಭೇಟಿಯಾಗಲು ರಾಹುಲ್ ವಿನೋದಭಾಯಿ ದಾಮಾ ಜಾಮ್‌ನಗರಕ್ಕೆ ಬಂದಿದ್ದರು. ಹೀಗಾಗಿ ಕುಟುಂಬಸ್ಥರು ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಎರಡು ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಇನ್ನು ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಮತ್ತು ಪೊಲೀಸರು ಶೋಧ ಕಾರ್ಯ ಆರಂಭಿಸಿ ಐವರ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವ ಪರೀಕ್ಷೆ ನಡೆದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಇಂದು ಮಧ್ಯಾಹ್ನ ಮೃತರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನಡೆಸಲಾಯಿತು. ದಿಗ್ವಿಜಯ್ ಪ್ಲಾಟ್‌ನಿಂದ ಆರಂಭವಾದ ಶವಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಮತ್ತೊಂದೆಡೆ ಎಲ್ಲ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ್ದು, ಇಡೀ ನಗರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಕಾಲುವೆಗೆ ಕಾರು ಬಿದ್ದು ಐವರು ಸಾವು : ಜುಲೈ 24 ರಂದು ಬೆಳಗ್ಗೆ ಉತ್ತರ ಪ್ರದೇಶದ ಕೊತ್ವಾಲಿ ದೇಹತ್ ಪೊಲೀಸ್ ಠಾಣಾ ವ್ಯಾಪ್ತಿಯ ವೇವರ್ ಬ್ಯಾರೇಜ್‌ನಲ್ಲಿ ಕಾರೊಂದು ಕಾಲುವೆಗೆ ಬಿದ್ದಿದ್ದು, ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಮೃತಪಟ್ಟವರೆಲ್ಲ ಕಾಸ್‌ಗಂಜ್‌ನ ನಿವಾಸಿಗಳು ಎಂದು ಗುರುತಿಸಲಾಗಿತ್ತು. ಕಾರಿನಲ್ಲಿದ್ದ ಮಹಿಳೆಯೊಬ್ಬರಿಗೆ ಇಟಾಹ್ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ಕರೆ ತರುವ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿತ್ತು. ಪರಿಣಾಮ ಕಾರಿನೊಳಗೆ ಇದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಪುರುಷರು ಮೃತಪಟ್ಟಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ಕೈಗೊಂಡು ಕಾರಿನ ಸಮೇತ ಐವರ ಮೃತದೇಹಗಳನ್ನು ಹೊರತೆಗೆದಿದ್ದರು.
ಇದನ್ನೂ ಓದಿ :ಮಳೆ ನೀರಿಗೆ ಕೊಚ್ಚಿ ಹೋಗಿದ್ದ ಸೇತುವೆ.. ರಸ್ತೆ ಇದೆ ಎಂದು ಭಾವಿಸಿ ದಾಟುವಾಗ ಪ್ರವಾಹಕ್ಕೆ ಸಿಲುಕಿ 8 ಮಂದಿ ಸಾವು
ಬಾವಿಗೆ ಬಿದ್ದ ಕಾರು :ರಾಷ್ಟ್ರೀಯ ಹೆದ್ದಾರಿ 33ರಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬಾವಿಗೆ ಬಿದ್ದು 6 ಜನರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಜಾರಿಬಾಗ್ನ ರೋಮಿ ಗ್ರಾಮದಲ್ಲಿ ಜುಲೈ 4 ರಂದು ನಡೆದಿತ್ತು. ಸ್ಥಳೀಯ ಪೊಲೀಸರು ಮತ್ತು ಗ್ರಾಮಸ್ಥರು 3 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಮೃತರನ್ನು ಮಂಡೈ ಗ್ರಾಮದವರು ಎಂದು ಗುರುತಿಸಲಾಗಿತ್ತು.
ಇದನ್ನೂ ಓದಿ :Mandya Accident: ಮಂಡ್ಯದಲ್ಲಿ ನಾಲೆಗೆ ಉರುಳಿದ ಕಾರು; ಬಾಲಕಿ ಸೇರಿ ನಾಲ್ವರು ಸಾವು