ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯ ದುಡು ಬಳಿಯ ಅಜ್ಮೀರ್- ಜೈಪುರ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಜೀವ ದಹನವಾಗಿದ್ದಾರೆ. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಟ್ರಕ್ ಕ್ಯಾಬಿನ್‌ನಲ್ಲಿ ಕುಳಿತಿದ್ದ ಚಾಲಕ ಮತ್ತು ಸಹಾಯಕ ಸೇರಿದಂತೆ ಐವರು ಅವಘಡದ ವೇಳೆ ಪಾರಾಗಲೂ ಸಹ ಸಾಧ್ಯವಾಗಿಲ್ಲ. ಗಂಟೆಗಳ ಪರಿಶ್ರಮದ ನಂತರ ಬೆಂಕಿ ನಿಯಂತ್ರಿಸಲಾಗಿದೆ. ಅವಘಡದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಟ್ರಕ್‌ನಲ್ಲಿ ಜಾನುವಾರುಗಳೂ ಸಹ ಇದ್ದವು. ಅವೂ ಸಹ ಬೆಂಕಿಯಿಂದ ಸಾವನ್ನಪ್ಪಿವೆ.
ಮೃತರಲ್ಲಿ ಹರಿಯಾಣದ ಹಂಸಿ ನಿವಾಸಿ ಪವನ್ (28) ಪುತ್ರ ಅಮರ್ ಸಿಂಗ್, ಸಂಜಯ್ (18) ಪುತ್ರ ಜಿಲೆ ಸಿಂಗ್, ಧರಂವೀರ್ (34) ಪುತ್ರ ಭಲೇರಾಮ್ ಯಾದವ್, ಬಿಹಾರದ ಛಾಪ್ರಾ ನಿವಾಸಿ ಜಾನ್ವಿಜಯ್ (35) ಪುತ್ರ ದೇವನಂದನ್ ಮತ್ತು ಬಿಜ್ಲಿ (26) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಲಾರಿ ಮಾಲೀಕರೊಂದಿಗೆ ಮಾತನಾಡಿ ಗುರುತು ಪತ್ತೆ :ಅಪಘಾತದಲ್ಲಿ ಐವರೂ ಕೂಡ ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿದ್ದರು. ಇಂತಹ ಸಂದರ್ಭದಲ್ಲಿ ಅವರನ್ನು ಗುರುತಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಂಕಿ ನಂದಿಸಿದ ಬಳಿಕ ಪೊಲೀಸರು ಲಾರಿ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಲಾರಿ ಮಾಲೀಕರನ್ನು ಪತ್ತೆ ಹಚ್ಚಿದ್ದಾರೆ. ಆತನೊಂದಿಗೆ ಮಾತುಕತೆ ನಡೆಸಿದ ಬಳಿಕ ಮೃತರ ಗುರುತು ಪತ್ತೆಯಾಯಿತು. ಟ್ರಕ್‌ನಲ್ಲಿ ಜಾನುವಾರುಗಳನ್ನು ಕೂಡ ತುಂಬಿಸಲಾಗಿತ್ತು, ಅವುಗಳು ಸಹ ಬೆಂಕಿಯಲ್ಲಿ ಸಜೀವ ದಹನವಾಗಿವೆ.