ಕರ್ನಾಟಕ

karnataka

ETV Bharat / bharat

ವಾಟ್ಸ್​ಆ್ಯಪ್​ ಗ್ರೂಪ್​ನಿಂದ ತೆಗೆದು ಹಾಕಿದ ಕಾರಣಕ್ಕೆ ಸಿಟ್ಟು.. ಅಡ್ಮಿನ್​ ನಾಲಿಗೆ ಕತ್ತರಿಸಿದ ದುರುಳರು - ಸಾಮಾಜಿಕ ಜಾಲತಾಣ

ವಾಟ್ಸ್​ಆ್ಯಪ್​ ಗ್ರೂಪ್​ನಿಂದ ತೆಗೆದು ಹಾಕಿದ ಕಾರಣಕ್ಕೆ ಆಕ್ರೋಶ - ಗ್ರೂಪ್​ ಅಡ್ಮಿನ್​ಗೆ ಥಳಿಸಿ, ನಾಲಿಗೆ ಕತ್ತರಿಸಿದ ದುಷ್ಕರ್ಮಿಗಳು - ಮಹಾರಾಷ್ಟ್ರದ ಪುಣೆಯಲ್ಲಿ ಬೆಚ್ಚಿ ಬೀಳಿಸುವ ಘಟನೆ

five-people-brutally-beat-up-the-group-admin-and-cut-off-his-tongue-in-pune
ವಾಟ್ಸ್​ಆ್ಯಪ್​ ಗ್ರೂಪ್​ನಿಂದ ತೆಗೆದು ಹಾಕಿದ ಕಾರಣಕ್ಕೆ ಸಿಟ್ಟು: ಅಡ್ಮಿನ್​ ನಾಲಿಗೆ ಕತ್ತರಿಸಿದ ದುರುಳರು

By

Published : Jan 3, 2023, 9:03 PM IST

ಪುಣೆ (ಮಹಾರಾಷ್ಟ್ರ): ಸೋಷಿಯಲ್​ ಮೀಡಿಯಾದಿಂದ ಸಾಕಷ್ಟು ಅನುಕೂಲಗಳು ಇವೆ. ಅದೇ ಪ್ರಮಾಣದಲ್ಲಿ ಈ ಡಿಜಿಟಲ್​ ವೇದಿಕೆಯನ್ನು ದುರುಪಯೋಗ ಪಡಿಸಿಕೊಳ್ಳುವುದೊಂದಿಗೆ ಅದರಿಂದ ಅನೇಕ ಅನಾಹುತಗಳು ಸಹ ಸಂಭವಿಸುತ್ತಿವೆ. ಆದ್ದರಿಂದ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಏನಾಗುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಇದಕ್ಕೆ ನಿರ್ದಶನ ಎಂಬಂತೆ ಮಹಾರಾಷ್ಟ್ರದ ಪುಣೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವಾಟ್ಸ್​ಆ್ಯಪ್​ ಗ್ರೂಪ್​ನಿಂದ ತೆಗೆದು ಹಾಕಲಾಗಿದೆ ಎಂಬ ಒಂದೇ ಒಂದು ಸಣ್ಣ ಕಾರಣಕ್ಕೆ ಐವರು ಆರೋಪಿಗಳು ಸೇರಿಕೊಂಡು ಗ್ರೂಪ್ ಅಡ್ಮಿನ್‌ಗೆ ಥಳಿಸಿ, ನಾಲಿಗೆಯನ್ನೇ ಕತ್ತರಿಸಿದ್ದಾರೆ.

ಇಲ್ಲಿನ ಫರ್ಸುಂಗಿ ಪ್ರದೇಶದಲ್ಲಿ ಒಟ್ಟಿಗೆ ವಾಸಿಸುತ್ತಿರುವ ಜನರು ಕೂಡಿಕೊಂಡು ಓಂ ಹೈಟ್ಸ್ ಆಪರೇಷನ್ ಎಂಬ ಹೆಸರಿನಲ್ಲಿ ವಾಟ್ಸ್​ಆ್ಯಪ್​ ಗ್ರೂಪ್ ರಚಿಸಿದ್ದರು. ಆದರೆ, ಈ ಗ್ರೂಪ್​ನಿಂದ ಯಾರೋ ಒಬ್ಬರನ್ನು ತೆಗೆದುಹಾಕಲಾಗಿತ್ತು. ಈ ಬಗ್ಗೆ ಗ್ರೂಪ್​ವನ್ನು ರಚಿಸಿದ್ದ ಮತ್ತು ಆಡ್ಮಿನ್​ ಆಗಿದ್ದ ವ್ಯಕ್ತಿಗೆ ಗ್ರೂಪ್‌ನಿಂದ ತೆಗೆದುಹಾಕಲ್ಪಟ್ಟ ವ್ಯಕ್ತಿ ಇತರ ನಾಲ್ವರೊಂದಿಗೆ ಸೇರಿಕೊಂಡು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿಯ ಪತ್ನಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಪ್ರಕಾರ ಡಿಸೆಂಬರ್ 28ರಂದು ಈ ಘಟನೆ ನಡೆದಿದೆ.

ಪತ್ನಿ ಕೊಟ್ಟು ದೂರಿನಲ್ಲೇನಿದೆ?: ಓಂ ಹೈಟ್ಸ್ ಆಪರೇಷನ್​ನ ಗ್ರೂಪ್​ ಆಡ್ಮಿನ್​ ಪತ್ಮಿಯು ಹಡಪ್ಸರ್ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಆಧಾರದ ಮೇಲೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಒಂದೇ ಪ್ರದೇಶದ ವಾಸಿಸುವ ನಿವಾಸಿಗಳನ್ನು ಸೇರಿ ನನ್ನ ಪತಿ ಈ ವಾಟ್ಸ್​ಆ್ಯಪ್​ ಗ್ರೂಪ್ ರಚಿಸಿದ್ದರು. ಇತ್ತೀಚೆಗೆ ಈ ಓರ್ವ ವ್ಯಕ್ತಿಯನ್ನು ಗ್ರೂಪ್​ನಿಂದ ತೆಗೆದು ಹಾಕಿದ್ದರು. ಈ ಬಗ್ಗೆ ನನ್ನನ್ನು ವಾಟ್ಸ್​ಆ್ಯಪ್​ ಗ್ರೂಪ್​ನಿಂದ ಏಕೆ ತೆಗೆಯಲಾಗಿದೆ ಎಂದು ಆರೋಪಿ ವಾಟ್ಸ್​ಆ್ಯಪ್​ನಿಂದಲೇ ನನ್ನ ಪತಿಗೆ ಸಂದೇಶ ಕಳುಹಿಸಿ ಕೇಳಿದ್ದರು ಎಂದು ಈ ಮಹಿಳೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಫೇಸ್ ಬುಕ್ ಗೆಳತಿಯ ಸ್ಕೂಟರ್ ಕದ್ದೊಯ್ದ ಯುವಕ.. ಕಂಡ ಕಂಡವರ ಫ್ರೆಂಡ್​ ರಿಕ್ವೆಸ್ಟ್​ ಒಪ್ಪುವ ಮುನ್ನ ಎಚ್ಚರ

ಆದರೆ, ಈ ವಾಟ್ಸ್​ಆ್ಯಪ್​ನ ಸಂದೇಶಕ್ಕೆ ನನ್ನ ಪತಿ​ ಉತ್ತರ ನೀಡಿರಲಿಲ್ಲ. ಇದಾದ ಬಳಿಕ ಆರೋಪಿಯು ನನ್ನ ಪತಿಗೆ ಕರೆ ಮಾಡಿ ಭೇಟಿಯಾಗಲು ಬಯಸಿರುವುದಾಗಿ ತಿಳಿಸಿದ್ದರು. ಅಂತೆಯೇ, ನಾನು ಮತ್ತು ನನ್ನ ಪತಿ ಕಚೇರಿಯಲ್ಲಿದ್ದಾಗ ಗ್ರೂಪ್‌ನಿಂದ ತೆಗೆದುಹಾಕಲ್ಪಟ್ಟ ವ್ಯಕ್ತಿ ಇತರ ನಾಲ್ವರು ಆರೋಪಿಗಳು ಸ್ಥಳಕ್ಕೆ ಬಂದಿದ್ದರು. ಆಗ ಕೂಡ ನನ್ನನ್ನು ಗ್ರೂಪ್‌ನಿಂದ ಏಕೆ ತೆಗೆದುಹಾಕಿದ್ದೀರಿ ಎಂದು ಪ್ರಶ್ನಿಸಿದ್ದರು. ಆ ವೇಳೆ ಗ್ರೂಪ್‌ನಲ್ಲಿ ಯಾರೂ ಯಾವುದೇ ರೀತಿಯ ಸಂದೇಶ ಕಳುಹಿಸದ ಕಾರಣ ಗ್ರೂಪ್ ಮುಚ್ಚಲಾಗಿದೆ ಎಂಬುದು ನನ್ನ ಗ್ರೂಪ್ ಅಡ್ಮಿನ್‌ ಆಗಿದ್ದ ನನ್ನ ಪತಿ ತಿಳಿಸಿದ್ದರು ಎಂದೂ ದೂರುದಾರ ಮಹಿಳೆ ಹೇಳಿದ್ದಾರೆ.

ಗ್ರೂಪ್​ನಿಂದ ತೆಗೆದು ಹಾಕಿರುವ ಬಗ್ಗೆ ಸ್ಪಷ್ಟನೆ ನೀಡಿದರೂ ಸಹ ಆರೋಪಿಗಳು ನನ್ನ ಪತಿ ಮೇಲೆ ಅಮಾನುಷವಾಗಿ ದಾಳಿ ಮಾಡಿದರು. ಅಲ್ಲದೇ, ಪತಿಯ ನಾಲಿಗೆ ಕತ್ತರಿಸಿದ್ದು, ಮುಖಕ್ಕೆ ಗುದ್ದಿದ್ದರಿಂದ ಗಂಭೀರ ಗಾಯಗಳಾಗಿವೆ. ಸದ್ಯ ಆಸ್ಪತ್ರೆಗೆ ದಾಖಲಿಸಿದ್ದು, ಪತಿಯ ನಾಲಿಗೆಗೆ ಹೊಲಿಗೆ ಹಾಕಲಾಗಿದೆ ಎಂದೂ ದೂರಿನಲ್ಲಿ ಸಂತ್ರಸ್ತನ ಪತ್ನಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಮಹಿಳೆಯರಿಗೆ ಗೌರವವಿಲ್ಲ.. ಪಕ್ಷ ತೊರೆದ ತಮಿಳುನಾಡು ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್

ABOUT THE AUTHOR

...view details