ಕರ್ನಾಟಕ

karnataka

ETV Bharat / bharat

ಅಯ್ಯೋ ವಿಧಿಯೇ, ಪ್ರತ್ಯೇಕ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿ ಆರು ಜನ ಸಾವು - ಅಪಘಾತದಲ್ಲಿ ಸಂಬಂಧಿ ಸಾವು

ಅಯ್ಯೋ ವಿಧಿಯೇ.. ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಂದೇ ಕುಟುಂಬದ ಐವರು ಸೇರಿ ಆರು ಜನ ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

Five members of the same family  same family died in two road accidents  road accidents in Telangana  ಆರು ಜನ ಸಾವು  ಒಂದೇ ಕುಟುಂಬದ ಐವರು  ಪ್ರತ್ಯೇಕ ಅಪಘಾತ  ಕುಟುಂಬದ ಐವರು ಸೇರಿ ಆರು ಜನರು ಮೃತ  ಅಪಘಾತದಲ್ಲಿ ಸಂಬಂಧಿ ಸಾವು  ವಿಧಿಯಾಟಕ್ಕೆ ನಾಲ್ವರು ಬಲಿ
ಒಂದೇ ಕುಟುಂಬದ ಐವರು ಸೇರಿ ಆರು ಜನ ಸಾವು

By ETV Bharat Karnataka Team

Published : Dec 25, 2023, 11:46 AM IST

ನಲ್ಗೊಂಡಾ, ಆಂಧ್ರಪ್ರದೇಶ: ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಒಂದೇ ಕುಟುಂಬದ ಐವರು ಸೇರಿ ಆರು ಜನರು ಮೃತಪಟ್ಟಿದ್ದಾರೆ. ಹೌದು, ಅಪಘಾತವೊಂದರಲ್ಲಿ ತಮ್ಮ ಸಂಬಂಧಿ ಪ್ರಾಣ ಕಳೆದುಕೊಂಡಿದ್ದು, ಅವರನ್ನು ನೋಡಲು ತೆರಳುತ್ತಿದ್ದ ವೇಳೆ ಮತ್ತೊಂದು ಅಪಘಾತ ಸಂಭವಿಸಿದೆ. ಹೀಗಾಗಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಸಂಬಂಧಿ ಸಾವು:ಪೆದ್ದವೂರು ತಾಲೂಕಿನ ನಿಮ್ಮನಾಯಕ್ ತಾಂಡಾದ ಕೇಶವುಲು (28) ಗುಂಟೂರಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಕೇಶವುಲು ಶ್ರೀಶೈಲ ದೇಗುಲಕ್ಕೆ ಹೋಗಲು ನಿರ್ಧರಿಸಿದರು. ಆದರೆ ಇದಕ್ಕೂ ಮೊದಲು ಗುಂಟೂರಿನಿಂದ ನಲ್ಗೊಂಡ ಜಿಲ್ಲೆಯ ತನ್ನ ಸ್ವಗ್ರಾಮಕ್ಕೆ ಹೋಗಲು ಬಯಸಿದ್ದನು. ಈ ಕ್ರಮದಲ್ಲಿ ಭಾನುವಾರ ತನ್ನ ಬೈಕ್​ನಲ್ಲಿ ಗುಂಟೂರಿನಿಂದ ಹೊರಟಿದ್ದರು. ವೇಂಪಡು ಗ್ರಾಮ ತಲುಪಿದಾಗ ರಾತ್ರಿಯಾಗಿತ್ತು. ಈ ಅನುಕ್ರಮದಲ್ಲಿ ಕೇಶವುಲು ಒಂದು ಕಡೆ ಮಂಜು, ಇನ್ನೊಂದು ಕಡೆ ರಾತ್ರಿ ಆಗಿದ್ದರಿಂದ ರಸ್ತೆಯಲ್ಲಿ ಹೋಗುತ್ತಿದ್ದ ಸೈದುಲು (55) ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಸ್ಥಳೀಯರ ಪ್ರಕಾರ, ರಾತ್ರಿ ಜೋರಾಗಿ ಸದ್ದು ಕೇಳಿ ಬಂತು. ಸ್ಥಳಕ್ಕೆ ಬಂದು ನೋಡಿದಾಗ ಅಪಘಾತವಾಗಿರುವುದು ತಿಳಿಯಿತು. ಗಾಡಿ ಕೆಳಗೆ ಬಿದ್ದಿದ್ದು, ಗಾಡಿ ಮತ್ತು ಇಬ್ಬರನ್ನು ನಾವು ಹೊರ ತೆಗೆದಾಗ ಅವರು ಅಷ್ಟೋತ್ತಿಗಾಗಲೇ ಮೃತಪಟ್ಟಿರುವುದು ತಿಳಿಯಿತು. ಕೂಡಲೇ ನಾವು ಪೊಲೀಸರಿಗೆ ಮಾಹಿತಿ ರವಾನಿಸಿದ್ದೆವು ಎಂದು ಗ್ರಾಮಸ್ಥರು ತಿಳಿಸಿದರು. ಇನ್ನು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅಪಘಾತದ ಕುರಿತು ಕೇಶವುಲು ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದರು. ವಿಷಯ ತಿಳಿದ ಕೇಶವುಲು ಕುಟುಂಬದ ಏಳು ಮಂದಿ ಸೋಮವಾರ (ಇಂದು) ಮುಂಜಾನೆ ಟಾಟಾ ಏಸ್ ವಾಹನದಲ್ಲಿ ಅಪಘಾತದ ಸ್ಥಳಕ್ಕೆ ತೆರಳುತ್ತಿದ್ದರು.

ವಿಧಿಯಾಟಕ್ಕೆ ನಾಲ್ವರು ಬಲಿ: ಅಪಘಾತ ನಡೆದ ಸ್ಥಳದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಅವರು ಪ್ರಯಾಣಿಸುತ್ತಿದ್ದ ಟಾಟಾ ಏಸ್​ ವಾಹನಕ್ಕೆ ತೈಲ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ರಕ್ಷಣೆಗೆ ದಾವಿಸಿ ಮೂವರನ್ನು ವಾಹನದ ಹೊರಗೆ ತೆಗೆದು ಪೊಲೀಸರಿಗೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು.

ಅಪಘಾತದಲ್ಲಿ ಮೃತಪಟ್ಟರನ್ನು ರಮಾವತ್ ಗಣ್ಯ (40), ನಾಗರಾಜು (28), ಪಾಂಡ್ಯ (40) ಮತ್ತು ಬುಜ್ಜಿ (38) ಎಂದು ಗುರುತಿಸಲಾಗಿದೆ. ಹಲಿಯಾ ಪೊಲೀಸ್​ ಠಾಣೆಯ ಸಿಐ ಗಾಂಧಿನಾಯ್ಕ್, ನಿಡಮನೂರು ಎಸ್ಸೈ ಗೋಪಾಲ್ ರಾವ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಸದ್ಯ ಮೃತರ ಸಂಬಂಧಿಗಳಿಗೆ ಮಾಹಿತಿ ರವಾನಿಸಲಾಗಿದ್ದು, ಅವರು ಸಹ ಆಸ್ಪತ್ರೆಯ ಬಳಿ ದೌಡಾಯಿಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಮಿರ್ಯಾಲಗೂಡ ಏರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಅಪಘಾತ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ:ತೆಲಂಗಾಣದಲ್ಲಿ ಕರ್ನಾಟಕ ಮಹಾರಾಷ್ಟ್ರ ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಐವರ ಸಾವು

ABOUT THE AUTHOR

...view details