ಕರ್ನಾಟಕ

karnataka

ETV Bharat / bharat

ಇರಾನ್​ನಲ್ಲಿ ಪೇಚಿಗೆ ಸಿಲುಕಿದ ಐವರು ಭಾರತೀಯರು.. ತವರಿಗೆ ಮರಳಲು ಸಹಾಯ ಮಾಡುವಂತೆ ಕೇಂದ್ರಕ್ಕೆ ಮನವಿ - ಇರಾನ್

ನಾವಿಕರಾಗಬೇಕೆಂದು ಕನಸು ಕಟ್ಟಿಕೊಂಡು, ಇರಾನ್​ಗೆ ಪ್ರಯಾಣ ಬೆಳೆಸಿದ್ದ ಐವರು 18 ತಿಂಗಳಿಂದ ಅಲ್ಲಿನ ಜೈಲುವಾಸ ಅನುಭವಿಸಿದ್ದಾರೆ. ಇದೀಗ ಬಿಡುಗಡೆಯಾಗಿದ್ದು, ತವರಿಗೆ ಮರಳಲು ಸಹಾಯ ಮಾಡುವಂತೆ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವರಿಗೆ ಮನವಿ ಮಾಡಿದ್ದಾರೆ.

ಇರಾನ್​ನಲ್ಲಿ ಸಿಲುಕಿದ ಐವರು ಭಾರತೀಯರು
ಇರಾನ್​ನಲ್ಲಿ ಸಿಲುಕಿದ ಐವರು ಭಾರತೀಯರು

By

Published : Jul 5, 2021, 8:20 AM IST

ಮುಂಬೈ: ಇರಾನ್‌ನಲ್ಲಿ 18 ತಿಂಗಳಿಂದ ಸಿಲುಕಿಕೊಂಡಿರುವ ಐವರು ಭಾರತೀಯರು ತವರಿಗೆ ಮರಳಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್.ಜೈ ಶಂಕರ್ ಗೆ ಮನವಿ ಮಾಡಿದ್ದಾರೆ.

ಮುಂಬೈ ಮೂಲದ ಅನಿಕೇತ್​​ ಎಸ್​.ಯೆನ್ಪುರೆ, ಮಂದಾರ್​ ಎಂ.ವರ್ಲಿಕರ್​, ಪಾಟ್ನಾ ಮೂಲದ ಪ್ರಣವ್​ ಎ.ತಿವಾರಿ, ದೆಹಲಿ ಮೂಲದ ನವೀನ್​ ಎಂ.ಸಿಂಗ್​ ಮತ್ತು ಚೆನ್ನೈ ಮೂಲದ ತಮೀಜ್ ಆರ್.ಸೆಲ್ವನ್ ಅವರು 2019 ರಲ್ಲಿ ಭಾರತೀಯ ಏಜೆಂಟರ ಮೂಲಕ ವ್ಯಾಪಾರಿ ನೌಕಾಪಡೆಗೆ ಸೇರಲು ಇರಾನ್​ಗೆ ಹೋಗಿದ್ದರು.

2020 ರ ಫೆಬ್ರವರಿಯಲ್ಲಿ ಒಮಾನ್​​ನ ಸಮುದ್ರದಲ್ಲಿ ಪ್ರಯಾಣಿಸುವಾಗ, ಅಜಾಗರೂಕತೆಯಿಂದ ಕಡಲತೀರದ ಸರಕು ಸಾಗಣೆ ದಂಧೆಯಲ್ಲಿ ಅಲ್ಲಿನ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಬಳಿಕ ಅವರನ್ನು 18 ತಿಂಗಳ ಕಾಲ ಜೈಲಿನಲ್ಲಿರಿಸಲಾಯಿತು. ಇದೀಗ ಪ್ರಕರಣ ಖುಲಾಸೆಗೊಂಡಿದ್ದು, ತವರಿಗೆ ಬರಲು ಪ್ರಧಾನಿ ಹಾಗೂ ವಿದೇಶಾಂಗ ಸಚಿವರ ಸಹಾಯ ಕೇಳುತ್ತಿದ್ದಾರೆ.

ವಿಷಯ ತಿಳಿದ ಯುವಕರ ಕುಟುಂಬಸ್ಥರು, ತಮ್ಮ ಮಕ್ಕಳನ್ನು ಬಿಡುಗಡೆ ಮಾಡಿಸುವಂತೆ ಹಲವಾರು ಬಾರಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.

2019 ರಲ್ಲಿ ಯುವಕರೆಲ್ಲ ಇರಾನಿನ ‘ರಾಜಿ ಮುಕ್ಕಾಂ’ ಒಡೆತನದ ಎಂ.ವಿ. ಆರ್ಟನ್ 10 ಹಡಗಿನಲ್ಲಿ ನಾವಿಕರಾಗಿ ಕಾರ್ಯ ನಿರ್ವಹಿಸಲು ತೆರಳಿದ್ದರು. ಹಡಗಿನ ಮಾಲೀಕ, ಕ್ಯಾಪ್ಟನ್ ಎಂ.ರಸೂಲ್​ ಘರೆಬಿ ಆರೇಳು ವಾರಗಳ ದೀರ್ಘ ಪ್ರಯಾಣಕ್ಕಾಗಿ ಯುವಕರನ್ನು ಕರೆದೊಯ್ದರು. 2020 ರ ಫೆಬ್ರವರಿ 20 ರಂದು ಮಧ್ಯಾಹ್ನ, ಮಸ್ಕತ್‌ನಿಂದ 140 ಕಿ.ಮೀ ದೂರದಲ್ಲಿರುವ ಎತ್ತರದ ಸಮುದ್ರಗಳಲ್ಲಿ ಹಡಗುಗಳನ್ನು ನಿಲ್ಲಿಸಲು ಕ್ಯಾಪ್ಟನ್ ಆದೇಶಿಸಿದರು. ಕೆಲವು ಗಂಟೆಗಳ ನಂತರ, ಮತ್ತೊಂದು ಹಡಗು ಬಂದು ಅಕ್ಕಿ ಚೀಲಗಳನ್ನು ಈ ಹಡಗಿಗೆ ಶಿಫ್ಟ್ ಮಾಡಿದರು. ಇದನ್ನು ಅಲ್ಲಿನ ಸಿಬ್ಬಂದಿ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು.

ಅಂತಾರಾಷ್ಟ್ರೀಯ ಕಡಲ ಕಾನೂನಿನ ಪ್ರಕಾರ, ಮಧ್ಯ ಸಮುದ್ರದಲ್ಲಿ ಸರಕು ವರ್ಗಾವಣೆ ಕಾನೂನುಬಾಹಿರವಾಗಿದೆ. ವಿಡಿಯೋವನ್ನು ಆಧರಿಸಿ ಕಸ್ಟಮ್ಸ್​ ಅಧಿಕಾರಿಗಳು ಮತ್ತು ಇರಾನ್ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ.. ಆರು ಜನ ದುರ್ಮರಣ, ದೇಹಗಳೆಲ್ಲ ಛಿದ್ರ ಛಿದ್ರ!

ABOUT THE AUTHOR

...view details