ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಶಹದಾರದ ಸೀಮಾಪುರಿ ಪ್ರದೇಶದಲ್ಲಿನ ಮನೆವೊಂದರಲ್ಲಿ ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳ ಮೃತದೇಹ ಪತ್ತೆಯಾಗಿವೆ. ಘಟನಾ ಸ್ಥಳಕ್ಕೆ ತೆರಳಿರುವ ಪೊಲೀಸರು ಈಗಾಗಲೇ ಎಲ್ಲರ ಮೃತದೇಹ ವಶಕ್ಕೆ ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.
ವಿಷಕಾರಿ ಹೊಗೆ ಸೇವನೆ: ಮನೆಯಲ್ಲಿ ತಾಯಿ, ನಾಲ್ವರು ಮಕ್ಕಳು ಶವವಾಗಿ ಪತ್ತೆ! - ತಾಯಿ ಜೊತೆ ನಾಲ್ವರು ಮಕ್ಕಳ ಮೃತದೇಹ ಪತ್ತೆ
ವಿಷಕಾರಿ ಹೊಗೆ ಸೇವನೆಯಿಂದಾಗಿ 33 ವರ್ಷದ ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
Five bodies found in one home in delhi
ಇದನ್ನೂ ಓದಿರಿ:ಸಾಲ ತೀರಿಸದ್ದಕ್ಕೆ ರೈತರ ಜಮೀನು ಹರಾಜು ಹಾಕಿದ ಬ್ಯಾಂಕ್ ಸಿಬ್ಬಂದಿ.. ಮನವಿಗೂ ಸಿಗದ ಮನ್ನಣೆ
ಲಭ್ಯವಾಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ವಿಷಕಾರಿ ಹೊಗೆ ಸೇವನೆ ಮಾಡಿ ಎಲ್ಲರೂ ಮನೆಯಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಆದರೆ, ಖಚಿತ ಕಾರಣ ಪಡೆದುಕೊಳ್ಳುವ ಉದ್ದೇಶದಿಂದ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.