ಹೈದರಾಬಾದ್: ಇಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಪ್ರಕೃತಿ ಕೌತುಕ ವೀಕ್ಷಣೆಗಾಗಿ ಜನರು ಕಾದು ಕುಳಿತಿದ್ದಾರೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. 'ರಿಂಗ್ ಆಫ್ ಫೈರ್' ಅಥವಾ 'ಕಂಕಣ ಸೂರ್ಯಗ್ರಹಣ' ಇದಾಗಿದ್ದು, ಬೆಂಕಿಯ ಉಂಗುರದಂತೆ ರವಿ ಗೋಚರಿಸಲಿದ್ದಾನೆ. ಮಧ್ಯಾಹ್ನ 1: 42ಗೆ ಗ್ರಹಣ ಆರಂಭ(ಸ್ಪರ್ಶ) ವಾಗಲಿದ್ದು, ಸಂಜೆ 6.41ಕ್ಕೆ ಕೊನೆಗೊಳ್ಳಲಿದೆ.(ಮೋಕ್ಷಕಾಲ)
ಎಲ್ಲೆಲ್ಲಿ ಗೋಚರ?
ಉತ್ತರ ಅಮೆರಿಕ, ಕೆನಡಾ, ಯುರೋಪ್ ಮತ್ತು ರಷ್ಯಾದ ಕೆಲ ಭಾಗಗಳಲ್ಲಿ ಪೂರ್ಣ ಗ್ರಹಣವು ಗೋಚರವಾಗಲಿದೆ. ಇಲ್ಲಿ ಜನರು ರಿಂಗ್ ಆಫ್ ಫೈರ್ ಅನ್ನು ನೋಡಲು ಸಾಧ್ಯವಾಗುತ್ತದೆ. ಆದರೆ ಭಾರತದ ಲಡಾಖ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಮಾತ್ರ ಭಾಗಶಃ ಗ್ರಹಣ ಕಾಣಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.