ನಾಗ್ಪುರ್(ಮಹಾರಾಷ್ಟ್ರ): ದೆಹಲಿಯಲ್ಲಿ ಲಾಕ್ಡೌನ್ ಘೋಷಣೆ ಮಾಡಿರುವ ಕಾರಣ ಅಗತ್ಯ ವಸ್ತುಗಳ ತೊಂದರೆ ಉಂಟಾಗಿದೆ. ಇದೇ ಕಾರಣಕ್ಕಾಗಿ ಇದೀಗ ಮಹಾರಾಷ್ಟ್ರದ ನಾಗ್ಪುರ್ದಿಂದ 45,000 ಲೀಟರ್ ಹಾಲು ರವಾನೆ ಮಾಡಲಾಗಿದೆ.
ಫಸ್ಟ್ ಮಿಲ್ಕ್ ಟ್ರೈನ್: 45,000 ಲೀಟರ್ ಹಾಲು ಹೊತ್ತು ನಾಗ್ಪುರದಿಂದ ದೆಹಲಿಯತ್ತ ಪ್ರಯಾಣ
ಮಹಾರಾಷ್ಟ್ರದ ನಾಗ್ಪುರ್ದಿಂದ ದೆಹಲಿಯತ್ತ ಹಾಲು ಹೊತ್ತ ರೈಲು ಪ್ರಯಾಣ ಬೆಳೆಸಿದ್ದು, ಇದೇ ಮೊದಲ ಬಾರಿಗೆ ಟ್ರೈನ್ವೊಂದು ಹಾಲು ತುಂಬಿಕೊಂಡು ಹೋಗುತ್ತಿದೆ.
First milk train
ನಾಗ್ಪುರ್ ರೈಲ್ವೆ ನಿಲ್ದಾಣದಿಂದ ದೆಹಲಿಯ ಹಜರತ್ ನಿಜಾಮುದ್ದೀನ್ ಸ್ಟೇಷನ್ಗೆ ಈ ರೈಲು ಪ್ರಯಾಣ ಬೆಳೆಸಿದ್ದು, ದೇಶದ ಮೊದಲ ಹಾಲು ಹೊತ್ತು ಸಾಗುತ್ತಿರುವ ರೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ದೇಶದಲ್ಲಿ ಕಳೆದ ಕೆಲ ದಿನಗಳಿಂದ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿರುವ ಕಾರಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಲಾಕ್ಡೌನ್ ಸಹ ಘೋಷಣೆ ಮಾಡಲಾಗಿದೆ. ಇದೇ ಕಾರಣದಿಂದಾಗಿ ಇದೀಗ ಅಗತ್ಯ ವಸ್ತುಗಳ ಖರೀದಿಗೆ ಜನರು ತೊಂದರೆ ಅನುಭವಿಸುವಂತಾಗಿದೆ.