ನವಾಡ, ಬಿಹಾರ: ಜಿಲ್ಲೆಯಲ್ಲಿ ಸೈಬರ್ ಅಪರಾಧಿಗಳ ಗುಂಪನ್ನು ಹಿಡಿಯಲು ಬಂದ ತೆಲಂಗಾಣ ಸೈಬರ್ ಕ್ರೈಂ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದೆ. ಅಪರಾಧಿಗಳು ಈ ಕೃತ್ಯದ ನಡುವೆಯೂ ಪೊಲೀಸರು ಗ್ಯಾಂಗ್‌ನ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಅಪರಾಧಿಗಳಿಂದ 1.23 ಕೋಟಿ ರೂಪಾಯಿ ನಗದು ಹಾಗೂ ದುಬಾರಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಿಹಾರದ ನವಾಡ ಜಿಲ್ಲೆಯ ಯುವಕರು ಗುಂಪು ಕಟ್ಟಿಕೊಂಡು ಹಲವು ಭಾಗಗಳಲ್ಲಿ ಸೈಬರ್ ವಂಚನೆ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನ ಹಾಗೂ ದುಬಾರಿ ಕಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಡೀಲರ್ ಶಿಪ್ ಕೊಡಿಸುವುದಾಗಿ ಅಮಾಯಕರನ್ನು ನಂಬಿಸುತ್ತಿದ್ದಾರೆ. ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರು ಮತ್ತು ನವಡಾ ಜಿಲ್ಲಾ ಪೊಲೀಸರು ಅಪರಾಧಿಗಳನ್ನು ತಡೆಯಲು ಜಂಟಿ ದಾಳಿ ನಡೆಸಿದರು.
ತೆಲಂಗಾಣ ಪೊಲೀಸರು ಮೂರು ದಿನಗಳ ಹಿಂದೆ ಮಧ್ಯರಾತ್ರಿ ಭವಾನಿ ಬಿಘಾ ಗ್ರಾಮಕ್ಕೆ ಆಗಮಿಸಿದ್ದರು. ಶನಿವಾರ ಬೆಳಗ್ಗೆ ದಾಳಿಗೆ ಸಿದ್ಧತೆ ನಡೆಸಿದ್ದರು. ಕಟ್ಟಡದ ಮೇಲ್ಛಾವಣಿಯಿಂದ ಇವರ ಚಲನವಲನಗಳನ್ನು ಗಮನಿಸಿದ ಪ್ರಮುಖ ಆರೋಪಿ ಮಿಥಿಲೇಶ್ ಪ್ರಸಾದ್ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ನಂತರ ಪೊಲೀಸರು ದಾಳಿ ನಡೆಸಿ ಭೂತಲಿರಾಮ್, ಮಹೇಶಕುಮಾರ್, ಸುರೇಂದ್ರಮಹಾತೋ, ಮತ್ತು ಜಿತೇಂದ್ರಕುಮಾರ್ನ್ನು ಬಂಧಿಸಿದರು.