ಕರ್ನಾಟಕ

karnataka

ETV Bharat / bharat

ಬೆಸ್ಟ್ ಬಿರಿಯಾನಿ ರೆಸ್ಟೊರೆಂಟ್‌ಗೆ ಬೆಂಕಿ: ಒಬ್ಬ ಸಜೀವ ದಹನ, ಮತ್ತೊಬ್ಬನಿಗೆ ಗಂಭೀರ ಗಾಯ - ETV Bharath Kannada

ಉತ್ತರ ಪ್ರದೇಶದ ಬೆಸ್ಟ್ ಬಿರಿಯಾನಿ ರೆಸ್ಟೋರೆಂಟ್‌ನಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿದ್ದು, ಒಬ್ಬ ಮೃತಪಟ್ಟಿದ್ದು, ಮತ್ತೋರ್ವನಿಗೆ ಗಾಯಗಳಾಗಿದೆ.

Etv Bharat
ಬೆಸ್ಟ್ ಬಿರಿಯಾನಿ ರೆಸ್ಟೊರೆಂಟ್‌ಗೆ ಬೆಂಕಿ

By

Published : Dec 9, 2022, 8:20 AM IST

ಲಖನೌ(ಉತ್ತರ ಪ್ರದೇಶ):ಇಲ್ಲಿನ ಚಾರ್‌ಬಾಗ್‌ನಲ್ಲಿರುವ ಬೆಸ್ಟ್ ಬಿರಿಯಾನಿ ರೆಸ್ಟೋರೆಂಟ್‌ನಲ್ಲಿ ಗುರುವಾರ ರಾತ್ರಿ 9.30 ರ ಸುಮಾರಿಗೆ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಒಬ್ಬ ಮೃತ ಪಟ್ಟಿದ್ದು, ಮತ್ತೊಬ್ಬ ಯುವಕನಿಗೆ ಗಂಭೀರ ಗಾಯಗಳಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ನಾಸಿಕ್ ನಿವಾಸಿ ಪ್ರಕಾಶ್ ಸುಧಾಕರ್ ದಾತ್ರೆ (30) ಮೃತ ಪಟ್ಟಿದ್ದು, ಸಹೋದ್ಯೋಗಿ ಅನೀಸ್ ಶೇಖ್​ಗೆ 40 ರಷ್ಟು ಸುಟ್ಟ ಗಾಯಗಳಾಗಿವೆ. ಎಲ್‌ಪಿಜಿ ಸಿಲಿಂಡರ್ ಸೋರಿಕೆಯಿಂದ ಈ ಅವಘಡ ಸಂಭವಿಸಿದೆ. ಹೊಟೇಲ್‌ನಲ್ಲಿ ಅಳವಡಿಸಿದ್ದ ಉಪಕರಣದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೇಗ ಮಾಹಿತಿ ಹೋದ ಕಾರಣ ಕೇವಲ ಒಂದು ಗಂಟೆಯಲ್ಲಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ನಿರಂತರವಾಗಿ ಅನಿಲ ಸೋರಿಕೆ: ಹಲವು ದಿನಗಳಿಂದ ಅನಿಲ ಸೋರಿಕೆಯಿಂದ ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದವರು ತಿಳಿಸಿದ್ದರು. ಈ ಬಗ್ಗೆ ಅಕ್ಕಪಕ್ಕದ ಅಂಗಡಿಯವರು ದೂರು ಕೊಟ್ಟಾಗ ಹೊಟೇಲ್​ ಮಾಲೀಕ ಬಾಯಿ ಮುಚ್ಚಿಸಿದ್ದರು.

ಬೆಸ್ಟ್ ಬಿರಿಯಾನಿ ರೆಸ್ಟೊರೆಂಟ್‌ಗೆ ಬೆಂಕಿ

ರೆಸ್ಟೋರೆಂಟ್‌ನ ಅಡುಗೆ ಕೋಣೆಯನ್ನು ಹೊರಗೆ ನಿರ್ಮಿಸಲಾಗಿದೆ. ಅಲ್ಲಿಗೆ ಬರುತ್ತಿದ್ದ ಗ್ರಾಹಕರು ಒಳಗೆ ಕುಳಿತು ಊಟ ಮಾಡುತ್ತಿದ್ದರು. ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ಹತ್ತಿಕೊಂಡ ಕೂಡಲೇ ಬಾಗಿಲಿಗೆ ವ್ಯಾಪಿಸಿದೆ. ಹೀಗಾಗಿ ಒಳಗಿದ್ದವರಿಗೆ ಹೊರಬರಲಾಗದೇ ಸಾವು ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ:ಹಾಸನ: ಪತ್ನಿ ಕೊಲೆಗೈದ ಆರೋಪಿ ಪತಿಯ ಬಂಧನ


ABOUT THE AUTHOR

...view details