ಕರ್ನಾಟಕ

karnataka

ETV Bharat / bharat

ಧಗಧಗನೇ ಹೊತ್ತಿ ಉರಿದ ಸರ್ಕಾರಿ ಬಸ್​.. 30 ಜೀವಗಳು ಉಳಿಸಿದ ಚಾಲಕ! ವಿಡಿಯೋ..

ತಾಂತ್ರಿಕ ದೋಷದಿಂದಾಗಿ ಸರ್ಕಾರಿ ಬಸ್​ವೊಂದು ಧಗಧಗನೇ ಹೊತ್ತಿ ಉರಿದಿರುವ ಘಟನೆ ತೆಲಂಗಾಣದ ಜನಗಾಮ ಜಿಲ್ಲೆಯಲ್ಲಿ ನಡೆದಿದೆ.

fire catch to super luxury bus, fire catch to super luxury bus at Janagama, janagama crime news, ಧಗಧಗನೇ ಹೊತ್ತಿ ಉರಿದ ಸರ್ಕಾರಿ ಬಸ್, ಜನಗಾಮದಲ್ಲಿ ಧಗಧಗನೇ ಹೊತ್ತಿ ಉರಿದ ಸರ್ಕಾರಿ ಬಸ್, ಜನಗಾಮ ಅಪರಾಧ ಸುದ್ದಿ,
ಧಗಧಗನೇ ಹೊತ್ತಿ ಉರಿದ ಸರ್ಕಾರಿ ಬಸ್

By

Published : Jul 24, 2021, 1:45 PM IST

ಜನಗಾಮ:ವರಂಗಲ್​ 1 ಡಿಪೋಗೆ ಸೇರಿದ್ದ ಸೂಪರ್​ ಲಗ್ಜರಿ ಬಸ್​ವೊಂದು ನಡು ರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಘಟನೆ ಇಲ್ಲಿನ ಪೊಲೀಸ್​ ಠಾಣೆಯ ಘನ್​ಪೂರ್​ ಬಳಿ ಶುಕ್ರವಾರ ಸಂಭವಿಸಿದೆ.

ಧಗಧಗನೇ ಹೊತ್ತಿ ಉರಿದ ಸರ್ಕಾರಿ ಬಸ್

ಹನ್ಮಕೊಂಡದಿಂದ ಹೈದರಾಬಾದ್​ಗೆ ಸೂಪರ್​ ಲಗ್ಜರಿ ಬಸ್​ನಲ್ಲಿ 30 ಪ್ರಯಾಣಿಕರು ತೆರಳುತ್ತಿದ್ದರು. ಮಧ್ಯಾಹ್ನ ಜನಗಾದ ಸ್ಟೇಷನ್​ಘನ್​ಪೂರ್​ ಬಳಿ ಬರುತ್ತಿದ್ದಂತೆ ಇಂಜಿನ್​​​​ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಬಸ್​ ನಿಲ್ಲಿಸಿದ ಚಾಲಕ ವೆಂಕಟೇಶ್​ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.

ಪ್ರಯಾಣಿಕರನ್ನು ಕೆಳಗಿಳಿಸುತ್ತಿದ್ದಂತೆ ಬಸ್​ ತುಂಬ ಬೆಂಕಿ ಆವರಿಸಿದೆ. ನಡುರಸ್ತೆಯಲ್ಲಿ ಎಲ್ಲರೂ ನೋಡು ನೋಡುತ್ತಿದ್ದಂತೆ ಬಸ್​ ಬೆಂಕಿಗಾಹುತಿಯಾಯಿತು. ಸ್ಥಳೀಯ ಗ್ರಾಮ ಪಂಚಾಯ್ತಿ ಸಿಬ್ಬಂದಿ ಟ್ರ್ಯಾಕ್ಟರ್​ ಮೂಲಕ ನೀರಿನ ಟ್ಯಾಂಕ್​ ತಂದು ಬಸ್​ನ ಬೆಂಕಿ ನಂದಿಸಿದರು.

ಇಂಜಿನ್​ನಲ್ಲಿ ಶಾಟ್​ ಸರ್ಕ್ಯೂಟ್​ ಆದ ಕಾರಣ ಈ ಘಟನೆ ನಡೆದಿದೆ ಎಂದು ವರಂಗಲ್​ ಅರ್ಬನ್​ ಜಿಲ್ಲಾ ಡಿವಿಎಂ ಶ್ರೀನಿವಾಸರಾವು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಾಯಕರೊಬ್ಬರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ABOUT THE AUTHOR

...view details